Asianet Suvarna News Asianet Suvarna News

ಕೇರಳ ಶಾಲೆಯಲ್ಲಿ ಅಮೆರಿಕ ಮಾದರಿ ಶೂಟೌಟ್‌: ಶಾಲೆಗೆ ನುಗ್ಗಿ ಗುಂಡು ಹಾರಿಸಿದ ಮಾಜಿ ವಿದ್ಯಾರ್ಥಿ!

ಅಮೆರಿಕದಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಗನ್‌ ಹಿಡಿದ ಶೂಟೌಟ್‌ ಮಾಡಿದ ಘಟನೆ ಕೇಳಿದ್ದೇವೆ. ಆದರೆ ಅಂಥದ್ದೇ ರೀತಿಯ ಘಟನೆ ಈಗ ಕೇರಳದ ತ್ರಿಶ್ಶೂರಿನಲ್ಲೂ (thrissur)ನಡೆದಿದ್ದು, ನಗರವನ್ನು ಬೆಚ್ಚಿಬೀಳಿಸಿದೆ.

America model shootout in Kerala school drug addict Former student suddenly entered the school with a gun and fired several rounds akb
Author
First Published Nov 22, 2023, 7:21 AM IST

ತ್ರಿಶ್ಶೂರು: ಅಮೆರಿಕದಲ್ಲಿ ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಗನ್‌ ಹಿಡಿದ ಶೂಟೌಟ್‌ ಮಾಡಿದ ಘಟನೆ ಕೇಳಿದ್ದೇವೆ. ಆದರೆ ಅಂಥದ್ದೇ ರೀತಿಯ ಘಟನೆ ಈಗ ಕೇರಳದ ತ್ರಿಶ್ಶೂರಿನಲ್ಲೂ (thrissur)ನಡೆದಿದ್ದು, ನಗರವನ್ನು ಬೆಚ್ಚಿಬೀಳಿಸಿದೆ. ಇಲ್ಲಿನ ವಿವೇಕೋಧಯಂ ಖಾಸಗಿ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಮಾನಸಿಕ ರೋಗಿಯಾಗಿದ್ದ ಜಗನ್‌ (Jagan)ಎಂಬಾತ ಮಂಗಳವಾರ ಏಕಾಏಕಿ ಗನ್‌ ಹಿಡಿದು ಶಾಲೆಗೆ ನುಗ್ಗಿ ಹಲವು ಸುತ್ತಿನ ಗುಂಡು ಹಾರಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಳಿಕ ಜಗನ್‌ನನ್ನು ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ.

ಆರೋಪಿ ಜಗನ್‌ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಚಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಅದಾಗ್ಯೂ ಆತ ಶಾಲೆಗೆ ನುಗ್ಗಿದ್ದ ವೇಳೆ ಮಾದಕ ವಸ್ತು ಸೇವನೆ ಮಾಡಿದ್ದ. ಬಹುಶಃ ಅದರ ಅಮಲಿನಲ್ಲೇ ಆತ ಇಂಥದ್ದೊಂದು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.  ಘಟನೆ ಬಗ್ಗೆ ವಿವರಣೆ ನೀಡಿದ ಶಾಲಾ ಸಿಬ್ಬಂದಿ, ‘ಜಗನ್‌ ಮೊದಲು ಶಿಕ್ಷಕರ ಕೊಠಡಿಗೆ ಹೋಗಿ, ಬಳಿಕ ತನ್ನ ಬ್ಯಾಗ್‌ನಿಂದ ಗನ್‌ ಹೊರತೆಗೆದ. ನಂತರ ಕೈಯ್ಯಲ್ಲಿ ಗನ್‌ ಹಿಡಿದು ಶಿಕ್ಷಕರನ್ನು ಹೆದರಿಸುತ್ತ, ವಿದ್ಯಾರ್ಥಿಗಳಿದ್ದ ಕೊಠಡಿಗೆ ಹೋಗಿ ಅವರನ್ನೂ ಹೆದರಿಸಿದ. ಅಲ್ಲದೇ ಒಂದೆರಡು ಸುತ್ತು ಗುಂಡು ಹಾರಿಸಿದ. ಆದರೆ ಯಾರಿಗೂ ಗುಂಡು ತಾಗಲಿಲ್ಲ’ ಎಂದಿದ್ದಾರೆ.

ಕರ್ನಾಟಕ-ಕೇರಳ ಗಡೀಲಿ ಶೂಟೌಟ್‌: ಇಬ್ಬರು ನಕ್ಸಲರ ಬಂಧನ; ಮೂವರು ಎಸ್ಕೇಪ್‌

ಇನ್ನು ಘಟನೆ ಬಗ್ಗೆ ಆತಂಕ ಪಡಬೇಡಿ ಎಂದು ಪೋಷಕರು ಹಾಗೂ ಸ್ಥಳೀಯರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ಜಗನ್‌ ಗನ್‌ ಝಳಪಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೆಂಗಳೂರು: ಜ್ಯುವೆಲ್ಲರಿ ಶಾಪಲ್ಲಿ ಶೂಟೌಟ್‌, ಸಿನಿಮೀಯ ಶೈಲಿಯಲ್ಲಿ ಚಿನ್ನ ಕದ್ದು ದರೋಡೆಕೋರರು ಪರಾರಿ..!

Follow Us:
Download App:
  • android
  • ios