Asianet Suvarna News Asianet Suvarna News

Three Capital Bill| ಮಸೂದೆ ರದ್ದು ಮಾಡಿದರೂ, ಮರು ಜಾರಿ ಪ್ರತಿಜ್ಞೆ ಮಾಡಿದ ಜಗನ್‌!

* ಆಂಧ್ರಪ್ರದೇಶದಲ್ಲಿ 3 ರಾಜಧಾನಿ ಸೃಷ್ಟಿಸುವ ವಿವಾದಾತ್ಮಕ ಕಾಯ್ದೆಯನ್ನು ಹಿಂಪಡೆಯಲು ನಿರ್ಧಾರ

* ಆದರೆ ಮರುಜಾರಿ ಖಚಿತ ಎಂದ ಸಿಎಂ

* ಹೈಕೋರ್ಟ್‌ಗೆ ಮಾಹಿತಿ, ಸಂಪುಟದಲ್ಲಿ ತೀರ್ಮಾನ

Three capitals for AP Will bring a comprehensive complete and better bill says Jagan pod
Author
Bangalore, First Published Nov 23, 2021, 5:30 AM IST

ಅಮರಾವತಿ(ನ.23): ಆಂಧ್ರಪ್ರದೇಶದಲ್ಲಿ 3 ರಾಜಧಾನಿ (Three capitals’ for Andhra Pradesh) ಸೃಷ್ಟಿಸುವ ವಿವಾದಾತ್ಮಕ ಕಾಯ್ದೆಯನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಆಂಧ್ರ ಹೈಕೋರ್ಟ್‌ಗೆ ಸೋಮವಾರ ಜಗನ್‌ಮೋಹನ ರೆಡ್ಡಿ (Jagan Mohan Reddy) ಸರ್ಕಾರ ಹೇಳಿದೆ. ಇದರ ಬೆನ್ನಲ್ಲೇ ಸಂಪುಟ ಸಭೆಯಲ್ಲಿ ಈ ಕುರಿತು ಅಧಿಕೃತ ನಿರ್ಧಾರವನ್ನು ಜಗನ್‌ ಸರ್ಕಾರ ಕೈಗೊಂಡಿದೆ. ಆದರೆ ಅದರ ಬೆನ್ನಲ್ಲೇ ವಿಧಾನಸಭೆಯಲ್ಲಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ, ತಮ್ಮ ಸರ್ಕಾರ ಶೀಘ್ರವೇ ‘ಸಂಪೂರ್ಣ, ಸಮಗ್ರ ಮತ್ತು ಅತ್ಯುತ್ತಮವಾದ’ ಅಂಶಗಳನ್ನು ಒಳಗೊಂಡ ಮಸೂದೆ ತರಲಿದೆ. ಈ ಮೂಲಕ ವಿಕೇಂದ್ರಿಕೃತ ಅಭಿವೃದ್ಧಿ ಜಾರಿಯ ಕನಸು ಈಡೇರಿಗೆ ಬದ್ಧ ಎಂದು ಘೋಷಿಸಿದ್ದಾರೆ. ವಿಶೇಷವೆಂದರೆ ವಿಧಾನಸಭೆಯಲ್ಲಿ 3 ರಾಜಧಾನಿ ರಚನೆಯ ಮಸೂದೆ ಹಿಂಪಡೆಯುವ ವಿಷಯದ ಕುರಿತು ಮಾತನಾಡುವಾಗ ಒಂದೇ ಒಂದು ಬಾರಿಯೂ ಜಗನ್‌, ಅಮರಾವತಿ (Amaravati) ಹೆಸರನ್ನು ಪ್ರಸ್ತಾಪಿಸಲಿಲ್ಲ. ಬದಲಾಗಿ ಹೆಸರನ್ನು ಈ ವಲಯ, ಆ ವಲಯ ಎಂದಷ್ಟೇ ಸಂಬೋಧಿಸಿದರು.

ಆಂಧ್ರವನ್ನು 3 ರಾಜಧಾನಿಗಳಾಗಿ ವಿಭಜಿಸುವ ನಿರ್ಧಾರವನ್ನು ಜಗನ್‌ ಸರ್ಕಾರ ಈ ಹಿಂದೆ ಕೈಗೊಂಡಿತ್ತು. ವಿಶಾಖಪಟ್ಟಣವನ್ನು (Vishakapatnam) ಕಾರ್ಯನಿರ್ವಾಹಕ ರಾಜಧಾನಿ, ಅಮರಾವತಿಯನ್ನು ಶಾಸನಸಭಾ ರಾಜಧಾನಿ ಹಾಗೂ ಕರ್ನೂಲನ್ನು (Kurnool) ನ್ಯಾಯಾಂಗ ರಾಜಧಾನಿ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. ಆದರೆ ಜಗನ್‌ ನಿರ್ಧಾರ ವಿಪಕ್ಷಗಳ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅಮರಾವತಿಯೊಂದನ್ನೇ ರಾಜಧಾನಿ ಮಾಡಬೇಕು ಎಂದು ವಿಪಕ್ಷ ತೆಲುಗುದೇಶಂ ಪಕ್ಷ ಪಟ್ಟು ಹಿಡಿದಿತ್ತು.

ಈ ಸಂಬಂಧ ನಡೆದ ಪ್ರಕರಣದ ವಿಚಾರಣೆಯಲ್ಲಿ ಅಡ್ವೋಕೇಟ್‌ ಜನರಲ್‌ ಎಸ್‌. ಸುಬ್ರಮಣಿಯಂ ಅವರು ನ್ಯಾಯಪೀಠಕ್ಕೆ ಹೇಳಿಕೆ ನೀಡಿ, 3 ರಾಜಧಾನಿ ಕಾಯ್ದೆಯ ರದ್ದತಿ ನಿರ್ಧಾರವನ್ನು ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು. ಆಗ ಇದನ್ನು ಪರಿಗಣಿಸಿದ ಹೈಕೋರ್ಟು, ವಿಸ್ತೃತ ಪ್ರಮಾಣಪತ್ರ ಸಲ್ಲಿಸುವಂತೆ ಅಡ್ವೋಕೇಟ್‌ ಜನರಲ್‌ರಿಗೆ ಸೂಚಿಸಿತು.

ಇದರ ಬಳಿಕ ತುರ್ತು ಸಚಿವ ಸಂಪುಟ ಸಭೆ ನಡೆಸಿದ ಜಗನ್‌ಮೋಹನ ರೆಡ್ಡಿ, ಮೂರು ರಾಜಧಾನಿಗಳ ಕುರಿತ ಕಾಯ್ದೆಯನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡರು. ಆದರೆ ನಂತರ ವಿಧಾನಸಭೆಗೆ ಹಾಜರಾದ ಜಗನ್‌ ಮತ್ತೆ ಕೆಲ ಬದಲಾವಣೆಗಳೊಂದಿಗೆ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ. 

ಅಧ್ಯಯನ ಮಾಡಲು  ತಜ್ಞರ ಸಮಿತಿ!

2018 ರಲ್ಲಿ ಸಲ್ಲಿಸಲಾದ ಅರ್ಜಿದಾರ ಪೊಟ್ಲೂರಿ ಶ್ರೀನಿವಾಸ ರಾವ್ (Potluri Srinivasa Rao) ಮತ್ತು ಪ್ರತಿವಾದಿಗಳಾದ ಯೂನಿಯನ್ ಆಫ್ ಇಂಡಿಯಾ (Uninon of India) ಮತ್ತು ಇತರರ ನಡುವಿನ ಪ್ರಕರಣದಲ್ಲಿ, ಕೇಂದ್ರ ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಲಲಿತಾ ಟಿ. ಹೆಡಾವು ಎಪಿ ಹೈಕೋರ್ಟ್‌ನಲ್ಲಿ ಪ್ರತಿವಾದವನ್ನು ಸಲ್ಲಿಸಿದ್ದರು. 

INS Visakhapatnam: ಕಡಲ ಕಾನೂನು ಉಲ್ಲಂಘಿಸುತ್ತಿರುವ ಚೀನಾ : ರಾಜನಾಥ್‌ ಆಕ್ರೋಶ!

ಆಂದ್ರಪ್ರದೇಶದ  ಮರುಸಂಘಟನೆ ಕಾಯಿದೆ (Andhra Pradesh Reorganisation  Act), 2014 ರ ಸೆಕ್ಷನ್ 6 ರ ಅನ್ವಯ, ಕೇಂದ್ರ ಸರ್ಕಾರವು ಮಾರ್ಚ್ 28, 2014 ರಂದು ಕೆ.ಸಿ ಶಿವರಾಮಕೃಷ್ಣನ್‌ ಅವರ ಅಧ್ಯಕ್ಷತೆಯಲ್ಲಿ ಆಂಧ್ರಪ್ರದೇಶ ರಾಜ್ಯಕ್ಕೆ ಹೊಸ ರಾಜಧಾನಿಗಾಗಿ ಪರ್ಯಾಯಗಳನ್ನು ಅಧ್ಯಯನ ಮಾಡಲು  ತಜ್ಞರ ಸಮಿತಿಯನ್ನು ರಚಿಸಿದೆ ಎಂದು ಪ್ರತಿ-ಅಫಿಡವಿಟ್ ಉಲ್ಲೇಖಿಸಿಲಾಗಿತ್ತು. ಸಮಿತಿಯು ಅದೇ ವರ್ಷದ ಆಗಸ್ಟ್ 30 ರಂದು ತನ್ನ ವರದಿಯನ್ನು ಸಲ್ಲಿಸಿತು. ಅದನ್ನು ಎರಡು ದಿನಗಳ ನಂತರ ಸೆಪ್ಟೆಂಬರ್ 1 ರಂದು ಆಂಧ್ರಪ್ರದೇಶ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅಫಿಡವಿಟ್ನಲ್ಲಿ ರಾಜ್ಯ ಸರ್ಕಾರವು ಏಪ್ರಿಲ್ 23, 2015 ರಂದು ರಾಜಧಾನಿಯನ್ನು ಅಮರಾವತಿ ಆಯ್ಕೆ ಮಾಡಲು ಸೂಚಿಸಿ (Notification) ಆದೇಶವನ್ನು ಹೊರಡಿಸಿದೆ ಎಂದು ಉಲ್ಲೇಖಿಸಿತ್ತು. ಜತೆಗೆ 'ರಾಜ್ಯದ ರಾಜಧಾನಿಯನ್ನು ಆಯಾ ರಾಜ್ಯ ಸರ್ಕಾರ ನಿರ್ಧರಿಸುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ ಎಂದು ಉಲ್ಲೇಖಿಸಲಾಗಿತ್ತು.

ಅಮರಾವತಿಯನ್ನು  ರಾಜಧಾನಿಯಾಗಿ ಬಿಜೆಪಿ ಬೆಂಬಲಿಸುತ್ತದೆ 

ಏತನ್ಮಧ್ಯೆ, ಆಂಧ್ರಪ್ರದೇಶದ ಬಿಜೆಪಿ (BJP) ನಾಯಕ ವೈಎಸ್ ಚೌಧರಿ (Y S Chowdary) ಕಳೆದ ವಾರ ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯಾಗಿ ಘೋಷಿಸುವ ಬೇಡಿಕೆಯನ್ನು ತಮ್ಮ ಪಕ್ಷ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ. "ಬಿಜೆಪಿ ಪರವಾಗಿ, ನಾವು ಆಂಧ್ರಪ್ರದೇಶದ ರಾಜಧಾನಿಯಾಗಿ ಅಮರಾವತಿಯನ್ನು ಬೆಂಬಲಿಸುವ ನಿರ್ಣಯವನ್ನು ಅಂಗೀಕರಿಸಿದ್ದೇವೆ, ಯಾವುದೇ ಅಧಿಕಾರವಿಲ್ಲದೆಯೇ ರಾಜ್ಯದಲ್ಲಿ ಮೂರು ರಾಜಧಾನಿಗಳು ಎಂದು ವೈಎಸ್‌ಆರ್‌ಸಿಪಿ ಸರ್ಕಾರ ಘೋಷಿಸಿತು.  ರಾಜಧಾನಿ ಅಭಿವೃದ್ಧಿಗೆ ಭೂಮಿ ನೀಡಿದ ಸ್ಥಳೀಯ ರೈತರನ್ನು ಬೆಂಬಲಿಸುವ ಸಲುವಾಗಿ, ಬಿಜೆಪಿ ಅವರನ್ನು ಬೆಂಬಲಿಸುತ್ತದೆ ಮತ್ತು ಅಮರಾವತಿ ರಾಜಧಾನಿಯಾಗಿ ಉಳಿಯಲಿದೆ ಎಂದು ಚೌಧರಿ ಹೇಳಿದರು

Follow Us:
Download App:
  • android
  • ios