ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ಸೋಶಿಯಲ್ ಮೀಡಿಯಾದಲ್ಲಿ ಕೆಲ ವಿಡಿಯೋ, ಫೋಟೋ, ಮಾಹಿತಿ ಹಂಚಿಕೊಳ್ಳುತ್ತಾರೆ. ಈ ಬಾರಿ ಆನಂದ್ ಮಹೀಂದ್ರ ಒಂದು ಗ್ರಾಮದ ವಿಡಿಯೋ ಹಂಚಿಕೊಂಡು, ಇಲ್ಲಿಗೆ ಭೇಟಿ ನೀಡಬೇಕು ಎಂದಿದ್ದಾರೆ. ಆನಂದ್ ಮಹೀಂದ್ರ ಹೇಳಿದ ಈ ಗ್ರಾಮ ನಿಜಕ್ಕೂ ಭೂಲೋಕದ ಸ್ವರ್ಗ.
ನವದೆಹಲಿ (ಜು.07) ಮಹೀಂದ್ರ ಕಂಪನಿ ಚೇರ್ಮೆನ್ ಆನಂದ್ ಮಹೀಂದ್ರ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಹಲವರಿಗೆ ಕಾರುಗಳನ್ನು ಉಡುಗೊರೆ, ಹಲವರ ಬದುಕಿಗೆ ಆಸರೆಯಾಗಿದ್ದಾರೆ. ಆನಂದ್ ಮಹೀಂದ್ರ ಸೋಶಿಯಲ್ ಮೀಡಿಯಾ ಮೂಲಕ ಆನಂದ್ ಮಹೀಂದ್ರ ಹಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ. ಈ ಬಾರಿ ಆನಂದ್ ಮಹೀಂದ್ರ ಭಾರತದ ಅತ್ಯಂತ ಸುಂದರ ಗ್ರಾಮ ಎಂದೇ ಹೆಸರುವಾಸಿಯಾರುವ ಗ್ರಾಮದ ವಿಡಿಯೋ ಹಂಚಿಕೊಂಡಿದ್ದಾರೆ. ಈ ಗ್ರಾಮಕ್ಕೆ ಭೇಟಿ ನೀಡಲು ಪ್ಲಾನ್ ಮಾಡಿರುವುದಾಗಿ ಆನಂದ್ ಮಹೀಂದ್ರ ಹೇಳಿದ್ದಾರೆ.ಆನಂದ್ ಮಹೀಂದ್ರ ಭೇಟಿ ನೀಡಲು ಉದ್ದೇಶಿಸಿರುವ ಈ ಗ್ರಾಮ ನಿಜಕ್ಕೂ ಭೂಲೋಕದ ಸ್ವರ್ಗ.
ಕಡಮಕ್ಕುಡಿ ಗ್ರಾಮದ ಸೌಂದರ್ಯಕ್ಕೆ ಮಾರುಹೋಗದವರಿಲ್ಲ
ಆನಂದ್ ಮಹೀಂದ್ರ ಭೇಟಿ ನೀಡಲು ಉದ್ದೇಶಿಸಿದ ಈ ಗ್ರಾಮ ಕೇರಳದ ಕಡಮಕ್ಕುಡಿ ಗ್ರಾಮ. ಕಡಮಕ್ಕುಡಿ ಗ್ರಾಮದ ಹಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೈಕಿ ಒಂದು ವಿಡಿಯೋವನ್ನು ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ. ಎಂತವರನ್ನು ಮೊದಲ ನೋಟದಲ್ಲೇ ಆಕರ್ಷಿಸುವ ಗ್ರಾಮ ಇದು. ನೀರು, ರಸ್ತೆ, ಸಣ್ಣ ದ್ವೀಪ, ಅಲ್ಲಿನ ಮನೆ ಎಲ್ಲವೂ ಅತ್ಯಂತ ಅಚ್ಚುಕಟ್ಟು. ಪೈಟಿಂಗ್ಸ್‌ಗಳಲ್ಲಿ ಸಿನಿಮಾ ಹಾಡುಗಳಲ್ಲಿ ಬರುವ ಸೀನ್ ಇಲ್ಲಿದೆ. ಈ ಸುಂದರ ಗ್ರಾಮಕ್ಕೆ ಆನಂದ್ ಮಹೀಂದ್ರ ಭೇಟಿ ನೀಡಲು ಪ್ಲಾನ್ ಮಾಡಿದ್ದಾರೆ.
ಡಿಸೆಂಬರ್‌ನಲ್ಲಿ ಆನಂದ್ ಮಹೀಂದ್ರ ಭೇಟಿ
ಕಡಮಕ್ಕುಡಿ ಗ್ರಾಮದ ವಿಡಿಯೋ ಹಂಚಿಕೊಡಿರುವ ಆನಂದ್ ಮಹೀಂದ್ರ ಡಿಸೆಂಬರ್ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ. ಭೂಮಿಯ ಅತ್ಯಂತ ಸುಂದರ ಗ್ರಾಮಗಳ ಪೈಕಿ ಕಡಮಕ್ಕುಡಿ ಕೂಡ ಒಂದು. ಈ ಗ್ರಾಮಕ್ಕೆ ಭೇಟಿ ನೀಡುವುದು ನನ್ನ ಪಟ್ಟಿಯಲ್ಲಿದೆ. ಡಿಸೆಂಬರ್ ತಿಂಗಳಲ್ಲಿ ಕೊಚ್ಚಿಗೆ ಬ್ಯೂಸಿನೆಸ್ ಟ್ರಿಪ್ ತೆರಳುತ್ತಿದ್ದೇನೆ. ಇಲ್ಲಿಂದ ಕೇವಲ ಅರ್ಧಗಂಟೆ ಮಾತ್ರ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.
ಹಿನ್ನೀರಿನಲ್ಲಿರುವ ಕಡಮಕ್ಕುಡಿ ಗ್ರಾಮ
ಎರ್ನಾಕುಲಂ ಜಿಲ್ಲೆಯಲ್ಲಿರುವ ಕಡಮಕ್ಕುಡಿ ಗ್ರಾಮ ಹಿನ್ನೀರಿನಿಂದ ಆವೃತವಾಗಿದೆ. ಕೊಚ್ಚಿ ನಗರದಿಂದ ಕೇವಲ 15 ಕಿಲೋಮೀಟರ್ ದೂರದಲ್ಲಿರುವ ಕಡಮಕ್ಕುಡಿ ಗ್ರಾಮದಲ್ಲಿ ಬರೋಬ್ಬರಿ 14 ದ್ವೀಪಗಳಿಂದ ತುಂಬಿದೆ. ತೆಂಗಿನ ಮರ, ಗದ್ದೆ,ಮರ, ಸೇರಿದಂತೆ ಅತ್ಯಂತ ಸುಂದರ ಚಿತ್ರಣ ಇಲ್ಲಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಪಕ್ಷಿಗಳಿವೆ. ಹಲವರು ಇಲ್ಲಿಗೆ ಪಕ್ಷಿ ವೀಕ್ಷಣೆಗೆ ಬರುತ್ತಾರೆ. ಹಲವು ವಲಸೆ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತದೆ. ಮಂಗಲಾವನಂ ಬರ್ಡ್ ಸ್ಯಾಂಚುರಿ ಕೂಡ ಇಲ್ಲಿದೆ. ಹಳ್ಳಿ ಜೀವನ ಇಲ್ಲಿ ಕಾಣಸಿಗುತ್ತದೆ.
ಈ ಗ್ರಾಮದ ಫೋಟೋ, ವಿಡಿಯೋ ಹಂಚಿಕೊಂಡು ನನ್ನ ವಿಶ್ರಾಂತಿ ಜೀವನ, ನಿವೃತ್ತಿ ಜೀವನ ಇಲ್ಲಿ ಇರಬೇಕೆಂದು ಬಯಸುತ್ತೇನೆ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಡಮಕ್ಕುಡಿ ಗ್ರಾಮಕ್ಕೆ ತೆರಳಬೇಕು ಎಂದು ಬಯಸಿದವರಿಗೆ ಇಲ್ಲಿ ಉಳಿದುಕೊಳ್ಳಲು ಹೊಮ್ ಸ್ಟೇ, ರೆಸಾರ್ಟ್ ಸೇರಿದಂತೆ ಹಲವು ಸೌಕರ್ಯಗಳಿವೆ. ಕೊಚ್ಚಿ ವಿಮಾನ ನಿಲ್ದಾಣ ಈ ಗ್ರಾಮದಿಂದ25 ಕಿಲೋಮೀಟರರ್ ದೂರದಲ್ಲಿದೆ. ಇಲ್ಲಿಗೆ ನೇರ ರೈಲು ಸಾರಿಗೆ ವ್ಯವಸ್ಥೆ ಇಲ್ಲ.
