ಲಕ್ನೋ(ಮೇ 20) ಪ್ರಿಯಾಂಕಾ 1000 ಬಸ್ ಗಳನ್ನು ವಲಸೆ ಕಾರ್ಮಿಕರಿಗೆ ಬಿಡುತ್ತೇನೆ ಇದಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದು ಕೇಳಿಕೊಂಡಿದ್ದರು. ಇದಕ್ಕೆ ಸಿಎಂ ಯೋಗಿ ಸಹ ಸ್ಪಂದಿಸಿದ್ದರು. 

ಆದರೆ ಅಸಲಿ ಸಂಗತಿಗಳೇ ಬೇರೆ. ಪ್ರಿಯಾಂಕಾ ಕೊಟ್ಟ ಲಿಸ್ಟ್ ನಲ್ಲಿ ಆಟೋಗಳು, ದ್ವಿಚಕ್ರ ವಾಹನದ ಸಂಖ್ಯೆಯೂ ಸೇರಿತ್ತು ಎಂಬ ಮಾಹಿತಿ ಬಹಿರಂಗವಾಗಿತ್ತು. ಈಗ ಮತ್ತೊಂದು ಸುದ್ದಿಯೂ ಬಂದಿದೆ.

ಪ್ರಿಯಾಂಕಾ ಹೇಳಿರುವ 1000 ಬಸ್ ಗಳು ಸಮಸ್ಯೆಗಳ ತಾಣ.  ರಾಜಸ್ಥಾನ ಪಾಸಿಂಗ್ ನ 297 ಬಸ್ ಗಳಿಗೆ ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲ. 98 ಮೂರು ಚಕ್ರದ ವಾಹನಗಳು, ಮೂರು ದ್ವಿಷಕ್ರ ವಾಹನಗಳು, 68 ಕಾರು ಮತ್ತು ಆಂಬುಲೆನ್ಸ್ ಗಳು ಇದರಲ್ಲಿ ಸೇರಿವೆ ಎಂದು ಉತ್ತರ ಪ್ರದೇಶ ಡಿಸಿರಂ ದಿನೇಶ್ ಶರ್ಮಾ ತಿಳಿಸಿದ್ದಾರೆ.

ಪ್ರಿಯಾಂಕಾ ಮಾತಿಗೆ ಯೋಗಿ ಮಣೆ.. ಒಳ್ಳೆ ಕೆಲಸಕ್ಕೆ ಸ್ವಾಗತ!

ಜನರ ಸಹಾಯಕ್ಕೆ ಯಾರೇ ನಿಂತರೂ ಅದನ್ನು ಸ್ವಾಗತ ಮಾಡಬೇಕು ಎಂದು ರಾಜಸ್ಥಾನ ಡಿಸಿಎಂ ಸಚಿನ್ ಪೈಲಟ್ ಹೇಳಿದ್ದಕ್ಕೂ ಟಾಂಗ್ ನೀಡಿದ್ದಾರೆ.   ವಲಸೆ ಕಾರ್ಮಿಕರು ಮನೆ ತಲುಪಲು 1,000 ಬಸ್ಸುಗಳನ್ನು ಕಾಂಗ್ರೆಸ್ ವತಿಯಿಂದ ಓಡಿಸಲು ಅನುಮತಿ ಕೋರಿ ಪ್ರಿಯಾಂಕಾ ಗಾಂಧಿ ವಾದ್ರಾ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು.

ಯೋಗಿ ಆದಿತ್ಯನಾಥ್‌ಗೆ ಪ್ರಿಯಾಂಕ ಗಾಂಧಿ  ವಾದ್ರಾ ಅವರಿಗೆ ಪತ್ರ ಬರೆದು ವಿಚಾರ ತಿಳಿಸಿದ್ದಾರೆ.  ವಲಸೆ ಕಾರ್ಮಿಕರಿಗಾಗಿ ಕಾಂಗ್ರೆಸ್ ವತಿಯಿಂದ ಬಸ್ಸುಗಳನ್ನು ಓಡಿಸಲು ಅನುಮತಿ ನೀಡುವಂತೆ ಕೋರಿ ಪ್ರಿಯಾಂಕಾ ಗಾಂಧಿ ವಾದ್ರಾ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದರು. ಬಾಡಿಗೆ ಪಡೆದಿರುವ ಬಸ್ಸುಗಳ ವಿಡಿಯೋ ಕೂಡ ಪೋಸ್ಟ್ ಮಾಡಿದ್ದರು.