ನವದೆಹಲಿ (ನ. 05): ಜಮ್ಮು-ಕಾಶ್ಮೀರ ಹಾಗೂ ಲಡಾಖನ್ನು ಪ್ರತ್ಯೇಕಿಸಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಮಾಡಿದ ನಂತರ ಭಾರತ ಸರ್ಕಾರ ದೇಶದ ಹೊಸ ನಕ್ಷೆಯನ್ನು ಭಾನುವಾರ ಬಿಡುಗಡೆ ಮಾಡಿತ್ತು. ಆದರೆ ಅದು ಈಗ ವಿವಾದಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರಿ ನೌಕರಿ ಕನ್ನಡಿಗರಿಗೆ ಮರೀಚಿಕೆ

ಏಕೆಂದರೆ ವಿಭಜಿತ ಆಂಧ್ರಪ್ರದೇಶದ ರಾಜಧಾನಿ ‘ಅಮರಾವತಿ’ಯನ್ನು ನಕ್ಷೆಯಲ್ಲಿ ಉಲ್ಲೇಖಿಸಿಯೇ ಇಲ್ಲ. ಇದು ಆಂಧ್ರಪ್ರದೇಶದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಬೇರೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮತ್ತು ಅವುಗಳ ರಾಜಧಾನಿಯನ್ನು ನಕ್ಷೆಯಲ್ಲಿ ನಮೂದಿಸಲಾಗಿದೆ.

 

ಆದರೆ ಅಮರಾವತಿ ಹೆಸರು ಇಲ್ಲ. 2014ರಲ್ಲಿ ಆಂಧ್ರಪ್ರದೇಶ ವಿಭಜನೆಗೊಂಡು ತೆಲಂಗಾಣ ರಾಜ್ಯ ಉದಯಿಸಿತು. ಆಂಧ್ರಪ್ರದೇಶ ಆಗ ರಾಜಧಾನಿ ಹೈದರಾಬಾದನ್ನು ಕಳೆದುಕೊಂಡಿತು. ಅಮರಾವತಿಯನ್ನು ಆಂಧ್ರಪ್ರದೇಶ ರಾಜಧಾನಿ ಎಂದು ಘೋಷಿಸಲಾಗಿತ್ತು.