ಕೈಲಾಸ ಪರ್ವತದಲ್ಲಿ ಶಿವಲಿಂಗ ದರ್ಶನ? AI ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ!
ಕೈಲಾಸ ಪರ್ವತ ಶಿವನ ವಾಸಸ್ಥಾನ. ಕೈಲಾಸ ಭೇಟಿಗೆ ಹಿಂದೂಗಳು ಹಾತೊರೆಯುತ್ತಾರೆ. ಇದೀಗ ಉದ್ಯಮಿ ಆನಂದ್ ಮಹೀಂದ್ರ ಕೈಲಾಸ ಪರ್ವತದ AI ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಆನಂದ್ ಮಹೀಂದ್ರ ಮೂಲ ಉದ್ದೇಶ ಕಂಡುಕೊಳ್ಳಲು ಈ ವಿಡಿಯೋದಿಂದ ಸ್ಪೂರ್ತಿ ಪಡೆದುಕೊಂಡಿದ್ದಾರೆ.
ಮುಂಬೈ(ನ.09) ಕೈಲಾಸ ಪರ್ವತ ಹಿಂದೂಗಳ ಪವಿತ್ರ ತೀರ್ಥ ಸ್ಥಳ. ಅಖಂಡ ಭಾರತದಲ್ಲಿದ್ದ ಕೈಲಾಸ ಪರ್ವತ ಇದೀಗ ಚೀನಾದ ಭಾಗವಾಗಿದೆ. ಆದರೆ ಪ್ರತಿ ವರ್ಷ ಹಲವು ಭಾರತೀಯರು ಕೈಲಾಸ ಪರ್ವತ ಹತ್ತಿ ಶಿವನ ದರ್ಶನ ಪಡೆಯುತ್ತಾರೆ. ಕೈವಾಸ ಶಿವನ ವಾಸಸ್ಥಾನ ಅನ್ನೋದು ಹಿಂದೂಗಳ ನಂಬಿಕೆ. ಪುರಾಣದಲ್ಲಿನ ಉಲ್ಲೇಖ ಪ್ರಕಾರ ಈ ಸ್ಥಳ ಶಿವ ಧ್ಯಾನ ಮಾಡಿದ ಸ್ಥಳವಾಗಿದೆ. ಇಲ್ಲಿ ಶಿವ, ಪಾರ್ವತಿ, ಗಣೇಶ, ಕಾರ್ತಿಕೇಯ ಸೇರಿದಂತೆ ಹಿಂದೂ ಆರಾದ್ಯ ದೇವಾನುತೆ ದೇವತೆಗಳು ಇಲ್ಲೆ ನೆಲೆಸಿದ್ದರು ಅನ್ನೋದು ಪೌರಾಣಿಕ. ಇದೀಗ ಇದೇ ಕೈಲಾಸ ಪರ್ವತದ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಸೃಷ್ಟಿ ಮಾಡಿದ ವಿಡಿಯೋ ಒಂದನ್ನು ಉದ್ಯಮಿ ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಹಂಚಿಕೊಂಡಿರುವ ಆನಂದ್ ಮಹೀಂದ್ರ ಮೌಂಟ್ ಕೈಲಾಸ, ಯಾರೂ ಹತ್ತಲಾಗದ ಪರ್ವತ, ಆದರೆ ಪ್ರತಿ ಆತ್ಮವೂ ಹಾತೊರೆಯುವ ಶಿಖರ. ನಿಮ್ಮ ಮುಖ್ಯ ಉದ್ದೇಶ ಕಂಡುಕೊಳ್ಳಲು ಇದು ಪರಿಪೂರ್ಣ ಮಾರ್ಗ ಎಂದು ಆನಂದ್ ಮಹೀಂದ್ರ ಹೇಳಿಕೊಂಡಿದ್ದಾರೆ. ಅದ್ಭುತ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಇದೀಗ ಹಲವರು ಸಾಕ್ಷಾತ್ ಶಿವಲಿಂಗ ದರ್ಶನ ಎಂದಿದ್ದಾರೆ. ಕೈಲಾಸದಲ್ಲಿ ಶಿವನ ಸಾನಿಧ್ಯ ಇದೆ. ಓಂ ನಮಶಿವಾಯ ಎಂದು ಕಮೆಂಟ್ ಮಾಡಿದ್ದಾರೆ.
ಡಿಕೆ ಶಿವಕುಮಾರ್ ಕಾಲೇಜು ದಿನದ ಯೆಝಡಿ ಬೈಕ್‌ಗೆ ಕನ್ನಡದಲ್ಲೇ ಆನಂದ್ ಮಹೀಂದ್ರ ಕಮೆಂಟ್!
ಇದು ಎಐ ಮೂಲಕ ಸೃಷ್ಟಿಸಿದ ವಿಡಿಯೋ. ಕೈಲಾಶ ಪರ್ವತದ ಸೌಂದರ್ಯವನ್ನು ಹಿಡಿದಿಟ್ಟುಕೊಂಡು ಈ ವಿಡಿಯೋ ಸೃಷ್ಟಿಸಲಾಗಿದೆ. ಕೈಲಾಸ ಪರ್ವತ ಹಿಂದೂಗಳಿಗೆ ಮಾತ್ರವಲ್ಲ. ಬುದ್ಧ,ಟಿಬೇಟ್ ಸೇರಿದಂತೆ ಹಲವು ಧರ್ಮಗಳಿಗೆ ಪವಿತ್ರವಾಗಿದೆ. ಕೈಲಾಸ ಪರ್ವತ ಟಿಬೇಟ್ ಪ್ರಾಂತ್ಯಕ್ಕೆ ಹತ್ತಿರವಾಗಿದೆ. ಬೌದ್ಧರೂ, ಟಿಬೇಟಿಯನ್ನರು ಕೂಡ ಈ ಮೌಂಟ್ ಕೈಲಾಸವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸುತ್ತಾರೆ.
ಕೈಲಾಸ ಪರ್ವತ ಅತೀ ಎತ್ತದ ಪ್ರದೇಶ. ಇಷ್ಟೇ ಅಲ್ಲ ಶಿವನ ಧ್ಯಾನಕೇಂದ್ರ. ಹೀಗಾಗಿ ಹಿಂದೂಗಳಲ್ಲಿ ಕೈಲಾಸ ಭೂಮಿಯಲ್ಲಿರುವ ಮಾನವರಿಗೂ ಹಾಗೂ ಸ್ವರ್ಗಕ್ಕೆ ಇರುವ ದಾರಿ ಎಂದು ನಂಬಿದ್ದಾರೆ. ಸಮುದ್ರ ಮಟ್ಟದಿಂದ ಸುಮಾರು 6000 ಮೀಟರ್‌ಗಿಂತ ಹೆಚ್ಚು ಎತ್ತರದಲ್ಲಿದೆ. ಅತ್ಯಂತ ಕ್ಲಿಷ್ಟಕರ ಮಾರ್ಗವಾಗಿರುವ ಕಾರಣ ಇಲ್ಲಿ ಬೆಟ್ಟ ಹತ್ತುವುದು ಸವಾಲು. ಇಳಿ ವಯಸ್ಸಿನಲ್ಲಿ ಕೈಲಾಸ ಭೇಟಿ ನೀಡಿ ಭಗಂತನಲ್ಲಿ ಲೀನವಾಗಲು ಹೆಚ್ಚಿನವರು ಬಯಸುತ್ತಾರೆ.
ಹಲವು ಬೆಟ್ಟಗಳಿಂದ ಕೂಡಿರುವ ಕೈಲಾಸ ಪರ್ವತ ಎಲ್ಲಾ ಕಾಲಮಾನದಲ್ಲೂ ಹಿಮದಿಂದ ಆವೃತಗೊಂಡಿರುತ್ತದೆ. ಚಳಿಯನ್ನು ಲೆಕ್ಕಿಸದೇ ಮಹಾಶಿವ ಇಲ್ಲಿ ಧ್ಯಾನ ಮಾಡಿದ್ದ ಅನ್ನೋದ ನಂಬಿಕೆಯಾಗಿದೆ. ಈ ಪರ್ವತ ಹತ್ತುವ ರೀತಿ ಇಲ್ಲ. ಮೌಂಟ್ ಎವರೆಸ್ಟ್ ಸೇರಿದಂತೆ ವಿಶ್ವದ ಅತೀ ಎತ್ತರದ ಪರ್ವತವನ್ನು ಹತ್ತುತ್ತಾರೆ. ಆದರೆ ಕೈಲಾಸ ಮಾತ್ರ ಹತ್ತುವ ಪ್ರಯತ್ನ ಸಾಧ್ಯವಾಗಿಲ್ಲ. ಇದರ ರಚನೆ ಈ ರೀತಿ ಇದೆ. ಇದು ಶಿವನ ಆಲಯ ಎಂದೇ ಹೆಸರಾಗಿದೆ
ಮಳೆಗೆ ಛತ್ರಿ ಹಿಡಿಯುವ ಬದಲು ಧರಿಸಿ, ಹೊಸ ಐಡಿಯಾ ನೀಡಿದ ಆನಂದ್ ಮಹೀಂದ್ರ ವಿಡಿಯೋ!