ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭ ಬೆನ್ನಲ್ಲೇ ಕೇಂದ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ರಾತ್ರಿ ಪಾಕ್ ಗಡಿಯಲ್ಲಿನ ಬಿಎಸ್‌ಎಫ್ ಸೇರಿದಂತೆ ದೇಶದ ಗಡಿ ಕಾವಲುಪಡೆಗಳ ಮುಖ್ಯಸ್ಥರ ಜೊತೆಗೆ ಮಾತುಕತೆ ನಡೆಸಿದರು.
ನವದೆಹಲಿ (ಮೇ.09): ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭ ಬೆನ್ನಲ್ಲೇ ಕೇಂದ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ರಾತ್ರಿ ಪಾಕ್ ಗಡಿಯಲ್ಲಿನ ಬಿಎಸ್‌ಎಫ್ ಸೇರಿದಂತೆ ದೇಶದ ಗಡಿ ಕಾವಲುಪಡೆಗಳ ಮುಖ್ಯಸ್ಥರ ಜೊತೆಗೆ ಮಾತುಕತೆ ನಡೆಸಿದರು. ಆಪರೇಷನ್ ಸಿಂದೂರ ಕಾರ್ಯಾಚರಣೆ ಮತ್ತು ಪಾಕ್ ಭಾರತೀಯ ಮಿಲಿಟರಿ ನೆಲೆಗಳ ಮೇಲೆ ದಾಳಿ ಯತ್ನ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿರುವುದರಿಂದ ಅಂತಾರಾಷ್ಟ್ರೀಯ ಗಡಿಗಳಲ್ಲಿ ಪರಿಸ್ಥಿತಿಯನ್ನು ಶಾ ಅವಲೋಕಿಸಿದರು. ಈ ವೇಳೆ ಗಡಿ ಕಾವಲು ಪಡೆಗಳ ಮಹಾನಿರ್ದೇಶಕರು ಗೃಹ ಸಚಿವರಿಗೆ ಪ್ರಸ್ತುತ ಪರಿಸ್ಥಿತಿ ಮತ್ತು ಭದ್ರತೆಯನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಇನ್ನು ಸಿಐಎಸ್‌ಎಫ್ ಮುಖ್ಯಸ್ಥರೊಂದಿಗೆ ಶಾ ಮಾತನಾಡಿ ದೇಶದ ವಿಮಾನ ನಿಲ್ದಾಣಗಳಲ್ಲಿನ ಭದ್ರತೆಯ ಬಗ್ಗೆ ಮಾಹಿತಿ ಪಡೆದರು.
ಉಗ್ರರ ನೆಲೆ ಹೀಗಿದ್ದವು .. ಹೀಗಾದವು ...: ಭಾರತೀಯ ಸೇನೆಯು ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿದ ಪಾಕಿಸ್ತಾನದ ಉಗ್ರರ 9 ನೆಲೆಗಳ ಹಳೆಯ ಹಾಗೂ ಹೊಸ ಸ್ಯಾಟ್‌ಲೈಟ್ ಫೋಟೋ ಬಿಡುಗಡೆಯಾಗಿವೆ. ಇದರಲ್ಲಿ ಭಯೋತ್ಪಾದಕ ತಾಣಗಳು ಹೇಗಿದ್ದವು ಹಾಗೂ ಈಗ ಹೇಗಾದವು ಎಂಬುದರ ಚಿತ್ರಣವಿದೆ.
ಮ್ಯಾಕ್ಸರ್ ಟೆಕ್ನಾಲಜಿಸ್ ಈ ಉಪಗ್ರಹ ಚಿತ್ರವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಲಷ್ಕರ್- ಇ- ತೊಯ್ಬಾ(ಎಲ್‌ಇಟಿ), ಜೈಶ್- ಇ- ಮೊಹಮ್ಮದ್ (ಜೆಇಎಂ) ಮತ್ತು ಹಿಜ್ಬುಲ್ಲಾ ಮುಜಾಹಿದ್ದೀನ್ ಉಗ್ರ ಸಂಘಟನೆಗಳ 9 ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಆಪರೇಷನ್ ಸಿಂದೂರದ ಕ್ಷಿಪಣಿ ದಾಳಿಯಿಂದ ಹೇಗೆ ಭಯೋತ್ಪಾದಕ ನೆಲೆಗಳುಧ್ವಂಸ ಆಯಿತು ಎನ್ನುವುದರ ದೃಶ್ಯ ಪುರಾವೆಗಳನ್ನು ಬಹಿರಂಗಪಡಿಸಿದೆ. ಈ ಚಿತ್ರದಲ್ಲಿ ಎಲ್‌ಇಟಿ ಮತ್ತು ಜೆಇಎಂ ಉಗ್ರರ ತರಬೇತಿ ಹಾನಿಗೀಡಾಗಿರುವುದು, ತರಬೇತಿ ಕೇಂದ್ರದ ಕುಸಿದ ಛಾವಣಿಗಳು, ದಾಳಿಯಿಂದ ಪರಿಣಾಮದ ಕುಳಿಗಳು ಮತ್ತು ಅವಶೇಷಗಳು ಸೆರೆಯಾಗಿದೆ.
ಆಪರೇಷನ್ ಸಿಂದೂರಗೆ ಬೆಂಬಲ: ಇಸ್ರೇಲ್, ನೆದರ್ಲೆಂಡ್, ಪನಾಮ ಮೆಚ್ಚುಗೆ
ನಮ್ಮವರ ಹಂತಕರಷ್ಟೇ ಹತ್ಯೆ: ‘ಪಾಕಿಸ್ತಾನ ಮತ್ತು ಪಿಓಕೆ ಮೇಲೆ ಭಾರತದ ಪಡೆಗಳು ನಡೆಸಿರುವ ಆಪರೇಷನ್ ಸಿಂಧೂರ್ ನಿಖರವಾದ ಯೋಜನೆಯಂತೆಯೇ ಆಗಿದೆ. ನಮ್ಮವರ ಕೊಂದವರನ್ನು ಮಾತ್ರ ಹತ್ಯೆ ಮಾಡಿದ್ದೇವೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ದಾಳಿ ಬಳಿಕ ಪ್ರತಿಕ್ರಿಯಿಸಿದ ಸಿಂಗ್, ‘ಭಾರತವು ತನ್ನ ನೆಲದ ಮೇಲಿನ ದಾಳಿಗೆ ಪ್ರತಿಕ್ರಿಯಿಸುವ ತನ್ನ ಹಕ್ಕನ್ನು ಚಲಾಯಿಸಿದೆ. ನಮ್ಮ ಕ್ರಮವನ್ನು ಬಹಳ ಚಿಂತನಶೀಲವಾಗಿ ಮತ್ತು ಅಳತೆ ಮಾಡಿದ ರೀತಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಜೊತೆಗೆ ದಾಳಿಯನ್ನು ಕೊಂಡಾಡಿದರು.


