ನವದೆಹಲಿ(ಜೂ. 19) ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ನಡೆಯುತ್ತಿದ್ದರೆ ಇತ್ತ ಕಾಂಗ್ರೆಸ್ ನಾಯಕರು ಮಾತ್ರ ತರೇವಾರಿ ಹೇಳಿಕೆ ನೀಡುತ್ತಲೇ ಇದ್ದಾರೆ. 

ವಿವಾದಾತ್ಮಕ ಹೇಳಿಕೆ ನೀಡುವುದಕ್ಕೆ ಪ್ರಸಿದ್ಧರಾಗಿರುವ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಈ ಬಾರಿ ಭಾರತೀಯ ಸೇನೆಯ ಬಗ್ಗೆಯೇ ಮಾತನಾಡಿದ್ದಾರೆ. 

'ನಮ್ಮ ಸೈನಿಕರಿಗೆ ಹೋರಾಡಲು ಅವಕಾಶವೇ ಸಿಗಲಿಲ್ಲ' ಎಂಬ ಹೇಳಿಕೆ ನೀಡಿದ್ದು ಟೀಕೆ ಎದುರಿಸುತ್ತಿದ್ದಾರೆ. ಮುಂದುವರಿದು ಚೀನಾದ ಕಡೆಯ ಯಾವ ಸೈನಿಕರು ಮೃತರಾಗಿಲ್ಲ, ಅವರಿಗೆ ಗಾಯಗಳು ಆಗಿಲ್ಲ ಎಂದಿದ್ದಾರೆ.

ಚೀನಾ ಸೊಕ್ಕು ಮುರಿಯಲು 52  ಅಸ್ತ್ರಗಳು

ಸೈನಿಕರು ದೊಣ್ಣೆಗಳನ್ನು ಯಾಕೆ ತೆಗೆದುಕೊಂಡು ಹೋದರು? ಸೈನಿಕರೇನು ಆರ್ ಎಸ್ ಎಸ್ ಕಾರ್ಯಕರ್ತರೆ?  ಕೇಂದ್ರ ಸರ್ಕಾರ ಆರ್ ಎಸ್ ಎಸ್ ಕಾರ್ಯಕರ್ತರ ಕೈಯಲ್ಲಿ ಕೋಲು ಹಿಡಿಸಿ ಗಡಿ ರಕ್ಷಣೆಗೆ ಕಳುಹಿಸಬೇಕು ಎಂದಿದ್ದಾರೆ. 

ಪ್ರಚೋದನಕಾರಿ ಪೋಸ್ಟ್ ಹಾಕುವುದರಲ್ಲಿ ನಿಸ್ಸೀಮರಾಗಿರುವ  ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಮಾಜಿ ಕಾರ್ಯಕಾರಿ ನಿರ್ದೇಶಕ ಆಕಾರ್ ಪಟೇಲ್  ಟ್ವೀಟ್ ಮಾಡಿದ್ದು ದೊಡ್ಡ ಸುದ್ದಿಯಾಯಿತು.

ನಮ್ಮ ನಿಜವಾದ ವೈರಿ ಬಿಜೆಪಿ, ಚೀನಾ ಕೇವಲ ಒಂದು ಎದುರಾಳಿ ಅಷ್ಟೇ ಎಂದು ಬರೆದುಕೊಂಡಿದ್ದರು. ಇದಕ್ಕೆ ಕಟುವಾದ ಉತ್ತರ ನೀಡಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ದೇಶದ ಒಳಗಿನ ಇಂಥ ವಿಷಪೂರಿತ ಹಾವುಗಳು ಗಡಿಯಲ್ಲಿ ತೊಂದರೆ ಕೊಡುತ್ತಿರುವವರಿಗಿಂತಲೂ ಅಪಾಯಕಾರಿ ಎಂದು ಹೇಳಿದ್ದರು.