Asianet Suvarna News Asianet Suvarna News

ರೈಲ್ವೆ ಟ್ರ್ಯಾಕ್ ಮೇಲೆ ಎಲ್‌ಪಿಜಿ ಸಿಲಿಂಡರ್ ಇಟ್ಟು ಕಲಿಂದಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿಸಲು ಯತ್ನ

ದೇಶದಲ್ಲಿ ಇತ್ತೀಚೆಗೆ ರೈಲು ಹಳಿ ತಪ್ಪುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದರ ಹಿಂದೆ ಏನಾದರೂ ವಿಧ್ವಂಸಕ ಕೃತ್ಯ ನಡೆಸುವ ಕಾಣದ ಕೈಗಳ ಕೈವಾಡ ಇರಬಹುದೇ ಎಂಬ ಶಂಕೆ ರೈಲ್ವೆ ಅಧಿಕಾರಿಗಳಲ್ಲೂ ಮೂಡಿತ್ತು. ಆದರೆ ಈ ಅನುಮಾನಕ್ಕೆ ಪುಷ್ಠಿ ನೀಡುವಂತಹ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. 

An attempt was made to derailment of the Kalindi Express train by placing an LPG cylinder, Matchbox, petrol on the railway track akb
Author
First Published Sep 9, 2024, 1:23 PM IST | Last Updated Sep 9, 2024, 1:23 PM IST

ಕಾನ್ಪುರ: ದೇಶದಲ್ಲಿ ಇತ್ತೀಚೆಗೆ ರೈಲು ಹಳಿ ತಪ್ಪುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇದರ ಹಿಂದೆ ಏನಾದರೂ ವಿಧ್ವಂಸಕ ಕೃತ್ಯ ನಡೆಸುವ ಕಾಣದ ಕೈಗಳ ಕೈವಾಡ ಇರಬಹುದೇ ಎಂಬ ಶಂಕೆ ರೈಲ್ವೆ ಅಧಿಕಾರಿಗಳಲ್ಲೂ ಮೂಡಿತ್ತು. ಆದರೆ ಈ ಅನುಮಾನಕ್ಕೆ ಪುಷ್ಠಿ ನೀಡುವಂತಹ ಘಟನೆಯೊಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಕಾನ್ಪುರದ ಶಿವರಾಜ್ಪುರ ಪ್ರದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಅನ್ನು ರೈಲ್ವೆ ಟ್ಯ್ಯಾಕ್ ಮೇಲೆ ಅಡ್ಡಲಾಗಿ ಇಟ್ಟು ಹಳಿ ತಪ್ಪಿಸುವ  ಯತ್ನ ನಡೆದಿದೆ. ಭಿವಾನಿಯಿಂದ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ, ಕಲಿಂದಿ ಎಕ್ಸ್‌ಪ್ರೆಸ್ ರೈಲನ್ನು ಹಳಿ ತಪ್ಪಿಸಲು ಹಳಿ ಮೇಲೆ ಸಿಲಿಂಡರ್ ಇಟ್ಟು ದುಷ್ಕರ್ಮಿಗಳು ಸಂಚು ರೂಪಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ನಿನ್ನೆ ಬೆಳಗ್ಗೆ ಈ ಘಟನೆ ನಡೆದಿದ್ದು, ರೈಲು ಸಿಲಿಂಡರ್‌ಗೆ ಡಿಕ್ಕಿ ಹೊಡೆದು ಬಳಿಕ ನಿಂತಿದೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಸಿಲಿಂಡರ್ ಟ್ರ್ಯಾಕ್‌ನಲ್ಲೇ ದೂರ ಹೋಗಿ ನಜ್ಜುಗುಜ್ಜಾಗಿ  ಬಿದ್ದಿದೆ. ಎಲ್‌ಪಿಜಿ ಸಿಲಿಂಡರ್‌ನ್ನು ಟ್ರ್ಯಾಕ್ ಮೇಲೆ ಇಡುವ ಮೂಲಕ ಕಲಿಂದಿ ಎಕ್ಸ್‌ಪ್ರೆಸ್ ರೈಲನ್ನು ಹಳಿ ತಪ್ಪಿಸುವ ಪ್ರಯತ್ನ ಮಾಡಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಬೆಳಗ್ಗೆ 8.20ರ ಸುಮಾರಿಗೆ ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಆಗಮಿಸಿ ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳನ್ನು ಕರೆಸಲಾಗಿದ್ದು, ಪ್ರಕರಣದ ಬಗ್ಗೆ ರೈಲ್ವೆ ರಕ್ಷಣಾ ಪಡೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. 

ಎರಡು ತುಂಡಾದ ಚಲಿಸುತ್ತಿದ್ದ ಮಗಧ್ ಎಕ್ಸ್‌ಪ್ರೆಸ್ ರೈಲು, ಕಪ್ಲಿಂಗ್ ವೈಫಲ್ಯದಿಂದ ಅವಘಡ!

ರೈಲಿನ ಲೋಕೋ ಪೈಲಟ್ ಹಳಿಯಲ್ಲಿ ಸಿಲಿಂಡರ್ ಇರುವುದನ್ನು ಗಮನಿಸಿ ಎಮರ್ಜೆನ್ಸಿ ಬ್ರೇಕ್ ಹಾಕಿದ್ದಾರೆ ಎಂದು ಕಾನೂನು ಹಾಗೂ ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಕಮೀಷನರ್‌ ಹರೀಶ್ ಚಂದ್ರ ಹೇಳಿದ್ದಾರೆ. ಆದರೂ ಟ್ರೈನ್‌ ಸಿಲಿಂಡರ್‌ಗೆ ಡಿಕ್ಕಿ ಹೊಡೆದು ಬಳಿಕ ನಿಂತಿದೆ. ಪರಿಣಾಮ ಸಿಲಿಂಡರ್ ಟ್ರ್ಯಾಕ್‌ನಿಂದ ದೂರ ಹೋಗಿ ಬಿದ್ದಿದೆ. ಈ ವಿಚಾರವನ್ನು ಲೋಕೋ ಪೈಲಟ್‌ ರೈಲಿನ ಗಾರ್ಡ್ ಹಾಗೂ ಗೇಟ್‌ಮ್ಯಾನ್‌ಗಳಿಗೆ ತಿಳಿಸಿದ್ದಾರೆ ಎಂದು ಹರೀಶ್ ಚಂದ್ರ ಹೇಳಿದ್ದಾರೆ. 

ಘಟನೆಯ ನಂತರ ಸುಮಾರು 20 ನಿಮಿಷಗಳ ಕಾಲ ಆ ಸ್ಥಳದಲ್ಲೇ ರೈಲು ನಿಂತಿತ್ತು. ನಂತರ ಬಿಲ್ಹಾಪುರ ರೈಲ್ವೆ ಸ್ಟೇಷನ್‌ನಲ್ಲಿ ಈ ಬಗ್ಗೆ ತನಿಖೆಗಾಗಿ ಮತ್ತೆ ರೈಲನ್ನು ನಿಲ್ಲಿಸಲಾಯ್ತು. ಜೊತೆಗೆ ರೈಲು ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಸಿಲಿಂಡರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಘಟನಾ ಸ್ಥಳದಲ್ಲಿ ಒಂದು ಬಾಟಲ್ ಪೆಟ್ರೋಲ್ ಹಾಗೂ ಮ್ಯಾಚ್‌ಬಾಕ್ಸನ್ನು ಕೂಡ ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸಿಪಿ ಹರೀಶ್ ಚಂದ್ರ ಹೇಳಿದ್ದಾರೆ.  ಹೀಗೆ ರೈಲು ಹಳಿ ತಪ್ಪುವುದಕ್ಕೆ ಪ್ರಯತ್ನಿಸಿದ ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಲಾಗುವುದು ಎಂದು ಅವರು ಹೇಳಿದ್ದಾರೆ. 

ಇದು ರೈಲು ಸೀಟಿಗಾಗಿ ನಡೆದ ಜಗಳವಲ್ಲ, ವಂದೇ ಭಾರತ್ ಟ್ರೈನ್ ಓಡಿಸಲು ಲೋಕೋ ಪೈಲೆಟ್ಸ್ ಕಿತ್ತಾಟ!

Latest Videos
Follow Us:
Download App:
  • android
  • ios