ದೆಹಲಿ(ಜೂ.07): ಈ ವರ್ಷ ಹಲವು ಅಡೆ-ತಡೆಗಳನ್ನು ಎದುರಿಸುತ್ತಿದ್ದೇವೆ. ಕೊರೋನಾ ವೈರಸ್, ಚಂಡಮಾರುತ, ಭೂಕಂಪನ ಸೇರಿದಂತೆ ಹಲವು ವಿಪತ್ತು, ಆತಂಕಗಳು ಜನರನ್ನು ಆತಂಕದಲ್ಲಿ ದಿನ ದೂಡವಂತೆ ಮಾಡಿದೆ. ಕಳದೆ ಒಂದೂವರೆ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ವ್ಯಾಪ್ತಿಯಲ್ಲಿ 10 ಲಘು ಭೂಕಂಪನಗಳು ಸಂಭವಿಸಿದೆ. 4.6, 2.8, 3.7 ರಿಕ್ಟರ್ ತೀವ್ರತೆ ಭೂಕಂಪನಗಳು ಸಂಭವಿಸಿದೆ. ಇದೀಗ ದೆಹಲಿ ಜನತೆ ಪ್ರತಿ ದಿನ ಕೊರೋನಾ ವೈರಸ್ ವಿರುದ್ಧದ ಹೋರಾಟ ಮಾತ್ರವಲ್ಲ ಭೂಕಂಪನ ಆತಂಕದಿಂದ ಜೀವನ ನಡೆಸುತ್ತಿದ್ದಾರೆ.

ದೆಹಲಿಯಲ್ಲಿ ಭೂಕಂಪ; ರಿಕ್ಟರ್ ಮಾಪನದಲ್ಲಿ 4.6 ತೀವ್ರತೆ ದಾಖಲು!.

ಭೂಕಂಪ ಎಲ್ಲಿ , ಯಾವಾಗ ಸಂಭವಿಸುತ್ತೆ ಅನ್ನೋದನ್ನು ನಿಖರವಾಗಿ ಯಾವ ತಜ್ಞರಿಗೂ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ದೆಹಲಿಯಲ್ಲಿ ಸಂಭವಿಸಿದ ಲಘು ಭೂಕಂಪನಗಳು ಸಂಭವಿಸಿದಾಗ  ಏನು ಮಾಡಬೇಕು ಅನ್ನೋದು ವಿಪತ್ತು ನಿರ್ವಹಣಾ ವಿಭಾಗ ವಿವರಿಸಿದೆ.

ಭೂಕಂಪನದ ಮೊದಲು:
ಭೂಕಂಪನಕ್ಕೂ ಮೊದಲು ನಾವು ತೆಗೆದುಕೊಳ್ಳಬೇಕಾದ ಮುನ್ನಚ್ಚೆರಿಕೆಗಳು ಅತ್ಯಗತ್ಯ.ಲಘು ಭೂಕಂಪನಗಳು ಹಾನಿಯುಟುಮಾಡಲಿದೆ. ಹೀಗಾಗಿ ವಾಸಿಸುತ್ತಿರುವ ಮನೆ ಹಳೇಯದ್ದಾಗಿದ್ದೆರೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇಷ್ಟೇ ಅಲ್ಲ ಮನೆಯೊಳಗಿನ ವಸ್ತುಗಳ ಜೋಡಣೆ ಕೂಡ ಅಷ್ಟೇ ಮುಖ್ಯ. ಭಾರಿ ತೂಕದ ವಸ್ತುಗಳನ್ನು ಕಬೋರ್ಡ್ ಅಥವಾ ಮೇಲೇ ಇಡಬಾರದು. ಬಿದ್ದಾಗ ಹೆಚ್ಚಿನ ಅಪಾಯ ತಂದೊಡ್ಡಬಲ್ಲ ವಸ್ತುಗಳನ್ನು  ಹೆಚ್ಚಾಗಿ ಇರುವ ಸ್ಥಳಗಳಲ್ಲಿ ಅಥವಾ ವಿಶ್ರಾಂತಿ ಪಡೆಯುವ ಸ್ಥಳಗಳಲ್ಲಿ ಇಡಬೇಡಿ. ಪ್ರತಿ ವಸ್ತಗಳನ್ನು ಬೋಲ್ಟ್ ಅಥವಾ ಗೋಡೆಗೆ ಫಿಕ್ಸ್ ಮಾಡಿದರೆ ಉತ್ತಮ. ಗ್ಯಾಸ್ ಕನೆಕ್ಷನ್, ಸಿಲಿಂಡರ್ ಸೇರದಂತೆ ಅಪಾಯಕಾರಿ ವಸ್ತುಗಳ ಕಡೆಗೂ ಗಮನ ಇರಲಿ.

ಈಶಾನ್ಯ ಭಾರತದಲ್ಲಿ5.4 ತೀವ್ರತೆ ಭೂಕಂಪನ

ತುರ್ತು ಕಿಟ್ ಸಿದ್ಧವಿರಲಿ:
ಭೂಕಂಪನ ತುರ್ತು ಕಿಟ್ ಸಿದ್ದವಿರಲಿ. ಈ ಕಿಟ್‌ನಲ್ಲಿ ನೀರು, ಆಹಾರ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಇಟ್ಟಿರಿ. ಮನೆಯ ಎಲ್ಲಾ ಸದಸ್ಯರೂ, ಸಾಕು ಪ್ರಾಣಿಗಳಿಗೂ ಕಿಟ್ ರೆಡಿ ಮಾಡಿರಿ. ಕನಿಷ್ಟ 72 ಗಂಟೆಗಳಿಗೊಮ್ಮೆ ಕಿಟ್‌ನಲ್ಲಿ ನೀರು, ಆಹಾರ ಬದಲಾಯಿಸಿ ಇಟ್ಟುಕೊಳ್ಳಿ. ತುರ್ತು ಅವಶ್ಯಕತೆ ಯಾವಾಗ ಬರುತ್ತೆ ಎಂದು ಭವಿಷ್ಯ ಹೇಳಲು ಸಾಧ್ಯವಿಲ್ಲ,

ಭೂಮಿ ಕಂಪಿಸಲು ಆರಂಭಿಸಿದಾಗ:
ಭೂಮಿ ಕಂಪಿಸುತ್ತಿರುವ ಅನುಭವವಾದಾಗ, ಅಥವೂ ಮನೆಯ ವಸ್ತುಗಳು ಅಲುಗಾಡಲು ಆರಂಭವಾದಾಗ,  ರಾಷ್ಟ್ರೀಯ ವಿಪತ್ತು ನಿರ್ವಹಣಾ ವಿಭಾಗ ಸೂಚಿಸದಂತೆ ಡ್ರಾಪ್, ಕವರ್, ಹೋಲ್ಡ್ ಎಂಬ 3 ಸೂತ್ರ ಪಾಲಿಸಿ.

ಮೈಸೂರಿನಲ್ಲಿ ಭೂಮಿ ಗುಡುಗಿದ ಅನುಭವ: ಮಂಚದಿಂದ ಕೆಳಗೆ ಬಿದ್ದ ಮಗು

ಡ್ರಾಪ್: 
ಭೂಕಂಪನ ಆರಂಭವಾದಾಗ ತಕ್ಷಣವೇ ನೆಲದ ಮೇಲೆ ಮಲಗಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ 

ಕವರ್:
ನಿಮ್ಮನ್ನು ನೀವು ಕವರ್ ಮಾಡಿಕೊಳ್ಳಬೇಕು. ಒಂದು ಕೈಯಿಂದ ತಲೆಯ ಮೇಲಿಡಿ. ಈ ಮೂಲಕ ಮನೆಯೊಳಗಿನ ಸಣ್ಣ ವಸ್ತುಗಳು ತಲೆ ಮೇಲೆ ಬಿದ್ದು ಗಾಯಗಳಾಗುವುದನ್ನು ತಪ್ಪಿಸಿ. ಇನ್ನು ಟೇಬಲ್ ಅಥವಾ ಇತರ ಯಾವುದೇ ವಸ್ತುವಿನ ಅಡಿ ರಕ್ಷಣೆ ಪಡೆದುಕೊಳ್ಳಿ. ಅಥವಾ ಎತ್ತರ ವಸ್ತುಗಳ ಬಳಿಯಿಂದ ದೂರವಿರಿ.

ಹೋಲ್ಡ್:
ಕಂಪನ ನಿಲ್ಲುವ ವರೆಗೂ ರಕ್ಷಣೆ ಪಡೆಯುತ್ತಿರುವ ಸ್ಥಳದಿಂದ ತೆರಳಬೇಡಿ. ಈ ವೇಳೆ ಟೇಬಲ್ ಅಥವಾ ರಕ್ಷಣೆ, ಆಶ್ರಯ ಪಡೆಯುತ್ತಿರುವ ವಸ್ತುಗಳನ್ನು ಒಂದ ಕೈಯಿಂದ ಹಿಡಿಯಿರಿ.

ವೀಲ್‌ಚೇರ್‌ನಲ್ಲಿದ್ದರೆ, ಚಕ್ರಗಳನ್ನು ಲಾಕ್ ಮಾಡಿ. ಬಳಿಕ ತಲೆ ಹಾಗೂ ಕತ್ತಿನ ಭಾಗಕ್ಕೆ ಹೆಚ್ಚಿನ ರಕ್ಷಣೆ ನೀಡುವ ಅಗತ್ಯವಿದೆ. 

ಮನೆಯಿಂದ ಹೊರಗಿದ್ದ ಸಂದರ್ಭ:
ಮನೆಯಿಂದ ಹೊರಗಿದ್ದ ಸಂದರ್ಭದಲ್ಲಿ ಭೂಕಂಪನವಾದಾಗ, ಭೂಮಿ ಮೇಲೆ ಮಲಗಿ. ಕಟ್ಟಡ, ಮನೆ, ಸೇತುವೆ, ಮರಗಳಿಂದ ದೂರವಿರಿ

ವಾಹನ ಚಲಾಯಿಸುತ್ತಿದ್ದರೆ:
ವಾಹನ ಡ್ರೈವಿಂಗ್ ಮಾಡುತ್ತಿದ್ದರೆ, ವಾಹನ ನಿಲ್ಲಿಸಿ ಹ್ಯಾಂಡ್ ಬ್ರೇಕ್ ಹಾಕಿ. ವಾಹನದಿಂದ ಹೊರಬಂದರೆ ಉತ್ತಮ. ಸೇತುವೆ, ಕಟ್ಟಡ, ಮರದ ಕೆಳಗೆ ಕಾರು ನಿಲ್ಲಿಸಬೇಡಿ

ಎತ್ತರ ಕಟ್ಟಡ, ಅಪಾರ್ಮೆಂಟ್ ಮೇಲಿನ ಅಂತಸ್ತಿನಲ್ಲಿದ್ದರೆ:
ಮೇಲಿನ ಅಂತಸ್ತಿನಲ್ಲಿ ವಾಸ ಮಾಡುವವರು ಭೂಕಂಪನವಾದಾಗ ಹೊರಗೆ ಓಡಬೇಕೋ ಅಥವಾ ಅಲ್ಲೆ ಇರಬೇಕೋ ಅನ್ನೋದು ಹಲವರ ಪ್ರಶ್ನೆ. ಮೇಲಿನ ಅಂತಸ್ತಿನಿಂದ ಓಡಿ ಕೆಳಗೆ ಬಂದು ಖಾಲಿ ಜಾಗದಲ್ಲಿ ನಿಲ್ಲುವಷ್ಟು ಸಮಯ ಇರುವುದಿಲ್ಲ. ಇಷ್ಟೇ ಅಲ್ಲ ಇದು ಅಪಾಯಕಾರಿ ಕೂಡ ಹೌದು. ಹೀಗಾಗಿ ಎಲ್ಲಿದ್ದೀರೋ ಅಲ್ಲೇ ಇರುವುದು ಸೂಕ್ತ.  ಕಂಪನ ನಿಂತಾಗ ತಕ್ಷಣವೇ ಮನೆಯಿಂದ ಹೊರಬನ್ನಿ. ಕಂಪನ ನಿಂತಾಗ, ಲಘು ಕಂಪನ ಅಥವಾ ಏನೂ ಆಗಿಲ್ಲ ಎಂದು ಮನೆಯಲ್ಲೇ ಇರಬೇಡಿ. ತಕ್ಷಣವೇ ಹೊರಬನ್ನಿ. 

ಮನೆಯ ಹೊರಗಡೆ ಇದ್ದರೆ, ಕಂಪನ ಆರಂಭವಾದಾಗ, ಬಿಲ್ಡಿಂಗ್ ದಾಡಿ ಹೋಗುವ ಸಾಹಸ ಮಾಡಬೇಡಿ. ಕೆಲ ಸೆಕೆಂಡ್‌ಗಳಲ್ಲಿ ಖಾಲಿ ಪ್ರದೇಶಕ್ಕೆ ಅಥವ ಕಟ್ಟಡಗಳಿಂದ ದೂರವಿರಲು ಅವಕಾಶಿದ್ದರೆ ಮಾತ್ರ ಈ ಸಾಹಸಕ್ಕೆ ಕೈಹಾಕಿ. 

ಭೂಕಂಪನ ನಿಂತಾಗ ಎಲ್ಲವೂ ಮುಗಿಯಿಂತ ಎಂಬ ನಿರಾಳತೆ ಬೇಡ. ಕಾರಣ ಭೂಮಿ ಕಂಪನ ನಿಲ್ಲಲು ಕೆಲ ಹೊತ್ತ ತೆಗೆದುಕೊಳ್ಳುತ್ತದೆ. ಹೀಗಾಗಿ ಈ ವೇಳೆಯೂ ಸಣ್ಣ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ಲಘು ಭೂಕಂಪನಲನ್ನು ಫೋರ್ಶಾಕ್ ಎಂದು ಕರೆಯುತ್ತಾರೆ. ಆದರೆ ಇದರ ಬೆನ್ನಲ್ಲೇ ತೀವ್ರ ಪ್ರಮಾಣದ ಭೂಕಂಪ ಸಾಧ್ಯತೆಗಳಿವೆ. ಇದನ್ನು ಮೈನ್‌ಶಾಕ್ ಎಂದು ಕರೆಯುತ್ತಾರೆ.

ಇವೆಲ್ಲವೂ ಲಘು ಭೂಕಂಪನವಾದಾಗಾ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳು.