Asianet Suvarna News Asianet Suvarna News

ವಲಸೆ ಕಾರ್ಮಿಕರ ಮುಂದಿಟ್ಟು ರಾಜಕೀಯದಾಟ ನಿಲ್ಲಿಸಿ; ಕಾಂಗ್ರೆಸ್‌ಗೆ ಯೋಗಿ ಆದಿತ್ಯನಾಥ್ ಎಚ್ಚರಿಕೆ!

ವಲಸೆ ಕಾರ್ಮಿಕರ ವಿಚಾರದಲ್ಲಿ ಉತ್ತರ ಪ್ರದೇಶ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರ ನಡುವೆ ಸಮರ ತಾರಕಕ್ಕೇರಿದೆ. ವಲಸೆ ಕಾರ್ಮಿಕರಿಗೆ 1000 ಬಸ್ ವ್ಯವಸ್ಥೆ ಮಾಡಿದೆ ಎಂದ ಕಾಂಗ್ರೆಸ್‌ ಸ್ಕೂಟರ್, ಬೈಕ್, ರಿಕ್ಷಾ ವಾಹನಗಳ ನಂಬರ್ ಸರ್ಕಾರಕ್ಕೆ ನೀಡಿದೆ. ಈ ಕುರಿತು ಯೋಗಿ ಅದಿತ್ಯನಾಥ್ ತಿರುಗೇಟು ನೀಡಿದ್ದಾರೆ.

Angry Yogi Adityanath warn congress political game over migrant workers
Author
Bengaluru, First Published May 21, 2020, 6:28 PM IST
  • Facebook
  • Twitter
  • Whatsapp

ಉತ್ತರ ಪ್ರದೇಶ(ಮೇ.21): ಕೊರೋನಾ ವೈರಸ್ ಹಾಗೂ ನಿರ್ವಹಣೆ ಕುರಿತು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರ ಇದೀಗ ಮತ್ತೆ ಟೀಕೆಗಳ ಸುರಿಮಳೆಗೈದಿದ್ದಾರೆ. ಪ್ರಿಯಾಂಕ ಪತ್ರಕ್ಕೆ ಸ್ಪಂದಿಸಿದ್ದ ಉತ್ತರ ಪ್ರದೇಶ ಸರ್ಕಾರ,  ಇದೀಗ ಕಾಂಗ್ರೆಸ್ ಎಡವಟ್ಟಿನ ಸರಮಾಲೆಯನ್ನು ಬಿಚ್ಚಿಟ್ಟಿದೆ.  ಇತ್ತ ಯಪಿ ಸರ್ಕಾರದ ವಿರುದ್ಧ ಸರಣಿ ಆರೋಪಗಳನ್ನು ಪ್ರಿಯಾಂಕ ಗಾಂಧಿ ವಾದ್ರ ಮಾಡಿದ್ದಾರೆ. 

ಪ್ರಿಯಾಂಕಾ ಕೊಟ್ಟ ಸಾವಿರದಲ್ಲಿ 297 ಬಸ್‌ಗಳಿಗೆ ಫಿಟ್ನೆಸ್‌ ಸರ್ಟಿಫಿಕೆಟೇ ಇಲ್ಲ!

ವಲಸೆ ಕಾರ್ಮಿಕರಿಗೆ ಕಾಂಗ್ರೆಸ್ ವ್ಯವಸ್ಥೆ ಮಾಡಿದ 1000  ಬಸ್‌ಗಳಲ್ಲಿ ಬಹುತೇಕ ವಾಹನಗಳು ಕಾರು, ಸ್ಕೂಟರ್ ಎಂದು ಯೋಗಿ ಆದಿತ್ಯನಾಥ್ ಸರ್ಕಾರ ವರದಿ ನೀಡಿತ್ತು.  ಈ ಆರೋಪನ್ನು ಅಲ್ಲಗೆಳೆದಿರುವ ಪ್ರಿಯಾಂಕಾ ಗಾಂಧಿ ಮತ್ತೆ ಯೋಗಿ ವಿರುದ್ದ ಆರೋಪ ಮಾಡಿದ್ದಾರೆ. 1000 ಬಸ್ ಪರಿಶೀಲಿಸಿ ಅನುಮತಿ ನೀಡಿ. ಸರ್ಕಾರ ವಲಸೆ ಕಾರ್ಮಿಕರನ್ನು ಮರೆತಿದೆ. ಕೊನೆ ಪಕ್ಷ, ಕಾಂಗ್ರೆಸ್ ವ್ಯವಸ್ಥೆ ಮಾಡಿರುವ 1000 ಬಸ್ ಮೇಲೆ ಬಿಜೆಪಿ ಧ್ವಜ ಹಾರಿಸಿ, ಆದರೆ ವಲಸೆ ಕಾರ್ಮಿಕರನ್ನು ತವರಿಗೆ ಕರೆ ತರಲು ಅನುಮತಿ ನೀಡಿ ಎಂದು ಪ್ರಿಯಾಂಕ ಗಾಂಧಿ ಯೋಗಿ ಆದಿತ್ಯನಾಥ್ ವಿರುದ್ಧ ವ್ಯಂಗ್ಯವಾಗಿ ಹೇಳಿದ್ದರು.

ಕಾಂಗ್ರೆಸ್‌ ಕೊಟ್ಟ 1 ಸಾವಿರ ಬಸ್‌ ಪಟ್ಟಿಯಲ್ಲಿ ದ್ವಿಚಕ್ರ ವಾಹನಗಳೇ ಹೆಚ್ಚು!

ಈ ರಾಜಕೀಯ ಬೆಳವಣಿಗೆಗೆ ನಡುವೆ, ಕಾಂಗ್ರೆಸ್ ವ್ಯವಸ್ಥೆ ಮಾಡಿರುವ ಬಸ್‌ಗಳಲ್ಲಿ ರಾಜಸ್ಥಾನದಿಂದ ಮಧ್ಯಪ್ರದೇಶಕ್ಕೆ ವಲಸೆ ಕಾರ್ಮಿಕರನ್ನು ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ.  ಉತ್ತರ ಪ್ರದೇಶ ಗಡಿ ಭಾಗದಲ್ಲಿ ಬಸ್‌ಗಳನ್ನು ತಡೆದು ನಿಲ್ಲಿಸಲಾಗಿದೆ ಎಂದು  ರಾಜಸ್ಥಾನ ಪೊಲೀಸ್ ಅದೀಕೃತ ಹೇಳಿಕೆ ನೀಡಿತ್ತು. ಆರಂಭದಲ್ಲಿ ಕಾಂಗ್ರೆಸ್ ಬಸ್ ವ್ಯವಸ್ಥೆಯನ್ನು ಒಪ್ಪಿಕೊಂಡ ಸಿಎಂ ಯೋಗಿ ಇದೀಗ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕಾಂಗ್ರೆಸ್ ಪಾರ್ಟಿ, ಇತರ ರಾಜ್ಯಗಳಲ್ಲಿರುವ 92,000 ವಲಸೆ ಕಾರ್ಮಿಕರನ್ನು ತವರಿಗೆ ತರುವ ಬದುಹೊಡ್ಡ ಕಾರ್ಯಕ್ಕೆ ಮುಂದಾಗಿತ್ತು. ಆದರೆ ಯುಪಿ ಸರ್ಕಾರದ ಪ್ರತಿಷ್ಠೆಯಿಂದ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಪ್ರಿಯಾಂಕ ಮಾತಿಗೆ ಯೋಗಿ ಮಣೆ,  ಇದಲ್ಲವೆ ನಿಜವಾದ  ಕಾಳಜಿ!

ಕಾಂಗ್ರೆಸ್ ಆಯೋಜಿಸಿದ ಬಸ್ ಹಾಗೂ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಅಧಿಕಾರಿಗಳು ಪಟ್ಟಿ ಮಾಡಿದರೆ, ಇತ್ತ ಪ್ರಿಯಾಂಕ ಗಾಂಧಿ ಸತತ ಆರೋಪಗಳ ಮೂಲಕ ಕೆಂಡ ಕಾರುತ್ತಿದ್ದಾರೆ.   1000 ಬಸ್ ಆಯೋಜನೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಅನ್ನೋದು ಇದೀಗ ಗೊಂದಲದ ಗೂಡಾಗಿದೆ.  

ಪ್ರಿಯಾಂಕ ಗಾಂಧಿ ಉತ್ತರ ಪ್ರದೇಶದ ನಾಯಕಿಯಾಗಿ ಗುರುತಿಸಿಕೊಳ್ಳುವ ಹರಸಾಹಸದಲ್ಲಿದ್ದಾರೆ.  ವಲಸೆ ಕಾರ್ಮಿಕರ ಮೂಲಕ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಬಲಪಡಿಸಿಕೊಳ್ಳುವ ಯತ್ನದಲ್ಲಿದೆ. 2022ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಪ್ಲಾನ್ ಮಾಡಿರುವ ಪ್ರಿಯಾಂಕ ಗಾಂಧಿ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಇತ್ತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಲಸೆ ಕಾರ್ಮಿಕರ ಮುಂದಿಟ್ಟು ರಾಜಕೀಯ ಮಾಡುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು ಎಂದಿದ್ದಾರೆ. ಉತ್ತರ ಪ್ರದೇಶ ಸರ್ಕಾರ 300 ರೈಲು ವ್ಯವಸ್ಥೆ ಮಾಡಿದೆ. ಆದರೆ ಕಾಂಗ್ರೆಸ್ ನೇತೃತ್ವದ ಚತ್ತೀಸ್‌ಘಡ ಸರ್ಕಾರ ಕೇವಲ 7 ರೈಲು ವ್ಯವಸ್ಥೆ ಮಾಡಿದೆ ಎಂದಿದ್ದಾರೆ.

ಎಲ್ಲಾ ವಲಸೆ ಕಾರ್ಮಿಕರು ಭಾರತೀಯರೇ. ಹೀಗಾಗಿ ಇಲ್ಲಿ ರಾಜಕೀಯ ಸರಿಯಲ್ಲ. ಆದರೆ ಕಾಂಗ್ರೆಸ್ ರಾಜಕೀಯದಾಟ ಶುರುಮಾಡಿದೆ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ. 

Follow Us:
Download App:
  • android
  • ios