Monkeypox Virus ಮಂಕಿಪಾಕ್ಸ್‌ ಬಗ್ಗೆ ಕೇಂದ್ರ ಕಟ್ಟೆಚ್ಚರ, 1 ಕೇಸಿದ್ದರೂ ಸ್ಫೋಟವೆಂದು ಪರಿಗಣನೆ!

- ಒಂದು ಕೇಸಿದ್ದ್ದರೂ ಸ್ಫೋಟವೆಂದು ಪರಿಗಣನೆ, ಮಾರ್ಗಸೂಚಿ ಏನು?

- ಸೋಂಕಿನ ಕುರಿತಾಗಿ ಕಟ್ಟೆಚ್ಚರ ವಹಿಸಿ

- ಸೋಂಕಿತರನ್ನು ಐಸೋಲೇಟ್‌ ಮಾಡಿ

- ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇಡಿ

Amid spread of monkeypox infection Union health ministry releases guidelines to curb cases ckm

ನವದೆಹಲಿ(ಜೂ.01): ಯುರೋಪ್‌ ಮತ್ತು ಅಮೆರಿಕದ ದೇಶಗಳಲ್ಲಿ ಮಂಕಿಪಾಕ್ಸ್‌ ಸೋಂಕು ಏರಿಕೆಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ನೂತನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಒಂದೇ ಒಂದು ಪ್ರಕರಣ ಕಾಣಿಸಿಕೊಂಡರು ಅದನ್ನು ಸೋಂಕು ಸ್ಫೋಟ ಎಂದು ಪರಿಗಣಿಸಬೇಕು ಮತ್ತು ಈ ಕುರಿತಾಗಿ ವಿಸ್ತೃತವಾದ ತನಿಖೆ ಕೈಗೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

ಹೊಸ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸೋಂಕು ಕಾಣಿಸಿಕೊಂಡವರನ್ನು ಐಸೋಲೇಟ್‌ ಮಾಡಬೇಕು. ಅಲ್ಲದೇ ಸೋಂಕಿತರ ಸಂಪರ್ಕಕ್ಕೆ ಬಂದಿರುವವರನ್ನು ಪತ್ತೆ ಹಚ್ಚಬೇಕು. ಸೋಂಕು ಕಾಣಿಸಿಕೊಂಡರೆ ಅದನ್ನು ಪಿಸಿಆರ್‌ ಪರೀಕ್ಷೆಯ ಮೂಲಕ ಖಚಿತಪಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.

ಮಕ್ಕಳಿಗೆ ಮಂಕಿಪಾಕ್ಸ್‌ ಸೋಂಕು ಹರಡದಂತೆ ಎಚ್ಚರಿಕೆ ವಹಿಸುವುದು ಹೇಗೆ ?

ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಬೇಕು. ಈಗಾಗಲೇ ಸೋಂಕು ಕಾಣಿಸಿಕೊಂಡಿರುವ ದೇಶಗಳಿಗೆ ಕಳೆದ 21 ದಿನಗಳಲ್ಲಿ ಪ್ರಯಾಣ ಮಾಡಿರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು. ಈ ಪ್ರಯಾಣಿಕರು ಸತ್ತಿರುವ ಅಥವಾ ಬದುಕಿರುವ ಇಲಿ, ಅಳಿಲು ಮುಂತಾದ ಪ್ರಾಣಿಗಳ ಸಂಪರ್ಕಕ್ಕೆ ಬಂದಿಲ್ಲ ಎನ್ನುವುದನ್ನೂ ಖಚಿತ ಪಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ.

219ಕ್ಕೆ ಏರಿಕೆ:
ಈ ನಡುವೆ ಮಂಕಿಪಾಕ್ಸ್‌ನ 19 ಪ್ರಕರಣಗಳು ವಿಶ್ವದ ವಿವಿಧ ಭಾಗಗಳಲ್ಲಿ ಶನಿವಾರ ವರದಿಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 219ಕ್ಕೆ ಏರಿದೆ. ‘ಆದರೆ ಇದು ಕೇವಲ ಆರಂಭ ಮಾತ್ರ. ಇನ್ನೂ ಹೆಚ್ಚು ಪ್ರಕರಣಗಳು ವರದಿ ಆಗುವ ಸಾಧ್ಯತೆ ಇದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಸಿದೆ.

ಮಂಕಿಪಾಕ್ಸ್‌: 20 ದೇಶಕ್ಕೆ ವಿಸ್ತರಣೆ, ಕೇಸು 200ಕ್ಕೆ ಏರಿಕೆ
20ಕ್ಕಿಂತಲೂ ಹೆಚ್ಚಿನ ರಾಷ್ಟ್ರಗಳಲ್ಲಿ ಒಟ್ಟಾರೆ ಸುಮಾರು 200 ಮಂಕಿಪಾಕ್ಸ್‌ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶುಕ್ರವಾರ ತಿಳಿಸಿದೆ.ಮಂಕಿಪಾಕ್ಸ್‌ ವೈರಸ್‌ನಲ್ಲಿ ರೂಪಾಂತರವಾಗಿದ್ದು ಕಂಡು ಬಂದಿಲ್ಲ ಆದರೂ, ಆಫ್ರಿಕಾದ ಹೊರ ಭಾಗಗಳಲ್ಲಿಯೂ ಏಕಾಏಕಿ ಪ್ರಕರಣಗಳಲ್ಲಾಗುತ್ತಿರುವ ಏರಿಕೆಯ ಕಾರಣವಿನ್ನೂ ಸ್ಪಷ್ಟವಾಗಿಲ್ಲ. ಆದರೆ ವೈರಸ್‌ ಹೆಚ್ಚಾಗಿ ಸಲಿಂಗಕಾಮಿ ಪುರುಷರಲ್ಲಿ ಹರಡುತ್ತಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಮಂಕಿಪಾಕ್ಸ್‌ಗೆ ಲಸಿಕೆಯಿಲ್ಲದಿದ್ದರೂ ಸಿಡುಬಿನ ಲಸಿಕೆಯು ಮಂಕಿಪಾಕ್ಸ್‌ ವಿರುದ್ಧ ಶೇ. 85ರಷ್ಟುಪರಿಣಾಮಕಾರಿಯಾಗಿದೆ. ರೋಗದ ಹರಡುವಿಕೆಯನ್ನು ತಡೆಯಲು ಲಭ್ಯವಿರುವ ಲಸಿಕೆಯನ್ನು ಸಂಗ್ರಹಿಸಿ ರಾಷ್ಟ್ರಗಳಿಗೆ ಹಂಚಿಕೆ ಮಾಡುವ ಕುರಿತು ಡಬ್ಲ್ಯುಎಚ್‌ಒ ಚಿಂತನೆ ನಡೆಸಿದೆ.

ಮಕ್ಕಳಿಗೂ ಮಂಕಿಪಾಕ್ಸ್ ಹರಡುವ ಭೀತಿ, ರೋಗಲಕ್ಷಣಗಳ ಬಗ್ಗೆ ನಿಮಗೆ ಗೊತ್ತಿರಲಿ

ಮಂಕಿಪಾಕ್ಸ್‌ ಭೀತಿ: ಸೋಂಕಿನ ಮೇಲೆ ನಿಗಾಗೆ ಕೇಂದ್ರ ಸೂಚನೆ
ಈಗಾಗಲೇ 12 ದೇಶಗಳಲ್ಲಿ ಮಂಕಿಪಾಕ್ಸ್‌ನ ಸುಮಾರು 92 ಪ್ರಕರಣಗಳನ್ನು ಖಚಿತವಾಗಿದೆ. ಹೀಗಾಗಿ ಭಾರತದಲ್ಲೂ ಈ ಬಗ್ಗೆ ನಿಗಾ ಇರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

ರಾಷ್ಟ್ರೀಯ ರೋಗ ನಿಯಂತ್ರಣ ಸಂಸ್ಥೆ (ಎನ್‌ಸಿಡಿಸಿ) ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಈ ಬಗ್ಗೆ ಸೂಚನೆ ನೀಡಿರುವ ಸಚಿವಾಲಯ, ಮಂಕಿಪಾಕ್ಸ್‌ ಹರಡುವಿಕೆಯ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೂಚಿಸಬೇಕು. ಸೋಂಕು ಹೆಚ್ಚಳವಾದರೆ ಸೋಂಕು ಪೀಡಿತ ದೇಶಗಳಿಂದ ಬಂದ ಜನರನ್ನು ದೇಶ ಪ್ರವೇಶಕ್ಕೂ ಮುನ್ನ ಪರೀಕ್ಷೆಗೆ ಒಳಪಡಿಸಬೇಕೆಂದು ಸೂಚಿಸಿದೆ.

ಡಬ್ಲ್ಯುಎಚ್‌ಒ ಪ್ರಕಾರ ಮಂಕಿಪಾಕ್ಸ್‌ ಸೋಂಕು ಸ್ಥಳೀಯವಾಗಿದ್ದು, ಕೆಲವು ದೇಶಗಳಲ್ಲಿ ರೋಗಗ್ರಸ್ಥ ಪ್ರಾಣಿಗಳಿಂದಾಗಿ ಜನರಿಗೆ ತಗುಲಿ ಮೈಮೇಲೆ ಬೊಬ್ಬೆ ಏಳುತ್ತವೆ. ಈ ದೇಶಗಳಿಂದ ಮರಳುತ್ತಿರುವ ಜನರಲ್ಲೂ ಸೋಂಕಿನ ಲಕ್ಷಣಗಳು ಕಂಡುಬರುತ್ತಿದೆ. ಹೀಗಾಗಿ ರೋಗದ ಹರಡುವಿಕೆಯನ್ನು ತಪ್ಪಿಸಲು ವಿದೇಶಗಳಲ್ಲಿನ ಮಂಕಿಪಾಕ್ಸ್‌ ಸೋಂಕಿನ ಸ್ಥಿತಿಯ ಬಗ್ಗೆ ಸತತ ನಿಗಾ ಇರಿಸಬೇಕು. ವಿದೇಶಗಳಿಂದ ಮರಳಿದ ಜನರಲ್ಲಿ ರೋಗದ ಲಕ್ಷಣಗಳು ಕಂಡುಬಂದಲ್ಲಿ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಬೇಕು ಎಂದು ಸಚಿವಾಲಯ ಸೂಚಿಸಿದೆ.
 

Latest Videos
Follow Us:
Download App:
  • android
  • ios