ಹಾವಿನ ಜೊತೆ ಆಟ ಸುಲಭವಲ್ಲ, ಸಾವನ್ನು ವೆಲ್‌ಕಮ್ ಮಾಡಿಕೊಳ್ಳಬೇಡಿ!
ಹಾವಿನ ಜೊತೆ ಸರಸ ಚಟ್ಟಕ್ಕೆ ದಾರಿ ಮಾಡಿಕೊಡುತ್ತದೆ. ಈ ವಿಷ್ಯ ಈ ಹುಡುಗರಿಗೆ ತಿಳಿದಂತಿಲ್ಲ. ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡ ಹುಡುಗ್ರ ವಿಡಿಯೋ ಜನರಿಗೆ ನಗು ಜೊತೆ ಭಯ ಹುಟ್ಟಿಸಿದೆ.
ಕ್ರೂರ ಪ್ರಾಣಿಗಳ ಜೊತೆ ತಮಾಷೆ ಎಂದಿಗೂ ಸಲ್ಲದು. ಅದ್ರಲ್ಲಿ ಹಾವು ಕೂಡ ಸೇರಿದೆ. ಮಳೆಗಾಲದಲ್ಲಿ ಹಾವು ಕಾಣಸಿಗೋದು ಹೆಚ್ಚು. ಸ್ವಲ್ಪ ಬಿಸಿಲು ಬಂದ್ರೂ ಬಿಲದಿಂದ ಏಳುವ ಹಾವುಗಳು ರಸ್ತೆ ಮೇಲೆ ಕಾಣ ಸಿಗ್ತವೆ. ಹಳ್ಳಿಗಳಲ್ಲಿ ಈ ಹಾವಿನ ಹಾವಳಿ ಮಳೆಗಾಲದಲ್ಲಿ ಹೆಚ್ಚಿರುತ್ತದೆ.
ಈಗಿನ ದಿನಗಳಲ್ಲಿ ಹಾವಿ (Snake) ಗೆ ಸಂಬಂಧಿಸಿದ ಅನೇಕ ಸುದ್ದಿಗಳನ್ನು ನಾವು ಕೇಳ್ತಿದ್ದೇವೆ. ಒಂದೇ ವ್ಯಕ್ತಿಗೆ ಹಾವು ಎರಡು ಬಾರಿ ಕಚ್ಚಿದ್ದಿರಬಹುದು ಇಲ್ಲ ಹಾವಿನ ಬಾಲ ಹಿಡಿದು ಆಡಿಸ್ತಿರುವ ಬಾಲಕನ ವಿಡಿಯೋ (Video) ಇರಬಹುದು. ಹಾವನ್ನು ಎಚ್ಚರಿಕೆಯಿಂದ ಸಂಭಾಳಿಸಬೇಕು. ಸ್ವಲ್ಪ ಎಚ್ಚರ ತಪ್ಪಿದ್ರೂ ನಮ್ಮ ಜೀವ ಹೋಗುತ್ತೆ. ಕೆಲ ಜನರು ಸತ್ಯ ತಿಳಿದಿದ್ದರೂ ತಮಾಷೆ (Funny) ಬಿಡೋದಿಲ್ಲ. ಇದ್ರಿಂದ ಅಪಾಯ ತಂದುಕೊಳ್ತಾರೆ. ವಿಡಿಯೋ, ಸೆಲ್ಫಿಗಾಗಿ ತಮಾಷೆ ಮಾಡಲು ಹೋಗಿ ಸಾವು ತಂದುಕೊಂಡವರು ಅನೇಕರಿದ್ದಾರೆ. ಈ ವಿಡಿಯೋದಲ್ಲಿ ಸ್ವಲ್ಪ ಮಿಸ್ ಆಗಿದ್ರೂ ವ್ಯಕ್ತಿ ಮಿಸ್ ಆಗೋದ್ರಲ್ಲಿ ಸಂಶಯವಿರಲಿಲ್ಲ.
ಮಳೇಲಿ ಕಾರು ಕೆಳಗೆ ಆಶ್ರಯ ಪಡೆಯೋ ಬೆಕ್ಕು, ನಾಯಿ ಬಗ್ಗೆ ಇರಲಿ ಕಾಳಜಿ, ರತನ್ ಟಾಟಾ ಮನವಿ!
ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೆ ಲಕ್ಷಾಂತರ ವಿಡಿಯೋಗಳು ಪೋಸ್ಟ್ ಆಗ್ತಿರುತ್ತವೆ. ಅದ್ರಲ್ಲಿ ಕೆಲ ವಿಡಿಯೋಗಳು ಭಯ ಹುಟ್ಟಿಸುವಂತಿದ್ರೆ ಮತ್ತೆ ಕೆಲವು ತಮಾಷೆಯಿಂದ ಕೂಡಿರುತ್ತದೆ. ಇನ್ನೂ ಕೆಲವರು ತಮಾಷೆ ಜೊತೆ ಗಂಭೀರವಾಗಿರುತ್ತವೆ. ಈಗ ಅಂತಹ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಹಾವು ಹಾಗೂ ಹುಡುಗ್ರ ತಮಾಷೆ ನಿಮಗೆ ಒಂದು ಕಡೆ ನಗು ತರಿಸಿದ್ರೆ ಮತ್ತೊಂದು ಕಡೆ ಅಪಾಯವಾಗಿದ್ರೆ ಎಂಬ ಭಯ (Fear) ಕೂಡ ಹುಟ್ಟಿಸುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪೊರಕೆಯಲ್ಲಿ ಹಾವನ್ನು ಹಿಡಿಯುವ ಪ್ರಯತ್ನ ಮಾಡ್ತಿದ್ದಾನೆ. ಹಾವು ಅದನ್ನು ವಿರೋಧಿಸುತ್ತದೆ. ಈ ಸಂದರ್ಭದಲ್ಲಿ ನಡೆದ ಘಟನೆ ನೋಡುಗರನ್ನು ಅಚ್ಚರಿಗೊಳಿಸುತ್ತದೆ. ಹಾವಿನೊಂದಿಗೆ ಹೀಗಲ್ಲಾ ಮಾಡ್ತಾರಾ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತದೆ. ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ (Instagram) ನಲ್ಲಿ @sonyboy1931 ಹೆಸರಿನ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ಲಕ್ಷಾಂತರ ಜನರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಸಾವಿರಾರು ಜನರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದುವರೆಗೆ 64 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಜನರು ತಮಾಷೆಯ ಕಾಮೆಂಟ್ ಮಾಡ್ತಿರೋದು ಕಂಡು ಬರುತ್ತದೆ.
Ranveer Brar : ಕಾಲೇಜ್ ಡ್ರಾಪ್ ಔಟ್ ಈ ಬಾಣಸಿಗನ ಗಳಿಗೆ ತಿಂಗಳಿಗೆ 45 ಲಕ್ಷ!
ವಿಡಿಯೋದಲ್ಲಿ ಏನಿದೆ? : ಪೋಸ್ಟ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಾಲುವೆ ದಡದ ಬಳಿ ಹಾವನ್ನು ಪೊರಕೆಯಲ್ಲಿ ನಿಯಂತ್ರಿಸುವ ಪ್ರಯತ್ನ ಮಾಡ್ತಿದ್ದಾನೆ. ಹಾವು ಆತನಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತೆ. ಅತ್ತಿಂತಿದ್ದ ಹಾವು ಓಡುತ್ತದೆ. ಅದನ್ನು ನಿಯಂತ್ರಿಸಲು ಸಾಧ್ಯವಾಗದ ವ್ಯಕ್ತಿ, ಪೊರಕೆ ಸಹಾಯದಿಂದ ಹಾವನ್ನು ಚೆಂಡಿನಂತೆ ದೂರಕ್ಕೆ ಹಾರಿಸುತ್ತಾನೆ. ಪಕ್ಕದಲ್ಲಿ ನಿಂತು ತಮಾಷೆ ನೋಡ್ತಿದ್ದ ವ್ಯಕ್ತಿ ಮೇಲೆ ಹಾವು ಬಂದು ಬೀಳುತ್ತದೆ. ಏಕಾಏಕಿ ಮೈಮೇಲೆ ಬಿದ್ದ ಹಾವನ್ನು ಕಂಡ ವ್ಯಕ್ತಿಗೆ ಏನು ಮಾಡ್ಬೇಕು ತಿಳಿಯೋದಿಲ್ಲ. ಗಾಬರಿಯಾದ ವ್ಯಕ್ತಿ, ಕೈ ಬೀಸ್ತಾ, ಹಾವನ್ನು ಎಸೆದು, ಹಾವಿನಿಂದ ತಪ್ಪಿಸಿಕೊಂಡು ಓಡ್ತಾನೆ.
ಹಸನಾ ಮನಾ ಹೇ ಎಂದು ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ. ಆದ್ರೆ ಈ ವಿಡಿಯೋ ನೋಡಿದ ಜನರು ಬಿದ್ದು ಬಿದ್ದು ನಗ್ತಿದ್ದಾರೆ. ಸ್ವೀಪ್ ಶಾಟ್, ಡ್ರಾಪ್ ಕ್ಯಾಚ್ ಅಂತಾ ವ್ಯಕ್ತಿಯೊಬ್ಬರು ಇದಕ್ಕೆ ಕಮೆಂಟ್ ಮಾಡಿದ್ದಾರೆ. ಇದು ನಿಜಕ್ಕೂ ಮಜವಾಗಿತ್ತು ಎಂದು ಮತ್ತೊಬ್ಬರು ಬರೆದಿದ್ದಾರೆ. ಕೆಲವರು ವಿಡಿಯೋ ನೋಡಿ ಈತ ಸಾಯುತ್ತಾನೆ ಎಂದು ಬರೆದರೆ ಇನ್ನು ಕೆಲವರು ಇದು ಹೃದಯಾಘಾತ ಹುಟ್ಟಿಸುವ ದೃಶ್ಯ ಎಂದು ಹೇಳಿದ್ದಾರೆ.