ಯೋಧನ ಜೀವ ಉಳಿಸಿ, ತನ್ನ ಪ್ರಾಣ ಬಿಟ್ಟ ಸೇನಾ ಶ್ವಾನ ಕೆಂಟ್
ಇಬ್ಬರು ಉಗ್ರರು ಹಾಗೂ ಸೇನೆ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿ ಓರ್ವ ಉಗ್ರ ಹತನಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಇವರೊಂದಿಗೆ ಸೇನೆಯ ಕೆಂಟ್ ಎನ್ನುವ ಶ್ವಾನ ತನ್ನ ಜತೆಗಿನ ಸೈನಿಕನ ಜೀವ ಉಳಿಸಿ ಮೃತಪಟ್ಟಿದೆ.

ಜಮ್ಮು: ಇಬ್ಬರು ಉಗ್ರರು ಹಾಗೂ ಸೇನೆ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹುತಾತ್ಮನಾಗಿ ಓರ್ವ ಉಗ್ರ ಹತನಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಇವರೊಂದಿಗೆ ಸೇನೆಯ ಕೆಂಟ್ ಎನ್ನುವ ಶ್ವಾನ ತನ್ನ ಜತೆಗಿನ ಸೈನಿಕನ ಜೀವ ಉಳಿಸಿ ಮೃತಪಟ್ಟಿದೆ. ಇಬ್ಬರು ಉಗ್ರರು ಇಲ್ಲಿನ ಕಾಡಿನಲ್ಲಿ ಒಳನುಸುಳುತ್ತಿರುವ ಮಾಹಿತಿಯನ್ನು ಪಡೆದ ಸೇನೆ, ‘ಆಪರೇಷನ್ ಸುಜಲೀಗಾಲಾ’ ಮೂಲಕ ಹುಡುಕಾಟ ನಡೆಸಿತ್ತು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹಾಗೂ ಉಗ್ರ ಬಲಿಯಾಗಿದ್ದಾರೆ. ಜೊತೆಗೆ ಇಬ್ಬರು ಸೇನೆ ಜವಾನ್ ಹಾಗೂ ಓರ್ವ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಿಕ್ಕ ಓರ್ವ ಉಗ್ರ ಪರಾರಿಯಾಗಿದ್ದಾನೆ. ಉಗ್ರರಿಂದ ಬಟ್ಟೆ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನೆ ತಿಳಿಸಿದೆ.
ಈ ಗುಂಡಿನ ಕಾಳಗದಲ್ಲಿ ಮೃತಪಟ್ಟ ಶ್ವಾನ ಕೆಂಟ್‌ಗೆ ಕೇವಲ ಆರು ವರ್ಷ. ಈ ಶ್ವಾನ ಈ ಕಾರ್ಯಾಚರಣೆಯ ಮುಂಚೂಣಿಯಲ್ಲಿತ್ತು. ಪಲಾಯನಗೈಯುತ್ತಿದ್ದ ಉಗ್ರರ ಜಾಡು ಹಿಡಿದು ಬೆನ್ನಟ್ಟಿದ ಈ ಶ್ವಾನ ತನ್ನ ಪಡೆಯನ್ನು ಮುನ್ನಡೆಸುತ್ತಿತ್ತು. ಈ ವೇಳೆ ಭಾರಿ ಗುಂಡಿನ ಕಾಳಗ ನಡೆದಿದ್ದು, ತನ್ನ ನಿರ್ವಾಹಕನನ್ನು ರಕ್ಷಿಸುತ್ತಾ ಕೆಂಟ್ ಪ್ರಾಣ ಬಿಟ್ಟಿದೆ. ಸೇನೆಯ ಅತ್ಯುತ್ತಮ ಸಂಪ್ರದಾಯವಾದ ಪ್ರಾಣತ್ಯಾಗವನ್ನು ಕೆಂಟ್ ಮಾಡಿದೆ ಎಂದು ಸೇನೆ ಹೇಳಿಕೆ ಬಿಡುಗಡೆ ಮಾಡಿದೆ. ಲ್ಯಾಬ್ರಡಾರ್ ತಳಿಯ ಆರು ವರ್ಷದ ಈ ಹೆಣ್ಣು ಶ್ವಾನ ಕೆಂಟ್ 21 ಆರ್ಮಿ ಡಾಗ್ ಯುನಿಟ್‌ನಲ್ಲಿ ಕಾರ್ಯನಿರ್ವಹಿಸುತ್ತಿತ್ತು.
Army Dog Zoom Passed Away: ಟೆರಿರಿಸ್ಟ್ ಜೊತೆ ಕಾದಾಡಿದ್ದ ಸೇನಾ ಶ್ವಾನ 'ಜೂಮ್' ವಿಧಿವಶ!
ಉಗ್ರರ ವಿರುದ್ಧ ಹೋರಾಟದಲ್ಲಿ ಹುತಾತ್ಮನಾದ 2 ವರ್ಷದ ಅಲೆಕ್ಸ್: ಸೇನಾ ಶ್ವಾನಕ್ಕೆ ಭಾವಪೂರ್ಣ ವಿದಾಯ
4 ವರ್ಷ ಬಳಿಕ ಅ.21ಕ್ಕೆ ಪಾಕಿಸ್ತಾನಕ್ಕೆ ನವಾಜ್ ಷರೀಫ್ ವಾಪಸ್
ಇಸ್ಲಾಮಾಬಾದ್: ಸ್ವಯಂಘೋಷಿತ ಗಡೀಪಾರು ವಿಧಿಸಿಕೊಂಡು ಲಂಡನ್ನಿನಲ್ಲಿ ವಾಸಿಸುತ್ತಿರುವ ಪಾಕಿಸ್ತಾನದ "ಮುಸ್ಲಿಂ ಲೀಗ್- ನವಾಜ್" (ಪಿಎಂಎಲ್-ಎನ್) ಮುಖ್ಯಸ್ಥ ನವಾಜ್ ಷರೀಫ್ (73) ಅ.21ರಂದು ಪಾಕಿಸ್ತಾನಕ್ಕೆ ಬರಲಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ನವಾಜ್ ಸಹೋದರ ಶೆಹಬಾಜ್ ಷರೀಫ್ ಹೇಳಿದ್ದಾರೆ. 2019ರಿಂದ ಲಂಡನ್ನಿನಲ್ಲಿ ವಾಸಿಸುತ್ತಿರುವ ನವಾಜ್ ಪಾಕಿಸ್ತಾನದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡಲು ದೇಶಕ್ಕೆ ಮರಳುತ್ತಿದ್ದಾರೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ನವಾಜ್ ದೋಷಿ ಎಂದು ಸಾಬೀತಾದ ಬಳಿಕ ವೈದ್ಯಕೀಯ ಕಾರಣದಿಂದ ಅವರು ಲಂಡನ್ನಿಗೆ ಹೋಗಿದ್ದರು.
ಆಗಸ್ಟ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.6.83ಕ್ಕೆ ಇಳಿಕೆ
ನವದೆಹಲಿ: ದೇಶದಲ್ಲಿ ಆಹಾರ ಪದಾರ್ಥಗಳ ಮೇಲಿನ ಬೆಲೆ ಇಳಿಸುವಿಕೆಯಿಂದಾಗಿ ದೇಶದಲ್ಲಿ ಆಗಸ್ಟ್ ತಿಂಗಳ ಚಿಲ್ಲರೆ ಹಣದುಬ್ಬರವು ಶೇ.6.83ಕ್ಕೆ ಇಳಿಕೆಯಾಗಿದೆ. ಗ್ರಾಹಕ ಬೆಲೆ ಸೂಚ್ಯಂಕವು (ಸಿಪಿಐ) ಜುಲೈ ತಿಂಗಳಿನಲ್ಲಿ ಶೇ.7.44ರಷ್ಟಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ಶೇ.7ರಷ್ಟಿತ್ತು. ಕೇಂದ್ರ ಸರ್ಕಾರ ಆಹಾರ ಪದಾರ್ಥಗಳ ಮೇಲಿನ ಬೆಲೆ ಕಡಿತಗೊಳಿಸಲು ಕ್ರಮ ಕೈಗೊಂಡ ಪರಿಣಾಮ ಆಹಾರ ಹಣದುಬ್ಬರವು ಜುಲೈ ತಿಂಗಳಿನ ಶೇ.11.54 ನಿಂದ ಶೇ.9.94ಕ್ಕೆ ಇಳಿಕೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ 2023-24ನೇ ಸಾಲಿನ ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರವನ್ನು ಶೇ.5.4ರಷ್ಟು ಇರಲಿದೆ ಎಂದು ಅಂದಾಜಿಸಿದೆ.