Asianet Suvarna News Asianet Suvarna News

Cabinet Reshuffle ಆಂಧ್ರ ಪ್ರದೇಶದ ಎಲ್ಲಾ ಸಚಿವರು ರಾಜೀನಾಮೆ, ಸಿಎಂಗೆ ಪತ್ರ ರವಾನೆ

  • ಆಂದ್ರಪ್ರದೇಶದ 25 ಮಂತ್ರಿಗಳಿಂದ ರಾಜೀನಾಮೆ ಸಲ್ಲಿಕೆ
  • ಸಿಎಂ ಜಗನ್ ಮೋಹನ್ ರೆಡ್ಡಿಗೆ ರಾಜೀನಾಮೆ ಪತ್ರ ರವಾನೆ
  • ಏಪ್ರಿಲ್ 11ಕ್ಕೆ ಹೊಸ ಸಚಿವರು ಪ್ರಮಾಣ ವಚನ
     
Andhra Pradesh Cabinet reshuffle all 24 ministers resigned submitted resignations to CM YS Jagan Mohan Reddy ckm
Author
Bengaluru, First Published Apr 7, 2022, 8:33 PM IST

ಆಂಧ್ರ ಪ್ರದೇಶ(ಏ.07): ಆಂಧ್ರ ಪ್ರದೇಶದ ಎಲ್ಲಾ 24 ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಸಂಪುಟ ಪುನಾರಚನೆ ಕಾರಣದಿಂದ ಹಾಲಿ ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ನೂತನ ಸಚಿವರು ಏಪ್ರಿಲ್ 11 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ಚರ್ಚೆಗಳು ಜೋರಾಗುತ್ತಿರುವ ಬೆನ್ನಲ್ಲೇ ಅತ್ತ ಆಂಧ್ರ ಪ್ರದೇಶದಲ್ಲಿ ಸಂಪುಟ ಪುನಾರಚನೆ ಕಸತ್ತು ಶುರುವಾಗಿದೆ. ಹೀಗಾಗಿ ಹಾಲಿ ಸಚಿವರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಸಲ್ಲಿಸಿರುವ ನಾಲ್ವರು ಸಚಿವರು ಮತ್ತೆ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ. ಆದರೆ ಇನ್ನುಳಿದ 19 ಸಚಿವರ ಬದಲು ಹೊಸಬರಿಗೆ ಅವಕಾಶ ನೀಡಲು ಸಿಎಂ ಜಗನ್ ನಿರ್ಧರಿಸಿದ್ದಾರೆ.

Bheemala Nayak ನಟ ಪವನ್ ಕಲ್ಯಾಣ್ ಸಿನಿಮಾಗೆ ಆಂಧ್ರ ಸಿಎಂ ತೊಂದರೆ?

ಎಪ್ರಿಲ್ 9ರೊಳಗೆ ಸಿಎಂ ಜಗನ್ ಮೋಹನ್ ರೆಡ್ಡಿ ಹೊಸ ಸಚಿವರು ಪಟ್ಟಿಯನ್ನು ರಾಜ್ಯಪಾಲ ಬಿಸ್ವಬೂಷನ್ ಹರಿಚಂದ್ರನ್ ಅವರಿಗೆ ಸಲ್ಲಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ. ಮುಂಬರವು ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಂಪುಟ ಪುನರ್ ರಚನೆ ಮಾಡಲಾಗುತ್ತಿದೆ. ಹೊಸ ಸಂಪುಟದಲ್ಲಿ ಐವರು ಉಪ ಮುಖ್ಯಮಂತ್ರಿಗಳು ಇರಲಿದ್ದಾರೆ.

2024ರ ಆಂಧ್ರ ಪ್ರದೇಶ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹೊಸ ಸಂಪುಟ ರಚನೆಯಾಗಲಿದೆ. 2021ರ ಅಂತ್ಯದಲ್ಲಿ ಅಂದರೆ ಡಿಸೆಂಬರ್ ತಿಂಗಳಲ್ಲಿ ಆಂಧ್ರ ಪ್ರದೇಶದಲ್ಲಿ ಸಂಪುಟ ಪುನರ್ ರಚನೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೊರೋನಾ ಮತ್ತೆ ಉಲ್ಬಣಗೊಂಡ ಕಾರಣ ಮುಂದೂಡಲಾಗಿತ್ತು. 2019ರ ಮೇ 30ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮುಂದಿನ 2.5 ವರ್ಷಗಳಲ್ಲಿ ಸಂಪುಟವನ್ನು ಪುನಾರಚನೆ ಮಾಡುವುದಾಗಿ ಜಗನ್‌ ಹೇಳಿದ್ದರು.

ಆಂಧ್ರ ಪ್ರದೇಶದಲ್ಲಿ ಜಗನ್ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಪ್ರಮುಖವಾಗಿ ಹಿಂದೂ ದೇವಲಾಯಗಳ ವಿಚಾರದಲ್ಲಿ ತೆಗೆದುಕೊಂಡ ಕೆಲ ನಿರ್ಧಾರಗಳು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲು ಜಗನ್ ಜಾಣ್ಮೆಯಿಂದ ಸಂಪುಟ ಪುನಾರಚನೆ ಮೊರೆ ಹೋಗಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

Three Capital Bill| ಮಸೂದೆ ರದ್ದು ಮಾಡಿದರೂ, ಮರು ಜಾರಿ ಪ್ರತಿಜ್ಞೆ ಮಾಡಿದ ಜಗನ್‌!

ಹಿಂದೂ ದೇವಾ​ಲ​ಯಗಳ ಭೂಮಿ ಪರಭಾರೆ: ಆಂಧ್ರ ಸಿಎಂ ವಿರುದ್ಧ ಆಕ್ರೋ​ಶ
ವಿವಿಧ ಯೋಜನೆಯ ನೆಪದಲ್ಲಿ ಕಾನೂನು ವಿರುದ್ಧವಾಗಿ ಹಿಂದೂ ದೇವಾಲಯಕ್ಕೆ ಸಂಬಂಧಿಸಿದ ಭೂಮಿ ವಶಪಡಿಸಿಕೊಂಡು ಖಾಸಗಿ ವ್ಯಕ್ತಿಗಳಿಗೆ ಪರಬಾರೆ ಮಾಡುತ್ತಿರುವ ಆಂಧÜ್ರದ ಮುಖ್ಯಮಂತ್ರಿ ವಿರುದ್ಧ ಕಠಿಣ ಕ್ರಮ ಕೈಗೊಂಡು ಭೂಮಿಯನ್ನು ದೇವಾಲಯಗಳಿಗೆ ಹಿಂದಕ್ಕೆ ಹಸ್ತಾಂತರಿಸಲು ಪ್ರಧಾನಿ ಮಧ್ಯಪ್ರವೇಶಿಸುವ ತುರ್ತು ಅಗತ್ಯವಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕಾರ ಪ್ರಭಾಕರ್‌ ಪಡಿಯಾರ್‌ ಹೇಳಿ​ದ​ರು.ಆಂಧÜ್ರದಲ್ಲಿ ಹಿಂದೂ ವಿರೋಧಿ ಕಾರ್ಯದಲ್ಲಿ ಮಗ್ನವಾಗಿರುವ ಜಗನ್‌ಮೋಹನ ರೆಡ್ಡಿ ಸರ್ಕಾರ ವಜಾಗೊಳಿಸುವಂತೆ, ಜನಸಂಖ್ಯಾ ನಿಯಂತ್ರಣಕ್ಕಾಗಿ ದೇಶಾದ್ಯಂತ ಸಮಾನ ಕಾನೂನು ಜಾರಿಗೆ ಒತ್ತಾಯಿಸಿ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

3 ರಾಜಧಾನಿ ಮಸೂದೆ ರದ್ದು 
ಆಂಧ್ರಪ್ರದೇಶದಲ್ಲಿ 3 ರಾಜಧಾನಿ ಸೃಷ್ಟಿಸುವ ವಿವಾದಾತ್ಮಕ ಕಾಯ್ದೆಯನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಆಂಧ್ರ ಹೈಕೋರ್ಟ್‌ಗೆ ಸೋಮವಾರ ಜಗನ್‌ಮೋಹನ ರೆಡ್ಡಿ ಸರ್ಕಾರ ಹೇಳಿದೆ. ಇದರ ಬೆನ್ನಲ್ಲೇ ಸಂಪುಟ ಸಭೆಯಲ್ಲಿ ಈ ಕುರಿತು ಅಧಿಕೃತ ನಿರ್ಧಾರವನ್ನು ಜಗನ್‌ ಸರ್ಕಾರ ಕೈಗೊಂಡಿದೆ. ಆದರೆ ಅದರ ಬೆನ್ನಲ್ಲೇ ವಿಧಾನಸಭೆಯಲ್ಲಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ, ತಮ್ಮ ಸರ್ಕಾರ ಶೀಘ್ರವೇ ‘ಸಂಪೂರ್ಣ, ಸಮಗ್ರ ಮತ್ತು ಅತ್ಯುತ್ತಮವಾದ’ ಅಂಶಗಳನ್ನು ಒಳಗೊಂಡ ಮಸೂದೆ ತರಲಿದೆ. ಈ ಮೂಲಕ ವಿಕೇಂದ್ರಿಕೃತ ಅಭಿವೃದ್ಧಿ ಜಾರಿಯ ಕನಸು ಈಡೇರಿಗೆ ಬದ್ಧ ಎಂದು ಘೋಷಿಸಿದ್ದಾರೆ. ವಿಶೇಷವೆಂದರೆ ವಿಧಾನಸಭೆಯಲ್ಲಿ 3 ರಾಜಧಾನಿ ರಚನೆಯ ಮಸೂದೆ ಹಿಂಪಡೆಯುವ ವಿಷಯದ ಕುರಿತು ಮಾತನಾಡುವಾಗ ಒಂದೇ ಒಂದು ಬಾರಿಯೂ ಜಗನ್‌, ಅಮರಾವತಿ ಹೆಸರನ್ನು ಪ್ರಸ್ತಾಪಿಸಲಿಲ್ಲ. ಬದಲಾಗಿ ಹೆಸರನ್ನು ಈ ವಲಯ, ಆ ವಲಯ ಎಂದಷ್ಟೇ ಸಂಬೋಧಿಸಿದರು.

Follow Us:
Download App:
  • android
  • ios