Asianet Suvarna News Asianet Suvarna News

ಲ್ಯಾಂಡಿಂಗ್ ವೇಳೆ ದುಬೈ-ಕೋಯಿಕ್ಕೋಡ್‌ ಏರ್ ಇಂಡಿಯಾ ವಿಮಾನ ಕ್ರ್ಯಾಶ್!

ಭಾರಿ ಮಳೆ ಸುರಿಯುತ್ತಿರುವ ಕಾರಣ ದುಬೈನಿಂದ ಕೇರಳದ ಕೋಝಿಕೋಡ್‌ಗೆ ಪ್ರಯಾಣ ಬೆಳೆಸಿದ ಏರ್ ಇಂಡಿಯಾ ವಿಮಾನ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ. 

An Air India Flight from Dubai to Kozhikode in Kerala crashed at the Calicut International Airport
Author
Bengaluru, First Published Aug 7, 2020, 9:17 PM IST

ಕ್ಯಾಲಿಕಟ್(ಆ.07): 174 ಪ್ರಯಾಣಿಕರನ್ನು ಹೊತ್ತು ದುಬೈನಿಂದ ಕೇರಳದ ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ. ಭಾರಿ ಮಳೆ ಕಾರಣ ಪೈಲೈಟ್‌ಗೆ ರನ್ ವೇ ಕಾಣದಾಗಿದೆ. ಹೀಗಾಗಿ ವಿಮಾನ ಎರಡು ಹೋಳಾಗಿ ಅಪಘಾತಕ್ಕೀಡಾಗಿದೆ. ಅವಘಡದಲ್ಲಿ 20 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಹಲವರು ಗಾಯಗೊಂಡಿದ್ದಾರೆ. ಇನ್ನು ಪೈಲೈಟ್ ಸಾವೀಗೀಡಾಗಿರುವುದಾಗಿ ರಾಜ್ಯ ಮಾಜಿ ಪ್ರವಾಸೋದ್ಯಮ ಸಚಿವ ಹಾಗೂಸಂಸದ ಅಲ್ಪೋನ್ಸಾ ಕೆಜೆ ಟ್ವೀಟ್ ಮಾಡಿದ್ದಾರೆ.

"

 

Second tragedy of the day in Kerala : Air India Express skids off the run way at Kozhikode, front portion splits , pilot dies and lots of passengers injured . All passengers evacuated. Very lucky the aircraft didn’t catch fire @narendramodi @JPNadda

ದುಬೈನಿಂದ ಪ್ರಯಾಣಿಕರನ್ನು ಹೊತ್ತು ಕೇರಳಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನ ಇನ್ನೇನು ಲ್ಯಾಂಡಿಂಗ್ ಆಗಬೇಕು ಅನ್ನುವಷ್ಟರಲ್ಲೇ ಅಪಘಾತಕ್ಕೀಡಾಗಿದೆ. ಇಂದು(ಆ.07) ಸಂಜೆ 7.10ಕ್ಕೆ ಅಪಘಾತ ಸಂಭವಿಸಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ 15ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಮೂಲಕ ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಓರ್ವ ಕನ್ನಡಿಗ ಪ್ರಯಾಣಿಕರು ಸೇರಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. 

ರನ್‌ವೇಯಿಂದ ಜಾರಿದ ವಿಮಾನ ಪಕ್ಕದ ಗೋಡೆಗೆ ಬಡಿದು ಇಬ್ಬಾಗವಾಗಿದೆ. ಹೀಗಾಗಿ ಪೈಲೈಟ್ ಸಾವಿಗೀಡಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಇನ್ನು ಹಲವರ ಸ್ಥಿತಿ ಗಂಭೀರವಾಗಿದೆ. ಕೊರೋನಾ ವೈರಸ್ ಕಾರಣ ವಿದೇಶದಲ್ಲಿ ಸಿಲುಕಿದ್ದ ಭಾರತೀಯರು ತವರಿಗೆ ಮರಳಲು ಕೇಂದ್ರ ಸರ್ಕಾರದ ವಂದೇ ಭಾರತ್ ಮಿಶನ್ ಯೋಜನೆಯಡಿಯ ವಿಮಾನ ಇದಾಗಿದೆ. ಕೊರೋನಾ ವೈರಸ್ ಕಾರಣ ದುಬೈನಲ್ಲಿ ಸಿಲುಕಿಕೊಂಡಿದ್ದ ಭಾರತೀಯರು ಇನ್ನೇನು ತವರು ನೆಲ ಸ್ಪರ್ಶಿಸುತ್ತದ್ದೇವೆ ಅನ್ನೋ ಸಂತಸದಲ್ಲಿ ವಿಮಾನ ಅವಘಡಕ್ಕೆ ತುತ್ತಾಗಿರುವುದು ದುರಂತ. 

ಅದೃಷ್ಟವಶಾತ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿಲ್ಲ. ಹೀಗಾಗಿ ಪ್ರಯಾಣಿಕರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿದೆ. 174 ಪ್ರಯಾಣಿಕರ ಪೈಕಿ 10 ಮಕ್ಕಳು ಸೇರಿದ್ದಾರೆ. ಕ್ಯಾಲಿಕಟ್‌ನ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗುಡ್ಡದ ಮೇಲಿದ್ದು, ಇಲ್ಲಿ ಲ್ಯಾಂಡಿಂಗ್ ಹೆಚ್ಚು ಅಪಾಯಕಾರಿಯಾಗಿದೆ. ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣ ರೀತಿಯ ಪ್ರದೇಶದಲ್ಲಿ ಕರಿಪುರ್ ವಿಮಾನ ನಿಲ್ದಾಣವಿದೆ. ಬಜ್ಪೆಯಯಲ್ಲಿ ಮೇ 22, 2010ರಲ್ಲಿ ದುಬೈನಿಂದ ಮಂಗಳೂರಿಗೆ ಆಗಮಿಸಿದ ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿತ್ತು ವಿಮಾನದಲ್ಲಿ 160 ಮಂದಿಯಲ್ಲಿ 158 ಮಂದಿ ಸಾವನ್ನಪ್ಪಿದ್ದರು..

ಕೋಯಿಕೋಡ್ ವಿಮಾನ ಪೈಲೆಟ್ ಹಾಗೂ ಸಿಬ್ಬಂದಿ ವಿವರ:
ಪೈಲೆಟ್: ಕ್ಯಾಪ್ಟನ್ ದೀಪಕ್ ಸಾಥೆ
ಕೋ ಪೈಲೆಟ್: ಅಖಿಲೇಶ್

ಕ್ಯಾಬಿನ್ ಕ್ರೂ
ಶಿಲ್ಪಾ ಕಾತ್ರ
ಅಕ್ಷಯ್ ಪಾಲ್ ಸಿಂಗ್
ಲಲಿತ್ ಕುಮಾರ್
ಬಿಸ್ವಾಸ್

 

ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಗಾಯಗೊಂಡಿರುವ ಪ್ರಯಾಣಿಕರು, ವಿಮಾನ ಸಿಬ್ಬಂದಿಗಳು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

 

Follow Us:
Download App:
  • android
  • ios