ಲಕ್ನೋ(ಮೇ.19): ಉತ್ತರ ಪ್ರದೆಶದಲ್ಲಿ ಕಾಂಗ್ರೆಸ್ ಸರ್ಕಾರ ಕಾರ್ಮಿಕರಿಗಾಗಿ ಒಂದು ಸಾವಿರ ಬಸ್ ವ್ಯವಸ್ಥೆ ಮಾಡುವುದಾಗಿ ಹೇಳಿದ್ದು, ಯೋಗಿ ಸರ್ಕಾರ ಇದಕ್ಕೆ ಸಮ್ಮತಿ ನೀಡಿತ್ತು. ಆದರೀಗ ಕಾಂಗ್ರೆಸ್ ಬಸ್‌ಗಳ ಬದಲು ಬೈಕ್ ಹಾಗೂ ತ್ರಿಚಕ್ರ ವಾಹನಗಳ ಪಟ್ಟಿ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

ಹೌದು ವಲಸೆ ಕಾರ್ಮಿಕರು ಮನೆ ತಲುಪಲು 1,000 ಬಸ್ಸುಗಳನ್ನು ಕಾಂಗ್ರೆಸ್ ವತಿಯಿಂದ ಓಡಿಸಲು ಅನುಮತಿ ಕೋರಿ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ಯೋಗಿ ಸರ್ಕಾರ, ಬಸ್ಸುಗಳ ನಂಬರ್, ಚಾಲಕರ ಹೆಸರುಗಳ ಪಟ್ಟಿ ಕೊಡುವಂತೆ ಕಾಂಗ್ರೆಸ್‌ಗೆ ತಿಳಿಸಿತ್ತು. ಇದರ ಅನ್ವಯ ಕಾಂಗ್ರೆಸ್ ಸರ್ಕಾರಕ್ಕೆ ಮಾಹಿತಿ ರವಾನಿಸಿದೆ. ಆದರೀಗ ಹೆಚ್ಚಿನ ತಪಾಸಣೆ ನಡೆಸಿದ ಯೋಗಿ ಸರ್ಕಾರ ಕಾಂಗ್ರೆಸ್ ನೀಡಿದ ನೋಂದಾವಣೆ ಸಂಖ್ಯೆಗಳಲ್ಲಿ ಬಹುತೇಕ ದ್ವಿ ಹಾಗೂ ತ್ರಿಚಕ್ರ ವಾಹನಗಳೇ ಇವೆ ಎಂದು ತಿಳಿಸಿದೆ.

ಪ್ರಿಯಾಂಕಾ ಮಾತಿಗೆ ಯೋಗಿ ಮಣೆ, ಇದಲ್ಲವೆ ನಿಜವಾದ ಕಾಳಜಿ!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರವರ ಸಲಹೆಗಾರ ಈ ಕುರಿತು ಪ್ರತಿಕ್ರಿಯಿಸಿದ್ದು, ವಲಸೆ ಕಾರ್ಮಿಕರಿಗಾಗಿ ಕಾಂಗ್ರೆಸ್ ಸರ್ಕಾರ ಆಯೋಜಿಸಿರುವ ವಾಹನಗಳಲ್ಲಿ ಬಹುತೇಕ ಬೈಕ್, ಕಾರು ಹಾಗೂ ಆಟೋ ರಿಕ್ಷಾಗಳಿವೆ ಎಂದಿದ್ದಾರೆ.

ಕಳೆದ ಕೆಲ ದಿನಗಳಿಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನಡುವೆ ವಲಸೆ ಕಾರ್ಮಿಕರ ಸಂಬಂಧ ಮಾತಿನ ಜಟಾಪಟಿ ನಡೆಯುತ್ತಿದೆ. ಆದರೆ ಸೋಮವಾರ ಈ ವಾಕ್ಸಮರಕ್ಕೆ ರೋಚಕ ತಿರುವುದು ಸಿಕ್ಕಿದ್ದು, ಕಾಂಗ್ರೆಸ್ ಕಾರ್ಮಿಕರನ್ನು ತಮ್ಮ ತವರು ನಾಡಿಗೆ ತಲುಪಿಸಲು ಆಯೋಜಿಸಿದ್ದೇವೆಂದ ಬಸ್‌ಗಳ ಓಡಾಟಕ್ಕೆ ಸಿಎಂ ಅನುಮತಿ ನೀಡಿದ್ದರು. ಆದರೆ ಅದಕ್ಕೂ ಮುನ್ನ ಪಟ್ಟಿ ನೀಡಲು ತಿಳಿಸಿದ್ದರೆಂಬುವುದು ಉಲ್ಲೇಖನೀಯ.