ಶುಕ್ರವಾರ ಭಾರೀ ಬಿಗಿ ಭದ್ರತೆಯಲ್ಲಿ ಸಂಸತ್ ಕರೆದುಕೊಂಡು ಬರಲಾಗಿತ್ತು. ಮಿಲಿಟರಿ ಏರ್‌ಕ್ರಾಫ್ಟ್ ಮೂಲಕ ದೆಹಲಿಗೆ ಕರೆದುಕೊಂಡು ಬರಲಾಗಿತ್ತು.
ನವದೆಹಲಿ: ಪೆರೋಲ್ ಮೇಲೆ ಬಂದು ಸಂಸದ ಸ್ಥಾನದ ಪ್ರಮಾಣವಚನ ಸ್ವೀಕರಿಸಿದ ಬಳಿಕ ಪ್ರತ್ಯೇಕವಾದಿ ಖಲಿಸ್ತಾನಿ, ಸಂಸದ ಅಮೃತಪಾಲ್ ಸಿಂಗ್ ಎಕ್ಸ್ ಖಾತೆಯ ಮೂಲಕ ವಿಷ ಉಗುಳಿದ್ದಾನೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ, ಅಮೃತಪಾಲ್ ಸಿಂಗ್ ಗೆದ್ದಿದ್ದು, ಶುಕ್ರವಾರ ಭಾರೀ ಬಿಗಿ ಭದ್ರತೆಯಲ್ಲಿ ಸಂಸತ್ ಕರೆದುಕೊಂಡು ಬರಲಾಗಿತ್ತು. ಇದೀಗ ತಮ್ಮ ಬೆಂಬಲಿಗರ ಮೂಲಕ ಎಕ್ಸ್ ಖಾತೆ ಮೂಲಕ ತಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮತ್ತೆ ವಿಷ ಹೊರ ಹಾಕಿದ್ದಾರೆ. ಅಮೃತ್ ಪಾಲ್ ಸಿಂಗ್ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜುಲೈ 6ರಂದು ನನ್ನ ತಾಯಿ ನೀಡಿದ ಹೇಳಿಕೆ ಗಮನಕ್ಕೆ ಬಂದಿದೆ. ಅವರ ಮಾತುಗಳಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ. ತಾಯಿ ತಿಳಿಯದೇ ಆ ಹೇಳಿಕೆ ನೀಡಿದ್ದಾರೆ ಎಂದು ನಾನು ನಂಬಿದ್ದೇನೆ. ನನ್ನನ್ನು ಬೆಂಬಲಿ ಸುವ ಅಥವಾ ಕುಟುಂಬದವರಿಂದ ಮತ್ತೊಮ್ಮೆ ಈ ರೀತಿಯ ಹೇಳಿಕೆ ಬರಬಾರದು. ಮುಂದುವರಿದು ಖಲಿಸ್ತಾನ ರಾಜ್ಯದ ಬಗ್ಗೆ ಕನಸು ಕಾಣೋದು ಅಪರಾಧವಲ್ಲ. ಇದು ಹೆಮ್ಮೆಯ ವಿಷಯವಾಗಿದೆ. ನಾವು ಆ ರಸ್ತೆಯಿಂದ ಹಿಂದೆ ಸರಿಯುವ ಕನಸು ಸಹ ಕಾಣಲು ಇಷ್ಟಪಡಲ್ಲ. ಇದಕ್ಕಾಗಿ ಲಕ್ಷಾಂತರ ಸಿಖ್‌ರು ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳಲಾಗಿದೆ.
ಸಂಸದ ಪ್ರಮಾಣವಚನಕ್ಕಾಗಿ ಸಿಖ್ ಧರ್ಮ ಪ್ರಚಾರಕನಾಗಿರುವ ಅಮೃತಪಾಲ್ ಸಿಂಗ್ ಸಂಸತ್‌ಗೆ ಕರೆದುಕೊಂಡು ಬರಲಾಗಿತ್ತು. ಸಂಸತ್ ಭವನದ ಒಳಗೆ ಮತ್ತು ಹೊರಗಡೆ ಭಾರೀ ಭದ್ರತೆಯನ್ನು ನಿಯೋಜಿಸಲಾಗಿತ್ತು. ಅಮೃತಪಾಲ್ ಸಿಂಗ್ 18ನೇ ಲೋಕಸಭೆಯ ಸಂಸದರಾಗಿ ಪಂಜಾಬಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಸಿಂಗ್ ಅವರನ್ನು ಅಸ್ಸಾಂನ ದಿಬ್ರುಗಢ ಜೈಲಿನಲ್ಲಿ ಇರಿಸಲಾಗಿದೆ. ಮಿಲಿಟರಿ ಏರ್‌ಕ್ರಾಫ್ಟ್ ಮೂಲಕ ದೆಹಲಿಗೆ ಕರೆದುಕೊಂಡು ಬರಲಾಗಿತ್ತು.
ಖಲಿಸ್ತಾನ ದಾಳಿಗೆ ಬೆದರಿದ ಪಂಜಾಬ್ ಸರ್ಕಾರ, ಅಮೃತಪಾಲ್ ಸಿಂಗ್ ಆಪ್ತ ಜೈಲಿನಿಂದ ಬಿಡುಗಡೆ!
ನಾಲ್ಕು ದಿನದ ಷರತ್ತುಬದ್ಧ ಪೆರೋಲ್
ಜೈಲಿನಲ್ಲಿದ್ದಾಗಲೇ ಪಂಜಾಬ್ ರಾಜ್ಯದ ಖದೂರ್ ಸಾಹಿಬ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಮೃತ್ ಪಾಲ್ ಸಿಂಗ್ ಸ್ಪರ್ಧೆ ಮಾಡಿದ್ರೆ, ಮಗ ಅಪ್ಪನ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದರು. ಜೈಲಿನಲ್ಲಿದ್ದುಕೊಂಡೇ ಅಮೃತಪಾಲ್ ಸಿಂಗ್ ಗೆಲುವು ದಾಖಲಿಸಿದ್ದರು. ಪದಗ್ರಹಣ ಹಿನ್ನೆಲೆ ಅಮೃತಪಾಲ್ ಸಿಂಗ್‌ಗೆ ನಾಲ್ಕು ದಿನದ ಪೆರೋಲ್ ನೀಡಲಾಗಿದೆ.
ಪೆರೋಲ್ ಅವಧಿಯಲ್ಲಿ ಅಮೃತಪಾಲ್ ಸಿಂಗ್, ಮಾಧ್ಯಮಗಳೊಂದಿಗೆ ಮಾತನಾಡುವಂತಿಲ್ಲ ಅಥವಾ ಯಾವುದೇ ವಿಷಯದ ಬಗ್ಗೆ ಹೇಳಿಕೆ ನೀಡುವಂತಿಲ್ಲ.ಅಮೃತಪಾಲ್ ಕುಟುಂಬ ಸದಸ್ಯರು ಸಹ ಯಾವುದೇ ಹೇಳಿಕೆ ನೀಡಿವಂತಿಲ್ಲ ಎಂಬ ನಿಯಮಗಳನ್ನು ವಿಧಿಸಲಾಗಿದೆ.
ಬಲೆಗೆ ಬಿದ್ದ.. ಖಲಿಸ್ತಾನಿ ಖಳನಾಯಕ.. ನಿಗೂಢ ಕಾರ್ಯಾಚರಣೆ ರಹಸ್ಯವೇನು?
ಅಮೃತಪಾಲ್ ಸಿಂಗ್ ತಾಯಿ ಹೇಳಿದ್ದೇನು?
ಅಮೃತಪಾಲ್ ಸಿಂಗ್ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ್ದ ಅವರ ತಾಯಿ, ಪಂಜಾಬಿನ ಯುವಕರ ಕುರಿತು ಮಾತನಾಡಿದ್ರೆ ಖಲಿಸ್ತಾನಿ ಸಮರ್ಥಕರಾಗಲ್ಲ. ಮಗ ಖಲಿಸ್ತಾನಿ ಸಮರ್ಥಕ ಅಲ್ಲ. ಪಂಜಾಬ್ ಮತ್ತು ಇಲ್ಲಿಯ ಯುವಕರ ಬಗ್ಗೆ ಮಾತನಾಡಿದವರು ಖಲೀಸ್ತಾನಿಗಳು ಆಗ್ತಾರಾ? ಮಗ ಸಂವಿಧಾನ ಪ್ರಕಾರವಾಗಿ ಚುನಾವಣೆ ಎದುರಿಸಿ ಗೆದ್ದು ಸಂಸದನಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹಾಗಾಗಿ ಆತನನ್ನು ಖಲೀಸ್ತಾನಿ ಎಂದು ಕರೆಯಬಾರದು ಎಂದು ಹೇಳಿದ್ದರು.
