ಆಂಧ್ರಪ್ರದೇಶದಲ್ಲಿ  12 ಹೊಸ ಜಿಲ್ಲೆ ರಚನೆಗೆ ಜಗನ್‌ ರೆಡ್ಡಿ ಸರ್ಕಾರ ಚಿಂತನೆ| ಸದ್ಯ  ಆಂಧ್ರದಲ್ಲಿ 13 ಜಿಲ್ಲೆಗಳಿವೆ

ವಿಶಾಖಪಟ್ಟಣ[ಡಿ.23]: ಮೂರು ರಾಜಧಾನಿಗಳನ್ನು ಸೃಷ್ಟಿಸುವ ನಿರ್ಧಾರದ ಕುರಿತು ಪರ- ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿರುವಾಗಲೇ, ಆಂಧ್ರಪ್ರದೇಶದಲ್ಲಿ ಹೊಸದಾಗಿ 12 ಜಿಲ್ಲೆಗಳನ್ನು ರಚನೆ ಮಾಡಲು ಜಗನ್ಮೋಹನರೆಡ್ಡಿ ನೇತೃತ್ವದ ಸರ್ಕಾರ ಚಿಂತನೆ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಯ ಆಂಧ್ರದಲ್ಲಿ 13 ಜಿಲ್ಲೆಗಳಿವೆ. ಆಡಳಿತವನ್ನು ವಿಕೇಂದ್ರೀಕರಣಗೊಳಿಸಲು ಜಿಲ್ಲೆಗಳ ಸಂಖ್ಯೆಯನ್ನು ಶೀಘ್ರದಲ್ಲೇ 25ಕ್ಕೆ ಹೆಚ್ಚಳ ಮಾಡಲಾಗುತ್ತದೆ ಎಂದು ಜಗನ್‌ ಅವರ ಆಪ್ತರೂ ಆಗಿರುವ ವೈಎಸ್ಸಾರ್‌ ಕಾಂಗ್ರೆಸ್‌ ಸಂಸದ ವಿಜಯಸಾಯಿ ರೆಡ್ಡಿ ಅವರು ತಿಳಿಸಿದ್ದಾರೆ.

ಆಂಧ್ರದ 13 ಜಿಲ್ಲೆಗಳನ್ನು 25 ಜಿಲ್ಲೆಗಳಾಗಿ ಮಾರ್ಪಡಿಸುವ ಮೂಲಕ ಎಲ್ಲ ಜಿಲ್ಲೆಗಳೂ ಅಭಿವೃದ್ಧಿ ಕಾಣುವಂತೆ ಮಾಡಲಾಗುವುದು ಎಂದು ಜಗನ್‌ ತಿಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ