Asianet Suvarna News Asianet Suvarna News

ಜೋಶಿಮಠದಲ್ಲಿ ಮತ್ತೆ 68 ಮನೆಗಳು ಬಿರುಕು: ಊರು ಬಿಡಲು ನಿವಾಸಿಗಳ ಹಿಂದೇಟು; 4000 ಜನರು ಶಿಫ್ಟ್

ಜೋಶಿಮಠದಲ್ಲಿ ಮತ್ತೆ 68 ಮನೆಗಳು ಬಿರುಕು ಬಿಟ್ಟಿದ್ದು, ಆದರೂ ಊರು ಬಿಡಲು ನಿವಾಸಿಗಳು ಹಿಂದೇಟು ಹಾಕ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಜನರನ್ನು ಮನವಿ ಮಾಡಿಕೊಳ್ತಿರುವ ಸರ್ಕಾರ ಪ್ರತಿ ನಿಮಿಷ ಮಹತ್ವದ್ದು, ಊರು ಬಿಡಿ ಎನ್ನುತ್ತಿದ್ದಾರೆ. 

uttarakhand cracks appear in 68 more joshimath houses ash
Author
First Published Jan 10, 2023, 10:10 AM IST

ಡೆಹ್ರಾಡೂನ್‌: ಉತ್ತರಾಖಂಡದ ಪವಿತ್ರ ಶಂಕರಾಚಾರ್ಯ ತೀರ್ಥಕ್ಷೇತ್ರ ಜೋಶಿಮಠದಲ್ಲಿ ಸೋಮವಾರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಇನ್ನೂ 68 ಮನೆಗಳಿಗೆ ಬಿರುಕು ಕಾಣಿಸಿಕೊಂಡಿದೆ. ಆದರೂ ಇಲ್ಲಿನ ಜನರು ತಾವು ಹುಟ್ಟಿ ಬೆಳೆದ ಹಾಗೂ ತಮಗೆ ಅನ್ನ ಕೊಟ್ಟ ಊರನ್ನು ಬಿಡಲು ಹಿಂದೇಟು ಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಉತ್ತರಾಖಂಡ ಮುಖ್ಯ ಕಾರ್ಯದರ್ಶಿ ಎಸ್‌.ಎಸ್‌. ಸಂಧು ಅವರು ‘ಪ್ರತಿ ನಿಮಿಷವೂ ಮಹತ್ವದ್ದಾಗಿದೆ. ಊರು ಬಿಟ್ಟು ಆಶ್ರಯ ಕೇಂದ್ರಗಳಿಗೆ ತೆರಳಿ’ ಎಂದು ನಿವಾಸಿಗಳಿಗೆ ಮನವಿ ಮಾಡಿದ್ದಾರೆ.

ಸೋಮವಾರ 68 ಮನೆಗಳು ಬಿರುಕು (Cracks) ಬಿಟ್ಟಿದ್ದು, ಒಟ್ಟು 678 ಮನೆಗಳು ಬಾಧಿತ ಆಗಿವೆ. 200ಕ್ಕೂ ಹೆಚ್ಚು ಮನೆಗಳ ಮೇಲೆ ಕೆಂಪು ಕ್ರಾಸ್‌ (Red Cross) ಗುರುತು ಹಾಕಲಾಗಿದ್ದು, ಇವನ್ನು ವಾಸಕ್ಕೆ ಯೋಗ್ಯವಲ್ಲ (Uninhabitable) ಎಂದು ಘೋಷಿಸಲಾಗಿದೆ. ಸೋಮವಾರ ಮತ್ತೆ 27 ಕುಟುಂಬಗಳನ್ನು ಆಶ್ರಯ ಕೇಂದ್ರಕ್ಕೆ (Shelter) ಸ್ಥಳಾಂತರಿಸಲಾಗಿದೆ (Relocation). ಇದರೊಂದಿಗೆ 4000 ಜನರನ್ನು ಈವರೆಗೆ ಸ್ಥಳಾಂತರಿಸಿದಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನು ಓದಿ: ಮುಳುಗುತ್ತಿರುವ ವಲಯ ಎಂದು ಘೋಷಣೆಯಾದ ಉತ್ತರಾಖಂಡ್‌ನ ಜೋಶಿಮಠ: 60ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

‘ಆದರೆ ನಾವು ಹುಟ್ಟಿ ಬೆಳೆದ ಊರನ್ನು ಬಿಡುವುದಕ್ಕಿಂತ ಸಾಯುವುದೇ ಮೇಲು’ ಎಂದು ಕೆಲವು ನಿವಾಸಿಗಳು ಹೇಳಿದ್ದು, ಊರು ಬಿಡಲು ಹಿಂದೇಟು ಹಾಕಿವೆ. ಆದರೆ ‘ಕೂಡಲೇ ಆಶ್ರಯ ಕೇಂದ್ರಕ್ಕೆ ತೆರಳಿ. ಇಲ್ಲದೇ ಇದ್ದರೆ ಸರ್ಕಾರದ ವತಿಯಿಂದ 6 ತಿಂಗಳ ಕಾಲ ಮಾಸಿಕ 4000 ರೂ. ಬಾಡಿಗೆ ಹಣ ನೀಡಲಾಗುತ್ತದೆ. ಸುರಕ್ಷಿತ ಮನೆಗಳಿಗೆ ತೆರಳಿ’ ಎಂದು ಸರ್ಕಾರ ಮನವಿ ಮಾಡಿದೆ. ನಗರದಲ್ಲಿ ಹೆಚ್ಚಿನ ಅಪಾಯ ಇರುವ ಕಾರಣ ವಿಕೋಪ ನಿರ್ವಹಣಾ ಪಡೆ ಜೋಶಿಮಠದಲ್ಲಿ ಬೀಡುಬಿಟ್ಟಿದೆ.

ಇಂದು ಸುಪ್ರೀಂನಲ್ಲಿ ವಿಚಾರಣೆ:
ಜೋಶಿಮಠದಲ್ಲಿನ ವಿಕೋಪವನ್ನು ರಾಷ್ಟ್ರೀಯ ವಿಕೋಪ ಎಂದು ಘೋಷಿಸಲು ಹಾಗೂ ಆ ಪ್ರದೇಶದಲ್ಲಿನ ಅಭಿವೃದ್ಧಿ ಚಟುವಟಿಕೆ ಸ್ಥಗಿತಗೊಳಿಸಲು ಕಾಂಗ್ರೆಸ್‌ ಆಗ್ರಹಿಸಿದೆ. ಇದರ ನಡುವೆ ಸುಪ್ರೀಂ ಕೋರ್ಟ್‌ನಲ್ಲಿ ಕೂಡ ರಾಷ್ಟ್ರೀಯ ವಿಕೋಪ ಘೋಷಣೆ ಕೋರಿ ಪಿಐಎಲ್‌ ಸಲ್ಲಿಕೆ ಆಗಿದ್ದು, ಮಂಗಳವಾರ ವಿಚಾರಣೆ ನಡೆಯಲಿದೆ.
ಇನ್ನು, ವಿಪತ್ತು ನಿರ್ವಹಣಾ ಇಲಾಖೆಯ ಕಾರ್ಯದರ್ಶಿ ರಂಜಿತ್ ಸಿನ್ಹಾ ನೇತೃತ್ವದ ಎಂಟು ಸದಸ್ಯರ ತಜ್ಞರ ಸಮಿತಿಯು ಜನವರಿ 5 ಮತ್ತು 6 ರಂದು ಜೋಶಿಮಠದ ಕ್ಷೇತ್ರ ಸಮೀಕ್ಷೆಯನ್ನು ನಡೆಸಿದೆ. ಅಲ್ಲದೆ ತನ್ನ ವರದಿಯಲ್ಲಿ "ಗರಿಷ್ಠ ಹಾನಿಗೊಳಗಾದ ಮನೆಗಳನ್ನು ನೆಲಸಮ ಮಾಡಬೇಕು, ವಾಸಯೋಗ್ಯವಲ್ಲದ ಪ್ರದೇಶಗಳು ಇರಬೇಕು" ಎಂದು ಶಿಫಾರಸು ಮಾಡಿದೆ. ಅಪಾಯದಲ್ಲಿರುವ ಜನರನ್ನು ಗುರುತಿಸಿ ಸ್ಥಳಾಂತರಿಸುವುದನ್ನು ತಕ್ಷಣದ ಕ್ರಮವಾಗಿ ಮಾಡಬೇಕು” ಎಂದು ಹೇಳಿದೆ.

ಇದನ್ನೂ ಓದಿ: ಕುಸೀತಿದೆ ಉತ್ತರದ ಶೃಂಗೇರಿ ‘ಜೋಶಿಮಠ’: 600 ಕುಟುಂಬ ಸ್ಥಳಾಂತರ

ಆದರೆ, ಹೆಚ್ಚಿನ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತದೆಯೇ ಎಂದು ಕೇಳಿದ್ದಕ್ಕೆ, ಇದಕ್ಕೆ ಉತ್ತರಿಸಿದ ಚಮೋಲಿಯ ಜಿಲ್ಲಾಧಿಕಾರಿ ಹಿಮಾಂಶು ಖುರಾನ್ನಾ “ಇದು ಅಭಿವೃದ್ಧಿ ಹೊಂದುತ್ತಿರುವ ಪರಿಸ್ಥಿತಿ ಮತ್ತು ರಚನೆಗಳ ದುರ್ಬಲತೆಯನ್ನು ಖಚಿತಪಡಿಸಿಕೊಳ್ಳಲು ಸಮೀಕ್ಷೆಯು ಪ್ರಸ್ತುತ ನಡೆಯುತ್ತಿದೆ. ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿದ್ದಲ್ಲಿ ಇನ್ನಷ್ಟು ಕಟ್ಟಡಗಳನ್ನು ಕೆಡವಲಾಗುವುದು’’ ಎಂದೂ ಕೇಳಿದರು. 

2. 5 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿರುವ ಜೋಶಿಮಠವು ಸುಮಾರು 3,900 ವಸತಿ ಮತ್ತು 400 ವಾಣಿಜ್ಯ ಕಟ್ಟಡಗಳನ್ನು ಹೊಂದಿದೆ ಎಂದು ಜಿಲ್ಲಾಡಳಿತದ ದಾಖಲೆಯಾಗಿದೆ. ಆದರೆ, 1,790 ಮಂದಿ ಮಾತ್ರ ಮನೆ ತೆರಿಗೆ ಪಾವತಿಸುತ್ತಿದ್ದಾರೆ ಎಂದು ನಗರಸಭೆ ಅಂಕಿಅಂಶಗಳು ತಿಳಿಸುತ್ತವೆ. ಪುನರ್ವಸತಿ ಪ್ರಕ್ರಿಯೆಯ ಬಗ್ಗೆ ವಿವರಗಳನ್ನು ನೀಡಿದ ಸುಂದರಂ, “ಅಸುರಕ್ಷಿತ ಮನೆಗಳಿಂದ ಜನರನ್ನು ಸ್ಥಳಾಂತರಿಸುವುದು ಮತ್ತು ನಂತರ ಅವರಿಗೆ ತಾತ್ಕಾಲಿಕ ಆಶ್ರಯವನ್ನು ಒದಗಿಸುವುದು ನಮ್ಮ ತಕ್ಷಣದ ಆದ್ಯತೆಯಾಗಿದೆ. ನಂತರ, ಶಾಶ್ವತ ಪುನರ್ವಸತಿ ಕೊನೆಯ ಹಂತವಾಗಿರುತ್ತದೆ. ” ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮ ಸುನಾಮಿ, ವಿದ್ಯುತ್ ಘಟಕ ಧ್ವಂಸ, 170 ಕ್ಕೂ ಹೆಚ್ಚು ಮಂದಿ ನಾಪತ್ತೆ

Follow Us:
Download App:
  • android
  • ios