Asianet Suvarna News Asianet Suvarna News

2.5 ಲಕ್ಷ ರೂ, ಒಂದು ಕಾರು, ವರದಕ್ಷಿಣೆ ತರದ ಸೊಸೆಗೆ ಆ್ಯಸಿಡ್ ಕುಡಿಸಿದ ಅತ್ತೆ!

ವರದಕ್ಷಿಣೆ ಪಿಡುಗು ಮಾಯವಾದಂತೆ ಕಂಡರೂ ಬೇರುಗಳು ಹಾಗೇ ಇದೆ. ಅಲ್ಲೊಂದು ಇಲ್ಲೊಂದು ಘಟನೆ ವರದಿಯಾಗುತ್ತಿದೆ.ಇದೀಗ ಅತ್ಯಂತ ಭೀಕರ ವರದಕ್ಷಿಣೆ ಕಿರುಕುಳ ಘಟನೆ ವರದಿಯಾಗಿದೆ. ಹೇಳಿದ ಹಣ, ಇತರ ವಸ್ತುಗಳನ್ನು ತರಲಿಲ್ಲ ಎಂದು ಸೊಸೆಗೆ ಆ್ಯಸಿಡ್ ಕುಡಿಸಿದ ಘಟನೆ ನಡೆದಿದೆ.

Brutal Case Women died after in laws allegedly forced her to drink acid for Dowry in Uttar pradesh ckm
Author
First Published Feb 25, 2023, 9:29 PM IST

ರಾಯ್‌ಬರೇಲಿ(ಫೆ.25): ವರದಕ್ಷಿಣೆ ಕಿರುಕುಳ ಭಾರತದಲ್ಲಿ ಆಳವಾಗಿ ಬೇರೂರಿದೆ. ಒಂದೊಂದು ರೂಪದಲ್ಲಿ ವರದಕ್ಷಿಣ ಬಹುತೇಕ ಮದುವೆಯಲ್ಲಿ ನಡೆಯುತ್ತಲೇ ಇದೆ. ಇದೀಗ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಅತ್ಯಂತ ಭೀಕರ ಘಟನೆ ನಡೆದಿದೆ. 2.5 ಲಕ್ಷ ರೂಪಾಯಿ ಹಣ ಹಾಗೂ ಒಂದು ಕಾರು ವರದಕ್ಷಿಣೆ ರೂಪದಲ್ಲಿ ತಂದಿಲ್ಲ ಎಂದು ಸೊಸೆಗೆ ಅತ್ತೆ ಆ್ಯಸಿಡ್ ಕುಡಿಸಿದ ಘಟನೆ ನಡೆದಿದೆ. ಆ್ಯಸಿಡ್ ಕುಡಿದ ಸೊಸೆ ಸಾವು ಬದುಕಿನ ನಡುವೆ ಹೋರಾಡಿ ಮೃತಪಟ್ಟಿದ್ದಾಳೆ. 

25 ವರ್ಷದ ಅಂಜುಮ್ 6 ವರ್ಷಗಳ ಹಿಂದೆ ಇಲಿಯಾಸ್‌ ಜೊತೆ ವೈಹಾಕಿ ಜೀವನಕ್ಕೆ ಕಾಲಿಟ್ಟಿದ್ದಾಳೆ. ಮದುವೆಯಾದ ದಿನದಿಂದ ಗಂಡ ಹಾಗೂ ಆತ್ತೆ ವರದಕ್ಷಿಣೆ ರೂಪದಲ್ಲಿ ಏನೂ ತಂದಿಲ್ಲ ಎಂದು ಕಿರುಕುಳ ನೀಡುತ್ತಲೇ ಬಂದಿದ್ದಾರೆ. ಹೀಗಾಗಿ ಹಲವು ಬಾರಿ ತವರು ಮನೆಗೆ ಬಂದು ತಂಗಿದ ಉದಾಹರಣೆಯೂ ಇದೆ. ಪ್ರತಿ ಬಾರಿ ಈ ರೀತಿ ತವರು ಮನೆಗೆ ಬಂದಾಗ, ಅತ್ತೆ ಜೊತೆ ಜಗಳವಾಡಿ ಮನೆ ಬಿಟ್ಟು ಬರುತ್ತಿದ್ದಾಳೆ ಎಂದು ಗಂಡನ ಹಾಗೂ ಆತನ ಕುಟುಂಬಸ್ಥರು ಕಟ್ಟು ಕತೆ ಕಟ್ಟಿದ್ದರು. ಇತ್ತ ಕಷ್ಟ ಪಟ್ಟು ಮದುವೆ ಮಾಡಿದ ಪೋಷಕರಿಗೆ ಈ ವಿಚಾರಗಳನ್ನು ಹೇಗೆ ತಿಳಿಸಲಿ ಎಂದು ಒಂದು ಮಾತೂ ಆಡಿಲ್ಲ.

ವರದಕ್ಷಿಣೆಯಾಗಿ ವಧುವಿನ ಪೋಷಕರು ಕೊಟ್ಟ ಬೀರು ಕಳಪೆ, ಮಂಟಪದಲ್ಲೇ ಮದುವೆ ಕ್ಯಾನ್ಸಲ್ ಮಾಡಿದ ವರ!

ಫೆಭ್ರವರಿ 20 ರಂದು ವರದಕ್ಷಿಣೆ ಕಿರುಕುಳ ಜೋರಾಗಿದೆ. 2.5 ಲಕ್ಷ ರೂಪಾಯಿ ಹಾಗೂ ಒಂದು ಕಾರು ತವರು ಮನೆಯಿಂದ ತರುವಂತೆ ಎಚ್ಚರಿಸಿದ್ದಾರೆ. ಇದಕ್ಕಾಗಿ ಪಟ್ಟು ಹಿಡಿದಿದ್ದಾರೆ. ಪೋಷಕರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರಲ್ಲಿ 2.5 ಲಕ್ಷ ರೂಪಾಯಿ, ಕಾರು ಕೊಡಿಸುವ ಶಕ್ತಿ ಇಲ್ಲ ಎಂದಿದ್ದಾಳೆ. ಇದು ಅತ್ತೆ ಹಾಗೂ ಗಂಡನ ರೊಚ್ಚಿಗೆಬ್ಬಿಸಿದೆ. ಈ ಕೋಪದಲ್ಲಿ ಅತ್ತೆ ಬಲವಂತವಾಗಿ ಆ್ಯಸಿಡ್ ಕುಡಿಸಿದ್ದಾರೆ. 

ಬಳಿಕ ಆಕೆಯನ್ನು ಅಲ್ಲೆ ಬಿಟ್ಟು ಅತ್ತೆ ಹೊರಟು ಹೋಗಿದ್ದಾರೆ. ತೀವ್ರ ನೋವು ಸುಟ್ಟಗಾಯದಿಂದ ಬಳಲಿದ ಅಂಜುಮ್ ತನಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾಳೆ. ಫೆಬ್ರವರಿ 21 ರಂದು ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ಮಗಳು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ ಅನ್ನೋ ಮಾಹಿತಿ ಪಡೆದು ಆಸ್ಪತ್ರೆ ಧಾವಿಸಿದ್ದಾರೆ. ಸತತ ಚಿಕಿತ್ಸೆ ನೀಡಿದರೂ ಯಾವದೇ ಪ್ರಯೋಜನವಾಗಲಿಲ್ಲ. ಇಂದು(ಫೆ.25) ಅಂಜುಮ್ ಮೃತಪಟ್ಟಿದ್ದಾಳೆ.

ಅಂಜುಮ್ ದೇಹದಲ್ಲಿ ಹಲವು ಗಾಯಗಳಿರುವುದು ಪತ್ತೆಯಾಗಿದೆ. ಈ ಮೂಲಕ ಅಂಜುಮ್ ಮೇಲೆ ಹಲ್ಲೆಯಾಗಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಅಂಜುಮ್ ಕುಟುಂಬಸ್ಥರ ದೂರು ನೀಡಿದ್ದಾರೆ. ಇತ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ. 

ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಕೇಸಲ್ಲಿ ನಟಿ ಸಪ್ನಾ ಜೌಧರಿ, ಜೈಲು ಪಕ್ಕಾ?

ವರದಕ್ಷಿಣೆ ಹಿಂಸೆ: ವಿಷ ಸೇವಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವು
ಪತಿ ಹಾಗೂ ಆತನ ಪೋಷಕರ ವರದಕ್ಷಿಣೆ ಕಿರಕುಳಕ್ಕೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬೆಂಗಳೂರಿನ ತೊಬರಳ್ಳಿ ಮಹಿಳೆ ಚಿಕಿತ್ಸೆ ಫಲಿಸದೆಮೃತಪಟ್ಟಿದ್ದಾರೆ.ತೂಬರಹಳ್ಳಿ ನಿವಾಸಿ ಮಾಧುರಿ(28) ಮೃತ ದುರ್ದೈವಿ. ಜ.26ರ ರಾತ್ರಿ 8.30ಕ್ಕೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಆಕೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಿಸದೆ ಆಕೆ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಚಿಕಿತ್ಸೆ ವೇಳೆ ಮಾಧುರಿ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಗುರುಪ್ರಸಾದ್‌, ಮಾವ ರಾಘವೇಂದ್ರ ರಾವ್‌ ಹಾಗೂ ಅತ್ತೆ ಸುಧಾ ವಿರುದ್ಧ ವರಕ್ಷಿಣೆ ನಿಷೇಧ ಕಾಯ್ದೆಯಡಿ ವರ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Follow Us:
Download App:
  • android
  • ios