Asianet Suvarna News Asianet Suvarna News

ಪ್ರಧಾನಿ ಮೋದಿ ಭೇಟಿಯಾದ ಅಮಿತ್ ಶಾ; ಕಾಶ್ಮೀರ, ರಾಷ್ಟ್ರೀಯ ಭದ್ರತೆ ಕುರಿತು ಮಹತ್ವದ ಚರ್ಚೆ!

  • ಕಾಶ್ಮೀರದ ಮೇಲೆ ಉಗ್ರರ ದಾಳಿ, ನಾಗರೀಕರ ಹತ್ಯೆ
  • ಉಗ್ರರ ಆತಂಕದಿಂದ ಕಾಶ್ಮೀರ ತೊರೆಯುತ್ತಿರುವ ವಲಸಿಗರು
  • ಮೋದಿ ಜೊತೆ ಅಮಿತ್ ಶಾ ಮಹತ್ವದ ಸಭೆ
Amit sha meet PM Modi to discuss steps taken by Jammu and Kashmir situation amid civilian killing ckm
Author
Bengaluru, First Published Oct 19, 2021, 4:14 PM IST

ನವದೆಹಲಿ(ಅ.19): ದೇಶದ ಭದ್ರತೆಗೆ ಸವಾಲು ಹಾಕುವ ಘಟನೆಗಳು ನಡೆದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ(Jammu and kashmir) ನಾಗರೀಕರ ಮೇಲೆ ಉಗ್ರರ ದಾಳಿ ನಡೆಯುತ್ತಲೇ ಇದೆ. ಗಡಿಯಲ್ಲಿ ಉಗ್ರರ ಒಳನಸುಳುವಿಕೆ(Terror) ಕೂಡ ಹೆಚ್ಚಾಗಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶದ ಭದ್ರತೆ ಕುರಿತು ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಮಹತ್ವದ ಚರ್ಚೆ ನಡೆಸಿದ್ದಾರೆ.

ಕಾಶ್ಮೀರ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅಮಿತ್‌ ಶಾ ಮಾಸ್ಟರ್‌ ಪ್ಲಾನ್‌

ಇಂದು(ಅ.19) 7 ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ತೆರಳಿದ ಅಮಿತ್ ಶಾ, ಮೋದಿ ಜೊತೆ ಮಾತುಕತೆ ನಡೆಸಿದರು. ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು, ವಲಸೆ ವ್ಯಾಪಾರಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಎಂದು ಕಾಶ್ಮೀರದ ಮೇಲೆ ನಡೆಯುತ್ತಿರುವ ದಾಳಿ ಕುರಿತು ಮೋದಿ ಮಾಹಿತಿ ಪಡೆದುಕೊಂಡಿದ್ದಾರೆ.

ಅಮಿತ್ ಶಾ ಹಾಗೂ ಮೋದಿ ಭೇಟಿ ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ದೇಶದ ಭದ್ರತೆ ವಿಚಾರದಲ್ಲಿ ಈ ಸಭೆ ನಡೆದಿದೆ. ಮುಂದೆ ಈ ರೀತಿ ಘಟನೆ ಆಗದಂತೆ ತಡೆಯಲು ಸೇನೇ, ಗುಪ್ತಚರ ಇಲಾಖೆ ಸೇರಿದಂತೆ 28 ಸಂಸ್ಥೆಗಳ ಜಂಟಿ ತಂಡ ರಚಿಸಿದ್ದಾರೆ. ಈ ಕುರಿತು ಪ್ರಧಾನಿ ಮೋದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಉಗ್ರರ ದಾಳಿಯಲ್ಲಿ ಹತ್ಯೆಯಾದ ಬಿಹಾರ ಕಾರ್ಮಿಕರ ಕುಟುಂಬಕ್ಕೆ ತಲಾ 2 ಲಕ್ಷ ರೂ ಘೋಷಣೆ!

ಅಕ್ಟೋಬರ್ 18 ರಂದು ಅಮಿತ್ ಶಾ ಎಲ್ಲಾ ರಾಜ್ಯದ ಮುಖ್ಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ದೇಶದ ಭದ್ರತೆ ಸಲಹೆ ಸೂಚನೆಗಳನ್ನು ಪಡೆದಿದ್ದಾರೆ. ಈ ಮಾಹಿತಿಗಳನ್ನು ಪ್ರಧಾನಿ ಮೋದಿಗೆ ಅಮಿತ್ ಶಾ ಸಲ್ಲಿಸಿದ್ದಾರೆ. ಕಾಶ್ಮೀರದಲ್ಲಿ ನಾಗರೀಕರ ರಕ್ಷಣೆ ಹಾಗೂ ಗಡಿಯಲ್ಲಿ ಶಾಂತಿ ಕಾಪಾಡಲು ಭಾರತ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಿಸಿದ್ದಾರೆ.

ಕಾಶ್ಮೀರದಲ್ಲಿನ ದಾಳಿ ಕುರಿತು ತನಿಖೆಗೆ ಆದೇಶಿಸಲಾಗಿದೆ. ಈ ಕುರಿತು ಪ್ರಧಾನಿ ಮೋದಿಗೆ ಮಾಹಿತಿ ನೀಡಿದ್ದಾರೆ. ಭಾರತೀಯ ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಉಗ್ರರ ಹತ್ತಿಕ್ಕಲು ಗೃಹ ಇಲಾಖೆ ಕೈಗೊಂಡಿರುವ ಮಾಹಿತಿಗಳನ್ನು ಮೋದಿಗೆ ವಿವರಿಸಿದ್ದಾರೆ.

ಕಾಶ್ಮೀರದ ಜೊತೆಗೆ ದೇಶದ ಪ್ರಮುಖ ನಗರ ಹಾಗೂ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲು ಕೇಂದ್ರ ಸರ್ಕಾರ ಹೊಸ ಪ್ಲಾನ್ ರೂಪಿಸಿದೆ. ಈ ಕುರಿತು ಅಮಿತ್ ಶಾ ವಿವರಣೆ ನೀಡಿದ್ದಾರೆ. ದೇಶ ಎದುರಿಸುತ್ತಿರುವ ಭದ್ರತೆ ಸವಾಲನ್ನು ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಿದ್ದು, ಹೊಸ ತಂತ್ರ ಹೆಣೆಯಲು ಸಿದ್ಧತೆ ನಡೆಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿರುವ ಕಾರಣ ಪರಿಸ್ಥಿತಿ ಅರಿಯಲು ಭಾರತೇಯ ಸೇನಾ ಮುಖ್ಯಸ್ಥ ಜನರಲ್, ಎಂಎಂ ನರವಾನೆ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಭೇಟಿಯಲ್ಲಿ ಸೇನಾ ಯೋಧರು, ಹಾಗೂ ಕಮಾಂಡರ್ ಜೊತೆ ನರವಾನೆ ನೇರ ಮಾತುಕತೆ ನಡೆಸಿದ್ದಾರೆ.

Poonch encounter;ಉಗ್ರರ ದಾಳಿಗೆ ಸೇನಾಧಿಕಾರಿ ಸೇರಿ ಐವರು ಯೋಧರು ಹುತಾತ್ಮ!

ಕಾಶ್ಮೀರದಲ್ಲಿ ಉಗ್ರರು ಹಿಂದೂ, ಸಿಖ್, ಕಾಶ್ಮೀರಿ ಪಂಡಿತ್, ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ.  1990ರ ದಶಕದಲ್ಲಿ ಕಾಶ್ಮೀರದಲ್ಲಿನ ಪರಿಸ್ಥಿತಿ ಮರುಕಳಿಸಲು ಉಗ್ರರು ಪ್ರಯತ್ನಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಭಯದ ವಾತಾವರಣ ಸೃಷ್ಟಿಸಿ, ಹಿಂದೂ ಸಿಖ್, ಪಂಡಿತ್ ಸಮುದಾಯಗಳನ್ನು ಕಾಶ್ಮೀರದಿಂದ ಹೊರದಬ್ಬಲು ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿದೆ.

ಜಮ್ಮು ಕಾಶ್ಮೀರದಲ್ಲಿ ಕಳೆದ 15 ದಿನದಲ್ಲಿ 11 ನಾಗರೀಕರ ಹತ್ಯೆಯಾಗಿದೆ. ಉಗ್ರರು ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪರಿಗಳನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡುತ್ತಿದ್ದಾರೆ. ಬಿಹಾರದ ಕಾರ್ಮಿಕರು, ವ್ಯಾಪಾರಿಗಳನ್ನು ಹತ್ಯೆ ಮಾಡಿದ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದರ ಪರಿಣಾಣ ಜಮ್ಮು ಮತ್ತು ಕಾಶ್ಮೀರದಲ್ಲಿರುವ ವಲಸೆ ಕಾರ್ಮಿಕರು, ವ್ಯಾಪಾರಿಗಳು ಇದೀಗ ಕಣಿವೆ ರಾಜ್ಯ ತೊರೆಯುತ್ತಿದ್ದಾರೆ.

Follow Us:
Download App:
  • android
  • ios