ವಿಜಯವಾಡ(ಜು.24): ಕೊರೋನಾ ವೈರಸ್ ನಿಯಂತ್ರಣದಲ್ಲಿ ಹಲೆವೆಡೆ ಕೆಲವು ತಪ್ಪುಗಳು ಆಗುತ್ತಿವೆ. ಬಳಸಿದ ಮಾಸ್ಕ್, ಗ್ಲೌಸ್, ಪಿಪಿಇ ಕಿಟ್ ಸೇರಿದಂತೆ ಹಲವು ಕೊರೋನಾ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಜನರ ಆತಂತಕ್ಕೆ ಕಾರಣವಾದ ಘಟನೆಗಳ ಸಾಕಷ್ಟಿವೆ. ಕೊರೋನಾ ತ್ಯಾಜ್ಯಗಳನ್ನು ಎಚ್ಚರಿಕೆಯಿಂದ ನಾಶ ಮಾಡಬೇಕು. ಆದರೆ ಹಲವು ಭಾಗಗಳಲ್ಲಿ ಇದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ವಿಶೇಷ ಕಸದ ಬುಟ್ಟಿ ಇಡಲಾಗಿದೆ. ಈ ಕಸದ ಬುಟ್ಟಿಗಳ ತ್ಯಾಜ್ಯಗಳು ಕ್ಷಣಾರ್ಧದಲ್ಲಿ ಬೂದಿಯಾಗಿ ನಾಶವಾಗಲಿದೆ.

ಮಾಸ್ಕ್‌ ಧರಿಸದಿದ್ರೆ 1ಲಕ್ಷ ದಂಡ, ಲಾಕ್ಡೌನ್‌ ಉಲ್ಲಂಘಿಸಿದರೆ 2 ವರ್ಷ ಜೈಲು ಶಿಕ್ಷೆ!.

ಆಂಧ್ರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಈ ವಿನೂತನ ಪ್ರಯತ್ನ ಮಾಡಿದೆ. ವಿಜಯವಾಡದ ಬಹುತೇಕ ಕಡೆಗಳಲ್ಲಿ ಕೊರೋನಾ ವೈರಸ್ ಆಕಾರದ ಕಸದ ಬುಟ್ಟಿಗಳನ್ನು ಇಡಲಾಗಿದೆ. ಈ  ಕಸದ ಬುಟ್ಟಿಗಳು ಮಾಸ್ಕ್, ಶೀಲ್ಡ್ ಮಾಸ್ಕ್, ಗ್ಲೌಸ್ ಸೇರಿದಂತೆ ಕೊರೋನಾ ವೈರಸ್ ತ್ಯಾಜ್ಯಗಳನ್ನು ಹಾಕಲು ಇಡಲಾಗಿದೆ.

ಈ ಕಸದ ಬುಟ್ಟಿಗಳಲ್ಲಿ ಸಂಗ್ರಹವಾದ ಕೊರೋನಾ ತ್ಯಾಜ್ಯಗಳು ಮಿಶಿನ್ ಮೂಲಕ ನಾಶವಾಗಲಿದೆ. ಹಾಕಿದ ಕೊರೋನಾ ತ್ಯಾಜ್ಯಗಳು ಬೂದಿಯಾಗಿ ಮಿಶಿನ್ ಹಿಂಭಾಗದಲ್ಲಿ ಶೇಖರಣೆಯಾಗಲಿದೆ. ಈ ತ್ಯಾಜ್ಯಗಳನ್ನು ಮುನ್ಸಿಪಲ್ ಕಾರ್ಪೋರೇಶನ್ ಸಂಗ್ರಹ ಮಾಡಿ ವಿಲೇವಾರಿ ಮಾಡುತ್ತಿದೆ.

ವಿಜಯವಾಡದ 15 ಭಾಗಗಳಲ್ಲಿ ಈ ರೀತಿ ಕಸದ ಬುಟ್ಟಿಗಳನ್ನು ಇಡಲಾಗಿದೆ. ಪ್ರತಿ ತ್ಯಾಜ್ಯ ವಿಲೇವಾರಿ ಮಶಿನ್ 300 ಕೆಜಿಯಷ್ಟು ತ್ಯಾಜ್ಯ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.  ಪ್ಲಾಸ್ಟಿಕ್ ಬಾಟಲಿ ಕ್ರಾಶ್ ಮಶಿನ್‌ಗಳನ್ನು ನಾವು ಗಮನಿಸಿದ್ದೇವೆ. ಕ್ರೀಡಾಂಗಣಗಳ ಸುತ್ತ, ಪಾರ್ಕ್, ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಬಾಟಲ್ ಕ್ರಾಶ್ ಮಶಿನ್ ಕಾಣಸಿಗುತ್ತವೆ. ಇದೇ ರೀತಿ ಇದೀಗ ಕೊರೋನಾ ತ್ಯಾಜ್ಯ ವಿಲೇವಾರಿ ಮಶಿನ್ ಕೂಡ ಅತ್ಯಂತ ಉಪಯುಕ್ತವಾಗಿದೆ.