ಮಳೆಯಿಂದ ರಕ್ಷಣೆ ಪಡೆಯಲು ಛತ್ರಿ ಅಗತ್ಯ. ಆದರೆ ಒಂದು ಕೈಯಲ್ಲಿ ಛತ್ರಿ, ಮತ್ತೊಂದು ಕೈಯಲ್ಲಿ ವಸ್ತುಗಳನ್ನು ಹಿಡಿದು ಮಳೆಯಲ್ಲಿ ತೆರಳುವುದು ಕಷ್ಟ. ಹೀಗಾಗಿ ಆನಂದ್ ಮಹೀಂದ್ರ ಹೊಸ ಐಡಿಯಾ ನೀಡಿದ್ದಾರೆ. 

ಮುಂಬೈ(ಜೂ.24) ಮಳೆಗಾಲ ಶುರುವಾಗಿದೆ. ಮಳೆ ಜೋರಾಗುತ್ತಿದೆ. ಇದೀಗ ಮಳೆಯಲ್ಲಿ ಹೊರಗಡೆ ಹೋಗುವುದು ಕಷ್ಟ. ಛತ್ರಿ ಹಿಡಿದು ಶಾಂಪಿಂಗ್ ಮಾಡುವುದು ಮತ್ತಷ್ಟು ಕಷ್ಟ, ಶಾಲೆಗೆ, ಕಚೇರಿಗೆ ತೆರಳುವುದು ಸುಲಭದ ಮಾತಲ್ಲ. ಆದರೆ ಉದ್ಯಮಿ ಆನಂದ್ ಮಹೀಂದ್ರ ಹೊಸ ಐಡಿಯಾ ನೀಡಿದ್ದಾರೆ. ಛತ್ರಿ ಹಿಡಿದು ತೆರಳುದು ಕಷ್ಟ. ಹೀಗಾಗಿ ಛತ್ರಿಯನ್ನೇ ಧರಿಸಿ ಎಂದು ಆನಂದ್ ಮಹೀಂದ್ರ ಸೂಚಿಸಿದ್ದಾರೆ. ಈ ಕುರಿತು ಚತುರನ ಐಡಿಯಾದ ವಿಡಿಯೋ ಒಂದನ್ನು ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ.

ಆನಂದ್ ಮಹೀಂದ್ರ ಹಂಚಿಕೊಂಡ ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಎರಡೂ ಬಟ್ಟೆಗಳನ್ನು ಹಾಕುವ ಹ್ಯಾಂಗರ್ ಬಳಸಿ ಛತ್ರಿಗೆ ಅಂಟಿಸಿದ್ದಾರೆ. ಪ್ಲಾಸ್ಟಿಕ್ ಟೇಪ್ ಮೂಲಕ ಎರಡೂ ಹ್ಯಾಂಗರ್ ವಿರುದ್ಧ ದಿಕ್ಕಿನಲ್ಲಿ ಅಂಟಿಸಿದ ವ್ಯಕ್ತಿ, ಬಳಿಕ ಬ್ಯಾಗ್ ಧರಿಸುವಂತೆ ಛತ್ರಿಯನ್ನು ಬೆನ್ನಿಗೆ ಧರಿಸಿದ್ದಾರೆ. ಇದರಿಂದ ಛತ್ರಿ ಕೈಯಲ್ಲಿ ಹಿಡಿಯಬೇಕಾದ ಅನಿವಾರ್ಯತೆ ಇಲ್ಲ. ಇನ್ನು ಎರಡು ಕೈಗಳಲ್ಲಿ ವಸ್ತುಗಳನ್ನು ಹಿಡಿದುಕೊಂಡು ಹೋಗುವ ವಿಡಿಯೋವನ್ನ ಹಂಚಿಕೊಂಡಿದ್ದಾರೆ.

ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹೆದ್ದಾರಿ, ಉದ್ಯಮಿ ಆನಂದ್ ಮಹೀಂದ್ರಾ ಶೇರ್ ಮಾಡಿದ ಫೋಟೋ ವೈರಲ್‌

ಈ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ ಸಂದೇಶವನ್ನು ನೀಡಿದ್ದಾರೆ. ಮುಂಬೈನಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಕೊನೆಗೂ ಸ್ಥಿರವಾದ ಮಳೆ ನೋಡುತ್ತಿದ್ದೇವೆ. ಆದರೆ ಪ್ರಮಾಣ ಹೆಚ್ಚಿಲ್ಲ. ನಮ್ಮ ಬಟ್ಟೆಗಳನ್ನು ಒದ್ದೆಯಾಗದಂತೆ ನೋಡಿಕೊಳ್ಳಬೇಕಾದ ಸಮಯ ಇದಾಗಿದೆ. ಇದಕ್ಕಾಗಿ ನೀವು ಧರಿಸಬಹುದಾದ ಛತ್ರಿ ಬಗ್ಗೆ ಯೋಚಿಸುವುದು ಉತ್ತಮ. ಈತ ಕ್ಲೆವರ್ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

Scroll to load tweet…

ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ಕುತೂಹಲ ಮಾಹಿತಿ, ತಮಾಷೆ, ಸಂದೇಶ ನೀಡುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಪತ್ತೆಯಾದ ಹಲವರಿಗೆ ನೆರವಿನ ಹಸ್ತ ಚಾಚಿದ್ದಾರೆ. ಆನಂದ್ ಮಹೀಂದ್ರ ನೆರವಿನಿಂದ ಹಲವರು ಬದುಕು ಕಟ್ಟಿಕೊಂಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲಾಣದಲ್ಲಿ 10 ವರ್ಷದ ಬಾಲಕ ವಿಡಿಯೋ ವೈರಲ್ ಆಗಿತ್ತು. ವೆಜ್ ಸೇರಿದಂತೆ ಇತರರ ರೋಲ್ಸ್ ಮಾರಿ ಬದುಕು ಬಾಲಕನ ವಿಡಿಯೋ ನೋಡಿದ ಆನಂದ್ ಮಹೀಂದ್ರ ಆತನಿಗೆ ನೆರವು ನೀಡಿದ್ದರು. 

ಇತ್ತೀಚೆಗೆ ಆನಂದ್ ಮಹೀಂದ್ರ ಫ್ರಭಾಸ್ ಅಭಿನಯದ ಕಲ್ಕಿ ಚಿತ್ರಕ್ಕಾಗಿ ನಿರ್ಮಿಸಿದ 6 ಟನ್ ತೂಕದ ಬುಜ್ಜಿ ಕಾರು ಡ್ರೈವ್ ಮಾಡಿ ಸಂತಸ ಪಟ್ಟಿದ್ದರು. ಎಂಜಿನಿಯರಿಂಗ್ ಅದ್ಭುತ ಎಂದೇ ಪರಿಗಣಿಸಿರುವ ಈ ಕಾರನ್ನು ನಟ ನಾಗಚೈತನ್ಯ ಕೂಡ ಡ್ರೈವ್ ಮಾಡಿದ್ದರು.

ಪುಟ್ಟ ತಂಗಿಯನ್ನು ಕೋತಿ ದಾಳಿಯಿಂದ ಕಾಪಾಡಿದ ನಿಕಿತಾಗೆ ಆನಂದ್ ಮಹೀಂದ್ರ ಭರ್ಜರಿ ಆಫರ್!