Asianet Suvarna News Asianet Suvarna News

ಜೋಶಿಮಠದ ಜತೆಗೆ ಉತ್ತರಾಖಂಡದ ಕರ್ಣಪ್ರಯಾಗದಲ್ಲೂ ಕುಸಿತ ಭೀತಿ: 50 ಮನೆಗಳಲ್ಲಿ ಬಿರುಕು

ಕರ್ಣಪ್ರಯಾಗ್‌ ನಗರದಲ್ಲಿ ಸುಮಾರು 50 ಮನೆಗಳು ಬಿರುಕು ಬಿಟ್ಟಿವೆ ಹಾಗೂ ವಿವಿಧ ಕಡೆ ಸಣ್ಣಪ್ರಮಾಣದಲ್ಲಿ ಭೂಕುಸಿತ ಸಂಭವಿಸಿದೆ.

amid joshimath crisis cracks appear on houses in uttarakhands karnaprayag ash
Author
First Published Jan 11, 2023, 8:28 AM IST

ಚಮೋಲಿ: ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತ ಸಂಭವಿಸಿ ಮನೆಗಳು ಬಿರುಕು ಬಿಡಲು ಆರಂಭಿಸಿದ ಬಳಿಕ ಈಗ ಜೋಶಿಮಠದಿಂದ 82 ಕಿ.ಮೀ. ದೂರದಲ್ಲಿರುವ ಚಮೋಲಿ ಜಿಲ್ಲೆಯ ಕರ್ಣಪ್ರಯಾಗ್‌ನಲ್ಲೂ ಭೂಕುಸಿತ ಸಂಭವಿಸಿದೆ. ಚಮೋಲಿ ಜಿಲ್ಲೆಗೆ ಸೇರಿದ ಕರ್ಣಪ್ರಯಾಗ್‌ ತಾಲೂಕು 7,5000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದರೆ, ನಗರದ ವ್ಯಾಪ್ತಿಯಲ್ಲಿ ಅಂದಾಜು 10,000 ಜನರು ವಾಸವಿದ್ದಾರೆ. ಇದು ಉತ್ತರಾಖಂಡದ ಪ್ರಮುಖ ಧಾರ್ಮಿಕ ಕೇಂದ್ರಗಳ ಪೈಕಿ ಒಂದಾಗಿದೆ. 

ನಗರದಲ್ಲಿ ಸುಮಾರು 50 ಮನೆಗಳು ಬಿರುಕು (Cracks) ಬಿಟ್ಟಿವೆ ಹಾಗೂ ವಿವಿಧ ಕಡೆ ಸಣ್ಣಪ್ರಮಾಣದಲ್ಲಿ ಭೂಕುಸಿತ (Landslide) ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಭೂಕುಸಿತದಿಂದ ಹೆಚ್ಚು ಬಾಧಿತವಾಗಿರುವ ಕರ್ಣಪ್ರಯಾಗ್‌ನ (Karnaprayag) ಬಹುಗುಣ ನಗರದ ಅನೇಕ ಕುಟುಂಬಗಳು (Families) ಮನೆ ಬಿಟ್ಟು ತಮ್ಮ ಬಂಧುಗಳ ಮನೆಗಳಿಗೆ ಹೋಗಿ ತಂಗಿದ್ದಾರೆ. ಇದೇ ವೇಳೆ ಕರ್ಣಪ್ರಯಾಗ್‌ ಬಜಾರ್‌ನ 30 ಕುಟುಂಬಗಳು ಅಪಾಯದಲ್ಲಿವೆ. ರಾಜ್ಯ ಸರ್ಕಾರ (Uttarakhand Government) ತಮ್ಮ ನೆರವಿಗೆ ಬರಬೇಕು ಎಂದು ಆಗ್ರಹಿಸಿವೆ.
ಕರ್ಣಪ್ರಯಾಗ್‌, ಮಹಾಭಾರತದ ಕರ್ಣ (Karna) ಹುಟ್ಟಿದ ಸ್ಥಳ, ಕರ್ಣ ಸೂರ್ಯದೇವನನ್ನು (SuryaDeva) ಆರಾಧಿಸಿದ ಸ್ಥಳ ಎಂಬ ಐತಿಹ್ಯ ಹೊಂದಿದೆ.

ಇದನ್ನು ಓದಿ: ಜೋಶಿಮಠದಲ್ಲಿ ಎರಡು ಐಷಾರಾಮಿ ಹೋಟೆಲ್‌ ನೆಲಸಮ, ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್‌!

ಜೋಶಿಮಠದ: ಕಟ್ಟಡಗಳ ಧ್ವಂಸ ಕಾರ್ಯ ಆರಂಭ
ಜೋಶಿಮಠ (ಉತ್ತರಾಖಂಡ): ಆದಿಜಗದ್ಗುರು ಶಂಕರಾಚಾರ್ಯರ ಪವಿತ್ರ ಕ್ಷೇತ್ರ, ಉತ್ತರಾಖಂಡದ ಜೋಶಿಮಠದಲ್ಲಿ ಸಂಭಿವಿಸುತ್ತಿರುವ ಭೂಕುಸಿತದ ಹಿನ್ನೆಲೆಯಲ್ಲಿ, ಅಪಾಯದಲ್ಲಿರುವ ಕಟ್ಟಡಗಳ ಧ್ವಂಸ ಕಾರ್ಯಾಚರಣೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಮಂಗಳವಾರ 2 ಹೋಟೆಲ್‌ಗಳ ಧ್ವಂಸ ಕಾರಾರ‍ಯಚರಣೆಗೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ.

‘ಮೌಟ್‌ ವ್ಯೂ’ ಹಾಗೂ ‘ಮಲಾರಿ ಇನ್‌’ ಹೋಟೆಲ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ಬಿರುಕು ಮೂಡಿತ್ತು. ಹೋಟೆಲ್‌ಗಳು ಒಂದಕ್ಕೊಂದು ವಾಲಿದ್ದವು ಹಾಗೂ ಅಪಾಯದ ಅಂಚಿನಲ್ಲಿದ್ದವು. ಹೀಗಾಗಿ ಅವನ್ನು ಬುಲ್ಡೋಜರ್‌ ಬಳಸಿ ಧ್ವಂಸಗೊಳಿಸಲಾಗಿದೆ. ಆದರೆ ನೋಟಿಸ್‌ ನೀಡದೇ ಏಕಾಏಕಿ ತೆರವು ಆರಂಭಿಸಲಾಗಿದೆ. ಧ್ವಂಸಕ್ಕೂ ಮೊದಲು ನಮಗೆ ಒಂದೇ ಸಲ ಸಂಪೂರ್ಣ ಪರಿಹಾರ ಹಣ ಪಾವತಿಸಬೇಕಿತ್ತು. ನಂತರ ಧ್ವಂಸ ಕಾರ್ಯಾಚರಣೆ ಆರಂಭಿಸಬಹುದಾಗಿತ್ತು ಎಂದು ಹೋಟೆಲ್‌ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜೋಶಿಮಠದಲ್ಲಿ ಮತ್ತೆ 68 ಮನೆಗಳು ಬಿರುಕು: ಊರು ಬಿಡಲು ನಿವಾಸಿಗಳ ಹಿಂದೇಟು; 4000 ಜನರು ಶಿಫ್ಟ್

ವಿದ್ಯುತ್‌ ತಂತಿಗಳಿಗೆ ಕತ್ತರಿ: 500 ಮನೆ ಕತ್ತಲು
ಈ ನಡುವೆ, ಧ್ವಂಸ ಕಾರಾರ‍ಯಚರಣೆಗೂ ಮುನ್ನ ಅಪಾಯ ವಲಯದಲ್ಲಿರುವ ರಸ್ತೆಗಳಲ್ಲಿನ ವಿದ್ಯುತ್‌ ಮಾರ್ಗದಲ್ಲಿನ ತಂತಿಗಳನ್ನು ತುಂಡರಿಸಲಾಗಿದೆ. ಇದರಿಂದ ಈ ವ್ಯಾಪ್ತಿಯಲ್ಲಿನ 500 ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಡಿತವಾಗಿದೆ. ನಗರದಲ್ಲಿ ಸುಮಾರು 700 ಕಟ್ಟಡಗಳು ಬಿರುಕು ಬಿಟ್ಟಿದ್ದು, ಈ ಪೈಕಿ 100 ಮನೆಗಳ ಸುಮಾರು 4000 ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಉಳಿದವರ ತೆರವಿಗೂ ಸಮರೋಪಾದಿಯಲ್ಲಿ ಕಾರ್ಯ ನಡೆದಿದೆ.

ಅಂತರ್ಜಲ ಶೇಖರಣೆ ಸ್ಥಳ ಗುರುತು ಅಗತ್ಯ
ಈ ನಡುವೆ, ಕೇಂದ್ರ ಗೃಹ ಸಚಿವಾಲಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರನ್ನು ಮಂಗಳವಾರ ಭೇಟಿಯಾಗಿ ಜೋಶಿಮಠದ ಪರಿಸ್ಥಿತಿಯನ್ನು ಅವಲೋಕಿಸಿದರು. ಕುಸಿತದ ವಲಯದಲ್ಲಿ ಅಂತರ್ಜಲ ಶೇಖರಣೆಯ ಸ್ಥಳವನ್ನು ಕಂಡುಹಿಡಿಯುವ ಅಗತ್ಯವಿದೆ. ಇದಕ್ಕಾಗಿ ವಿಜ್ಞಾನಿಗಳ ನೆರವು ಪಡೆಯಬೇಕು ಒತ್ತಿ ಹೇಳಿದರು. ಅಲ್ಲದೆ, ಸಂತ್ರಸ್ತ ಜನರ ಪುನರ್ವಸತಿ ಪ್ರದೇಶಗಳ ಭೂವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಎಂದು ಕೇಂದ್ರ ಅಧಿಕಾರಿಗಳ ತಂಡ ಹೇಳಿದೆ. ಜೋಶಿಮಠವು ಸಾಂಸ್ಕೃತಿಕ, ಧಾರ್ಮಿಕ ಮತ್ತು ಕಾರ್ಯತಂತ್ರದ ದೃಷ್ಟಿಯಿಂದ ಪ್ರಮುಖ ಪಟ್ಟಣವಾಗಿದ್ದು, ಅದರ ಪುನಃಸ್ಥಾಪನೆಗೆ ಸಮಗ್ರ ಪ್ರಯತ್ನಗಳ ಅಗತ್ಯವಿದೆ. ಸರ್ಕಾರ ಇದಕ್ಕೆ ಎಲ್ಲ ನೆರವು ನೀಡಲಿದೆ ಎಂದು ಮುಖ್ಯಮಂತ್ರಿಗಳು ಕೇಂದ್ರ ತಂಡಕ್ಕೆ ತಿಳಿಸಿದರು.

ಇದನ್ನೂ ಓದಿ: ಮುಳುಗುತ್ತಿರುವ ವಲಯ ಎಂದು ಘೋಷಣೆಯಾದ ಉತ್ತರಾಖಂಡ್‌ನ ಜೋಶಿಮಠ: 60ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

ಜೋಶಿಮಠ ಪ್ರದೇಶದ ನೆಲದಡಿ ಭಾರಿ ಪ್ರಮಾಣದ ಅಂತರ್ಜಲ ಸಂಗ್ರಹ ಆಗುತ್ತಿದೆ ಎಂದು ಭಾವಿಸಲಾಗಿದೆ. ಆದರೆ ನೀರಿನ ನಿಖರ ಮೂಲವನ್ನು ಇನ್ನೂ ಪತ್ತೆ ಮಾಡಲು ಆಗಿಲ್ಲ. ಇದೇ ಅಂತರ್ಜಲ ಇಂದು ಉಕ್ಕೇರಿ ಮನೆಗಳ ಗೋಡೆಗಳನ್ನು ಒದ್ದೆ ಮಾಡುತ್ತಿದೆ ಹಾಗೂ ಮನೆಗಳಲ್ಲಿ ನೀರು ಜಿನುಗುತ್ತಿದೆ. ಇದು ಭೂಕುಸಿತ ಹಾಗೂ ಮನೆಗಳ ಬಿರುಕಿಗೆ ಕಾರಣವಾಗುತ್ತಿದೆ.

ಇದನ್ನೂ ಓದಿ: ಕುಸೀತಿದೆ ಉತ್ತರದ ಶೃಂಗೇರಿ ‘ಜೋಶಿಮಠ’: 600 ಕುಟುಂಬ ಸ್ಥಳಾಂತರ

Follow Us:
Download App:
  • android
  • ios