Asianet Suvarna News Asianet Suvarna News

ಉಗ್ರರ ವಿರುದ್ಧ ಹೋರಾಟದಲ್ಲಿ ಹುತಾತ್ಮನಾದ 2 ವರ್ಷದ ಅಲೆಕ್ಸ್: ಸೇನಾ ಶ್ವಾನಕ್ಕೆ ಭಾವಪೂರ್ಣ ವಿದಾಯ

ಜಮ್ಮುಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇನೆ ಹಾಗೂ ಉಗ್ರರ ನಡುವೆ ನಡೆದ ಕಾರ್ಯಾಚರಣೆಯಲ್ಲಿ ಸೇನಾ ಶ್ವಾನ ಆಕ್ಸೆಲ್ ಹುತಾತ್ಮನಾಗಿದೆ. ಶನಿವಾರ (ಜುಲೈ 30) ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ವಾಣಿಗಂಬಳದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಸಂದರ್ಭದಲ್ಲಿ ಸೇನಾ ಶ್ವಾನ 'ಆಕ್ಸೆಲ್' ದೇಶಕ್ಕಾಗಿ ತನ್ನ ಪ್ರಾಣಾರ್ಪಣೆ ಮಾಡಿದೆ.

Indian army pay last respect to martyr dog Axel, died during a counter terrorism operation in Baramulla akb
Author
Jammu, First Published Jul 31, 2022, 6:11 PM IST

ಶ್ರೀನಗರ: ಜಮ್ಮುಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇನೆ ಹಾಗೂ ಉಗ್ರರ ನಡುವೆ ನಡೆದ ಕಾರ್ಯಾಚರಣೆಯಲ್ಲಿ ಸೇನಾ ಶ್ವಾನ ಆಕ್ಸೆಲ್ ಹುತಾತ್ಮನಾಗಿದೆ. ಶನಿವಾರ (ಜುಲೈ 30) ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ವಾಣಿಗಂಬಳದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಸಂದರ್ಭದಲ್ಲಿ ಸೇನಾ ಶ್ವಾನ 'ಆಕ್ಸೆಲ್' ದೇಶಕ್ಕಾಗಿ ತನ್ನ ಪ್ರಾಣಾರ್ಪಣೆ ಮಾಡಿದೆ. ಉಗ್ರರಿದ್ದ ಕಟ್ಟಡದ ತೆರವು ಕಾರ್ಯಾಚರಣೆಯಲ್ಲಿ ಸೇವೆ ನೀಡುತ್ತಿದ್ದ ಈ ಶ್ವಾನದ ಮೇಲೆ ಭಯೋತ್ಪಾದಕರು ಮೂರು ಬಾರಿ ಗುಂಡು ಹಾರಿಸಿದ್ದರು.

ಅಲೆಕ್ಸ್, ಕೇವಲ ಎರಡು ವರ್ಷ ವಯಸ್ಸಿನ ತಿಳಿ ಕಂದು ಬಣ್ಣದ ಬೆಲ್ಜಿಯನ್ ಮಾಲಿನೊಯಿಸ್ ತಳಿಯ ಶ್ವಾನವಾಗಿದ್ದು, 26ನೇ ಆರ್ಮಿ ಶ್ವಾನ ಘಟಕದ ಭಾಗವಾಗಿದ್ದರು. ಅಲೆಕ್ಸ್‌ನನ್ನು 29 ರಾಷ್ಟ್ರೀಯ ರೈಫಲ್ಸ್ ಘಟಕದೊಂದಿಗೆ 10ನೇ ಸೆಕ್ಟರ್ ಆರ್‌ಆರ್ ಪ್ರತಿ ಬಂಡಾಯ ಪಡೆಗಳ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಆಲೆಕ್ಸ್ ಹಾಗೂ ಮತ್ತೊಂದು ಆರ್ಮಿ ಡಾಗ್ 'ಬಾಲಾಜಿ' ಈ ಕಾರ್ಯಾಚರಣೆಯ ಭಾಗವಾಗಿದ್ದರು. ಆರಂಭದಲ್ಲಿ, ಕಟ್ಟಡದ ಒಳಗೆ ಬಾಲಾಜಿಯನ್ನು ಕಳುಹಿಸಲಾಯಿತು. ಬಾಲಾಜಿ ಒಳಗಿನ ಕಾರಿಡಾರ್ ಅನ್ನು ಸ್ಯಾನಿಟೈಸ್ ಮಾಡಿತ್ತು. ಬಾಲಾಜಿಯನ್ನು ಹಿಂಬಾಲಿಸಿದ ಆಕ್ಸೆಲ್ ಮೊದಲ ಕೊಠಡಿಯೊಳಗೆ ಹೋಗಿ ಅದನ್ನು ತೆರವುಗೊಳಿಸಿದ. ಆದರೆ, ಆತ ಎರಡನೇ ಕೊಠಡಿಗೆ ಪ್ರವೇಶಿಸಿದಾಗ ಉಗ್ರರು ಆತನ ಮೇಲೆ ಗುಂಡು ಹಾರಿಸಿದರು. 15 ಸೆಕೆಂಡುಗಳ ಕಾಲ  ಕೆಲವು ಚಲನೆಗಳನ್ನು ತೋರಿಸಿದ ಶ್ವಾನ ನಂತರ ನಿಷ್ಕ್ರಿಯವಾಗಿದೆ.

 

ಇದಾದ ಬಳಿಕವೂ ಸೈನಿಕರು ಮತ್ತು ಭಯೋತ್ಪಾದಕರ ನಡುವೆ ಕೆಲ ಕಾಲ ಗುಂಡಿನ ಚಕಮಕಿ ನಡೆದಿದ್ದು, ಏಕಾಂಗಿ ಭಯೋತ್ಪಾದಕ ಅಖ್ತರ್ ಹುಸೇನ್ ಭಟ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. 5 ಗಂಟೆಗಳ ಕಾರ್ಯಾಚರಣೆ ಮುಗಿದ ನಂತರ ಆಕ್ಸೆಲ್ ಪಾರ್ಥಿವ ಶರೀರವನ್ನು ಕಟ್ಟಡದಿಂದ ಹೊರತೆಗೆಯಲಾಯಿತು ಮತ್ತು ಮರಣೋತ್ತರ ಪರೀಕ್ಷೆಗಾಗಿ 54 ಸಶಸ್ತ್ರ ಪಡೆಗಳ ಪಶುವೈದ್ಯಕೀಯ ಆಸ್ಪತ್ರೆಗೆ ಕಳುಹಿಸಲಾಯಿತು. ವರದಿಗಳ ಪ್ರಕಾರ, ಬುಲೆಟ್ ಪ್ರವೇಶ ಮತ್ತು ನಿರ್ಗಮನದ ಗಾಯಗಳನ್ನು ಹೊರತುಪಡಿಸಿ  ಎಕ್ಸೆಲ್‌ ದೇಹದಲ್ಲಿ ಹತ್ತು ಹೆಚ್ಚುವರಿ ಗಾಯಗಳು ಮತ್ತು ಎಲುಬು ಮುರಿತವಾಗಿತ್ತು ಎಂದು ಸೇನಾ ಮೂಲಗಳು ವರದಿ ಮಾಡಿವೆ.

 

ಆಕ್ಸೆಲ್‌ನಂತಹ  ಉತ್ತಮವಾಗಿ ತರಬೇತಿ ಪಡೆದ ಆಕ್ರಮಣಕಾರಿ ನಾಯಿಗಳನ್ನು ಉಗ್ರಗಾಮಿಗಳ ಅಡಗು ತಾಣ ಪತ್ತೆ ಮಾಡಲು ಬಳಸಲಾಗುತ್ತದೆ. ಭಯೋತ್ಪಾದಕರ ಮೇಲೆ ಮಾರಣಾಂತಿಕ ಗಾಯಗಳನ್ನು ಉಂಟು ಮಾಡಲು ಅವುಗಳಿಗೆ ತರಬೇತಿ ನೀಡಲಾಗುತ್ತದೆ. ಆಕ್ಸೆಲ್ ದಕ್ಷ K9 ಅಧಿಕಾರಿಯಾಗಿದ್ದು, ಈ ಹಿಂದೆ ಹಲವಾರು ಯಶಸ್ವಿ ಕಾರ್ಯಾಚರಣೆಗಳ ಭಾಗವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ತರಬೇತಿ ಪಡೆದ ಶ್ವಾನಗಳಿಗೆ ಕ್ಯಾಮೆರಾಗಳನ್ನು ಅಳವಡಿಸಿದಾಗ, ಭಯೋತ್ಪಾದಕರ ನಿಖರವಾದ ಸ್ಥಾನಗಳನ್ನು ನಿರ್ಧರಿಸಲು ಸಹಾಯ ಮಾಡುತ್ತದೆ ಮತ್ತು ಭಯೋತ್ಪಾದಕರು ಹೊಂದಿರುವ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳಂತಹ ಇತರ ವಿವರಗಳನ್ನು ನಿರ್ಧರಿಸಲು ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, ಡ್ರೋನ್‌ಗಳು ಉಗ್ರಗಾಮಿಗಳು ಸಿಕ್ಕಿಬಿದ್ದಿರುವ ಕಟ್ಟಡ ಅಥವಾ ಮನೆಯ ಅವಲೋಕನವನ್ನು ನಮಗೆ ನೀಡುತ್ತವೆ. ಆದರೆ ಅವು ನಮಗೆ ಮನೆ ಅಥವಾ ಅಲ್ಲಿನ ವಾಸ್ತವತೆಯ ಸ್ಪಷ್ಟತೆಯನ್ನು ನೀಡುವುದಿಲ್ಲ. ಆದರೆ ಶ್ವಾನಗಳು ಕಟ್ಟಡದೊಳಗಿನ ಸ್ಪಷ್ಟ ಚಿತ್ರಣ ನೀಡಿ ಅಗತ್ಯವಿರುವ ಕಾರ್ಯಾಚರಣೆಗಳಲ್ಲಿ ನಮಗೆ ಸಹಾಯ ಮಾಡುತ್ತವೆ ಎಂದರು. 

ಆಕ್ಸೆಲ್‌ನ ತರಬೇತುದಾರ ಶ್ವಾನದ ಮರಣದಿಂದ ತೀವ್ರವಾಗಿ ಭಾವುಕವಾಗಿದ್ದರು. ಆಕ್ಸೆಲ್ ಮೃತದೇಹದ ಪಕ್ಕದಲ್ಲಿ ಕುಳಿತುಕೊಂಡು ಶ್ವಾನವನ್ನು ನೋಡುತ್ತಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಆಕ್ಸೆಲ್‌ ಅನ್ನು ನಾವು  ಸೋಪೋರ್‌ನ ತುಲಿಬಲ್ ಪ್ರದೇಶದಲ್ಲಿ ಎನ್‌ಕೌಂಟರ್ ಸ್ಥಳಕ್ಕೆ ಕರೆದೊಯ್ದಿದ್ದೆವು. ಅಲ್ಲಿ ಇಬ್ಬರು ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಮತ್ತು ಅವನು ಅಲ್ಲಿ ತನ್ನ ಕೆಲಸವನ್ನು ಮಾಡಿದ್ದಾನೆ. ಆತನ ನಿಧನದಿಂದ ಇಡೀ ಘಟಕವು ದುಃಖಿತವಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಂದು ಆಕ್ಸೆಲ್‌ನ ಅಂತಿಮ ಸಂಸ್ಕಾರವನ್ನು ಕಿಲೋ ಫೋರ್ಸ್ ಕಮಾಂಡರ್‌ನಲ್ಲಿ ನಡೆಸಲಾಯಿತು. ಸೇನೆಯ ಅಧಿಕಾರಿಗಳು, ಸಿಬ್ಬಂದಿ ಆಗಲಿದ ಶ್ವಾನಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ  26 ಎಡಿಯು ಆವರಣದಲ್ಲಿ ಸಮಾಧಿ ಮಾಡಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಗಣ್ಯರು ಸೇರಿದಂತೆ ಅನೇಕರು ಹುತಾತ್ಮನಾದ ಆಕ್ಸೆಲ್‌ಗೆ ಅಂತಿಮ ನಮನ ಸಲ್ಲಿಸಿದ್ದಾರೆ. 
 

Follow Us:
Download App:
  • android
  • ios