ಮುಂಬೈ(ಜೂ. 17)  ಒಂದು ಕಡೆ ಕೊರೋನಾ ಅಟ್ಟಹಾಸ, ಇನ್ನೊಂದು ಕಡೆ ಚಂಡಮಾರುತ ಎಂದು ನಲುಗಿ ಹೋಗಿದ್ದ ಮಹಾರಾಷ್ಟ್ರಕ್ಕೆ ನಿಸರ್ಗ ಮತ್ತೊಂದು ಶಾಕ್ ನೀಡಿದೆ.
ಮುಂಬೈನ ಉತ್ತರ ಭಾಗದಲ್ಲಿ 2.5 ತೀವ್ರತೆಯ ಭೂಕಂಪನ ಆಗಿದೆ.

ಬೆಳಿಗ್ಗೆ 11:51  ಸಮಯದಲ್ಲಿ ಭೂಕಂಪನ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರ ತಿಳಿಸಿದೆ.  ದೇಶದಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಈ ನಡುವೆ ಭೂಕಂಪ ಭಯಬೀಳಿಸಿದೆ.

ಭೂಕಂಪನವಾದಾಗ ಏನು ಮಾಡಬೇಕು? ಇಲ್ಲಿದೆ ವಿಪತ್ತು ನಿರ್ವಹಣೆ ಸರಳ ಸೂತ್ರ

ರಾಷ್ಟ್ರ ರಾಜಧಾನಿ ದೆಹಲಿಯಿಂದ 64 ಕಿಲೋಮೀಟರ್ ದೂರದಲ್ಲಿರವ ರೋಹ್ಟಕ್ ಹಾಗೂ ಹರಿಯಾಣದಲ್ಲಿ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 4.6 ತೀವ್ರತೆ ದಾಖಲಾಗಿತ್ತು.