- ಡೆಲ್ಲಿ ಮಂಜು

ನವದೆಹಲಿ(ಆ.20): ಬೆಂಗಳೂರಿನ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿದ್ದುಕೊಂಡು, ಭಯೋತ್ಪಾದಕ ಸಂಘಟನೆ ಐಸಿಸ್‌ಗೆ ತಾಂತ್ರಿಕ ನೆರವು ನೀಡುತ್ತಿದ್ದ ಆರೋಪದಲ್ಲಿ ಬಂಧಿತನಾದ ಶಂಕಿತ ಉಗ್ರ ಡಾ. ಅಬ್ದುರ್‌ ರೆಹಮಾನ್‌ ಸೆರೆ ಸಿಕ್ಕಿದ್ದು ಹೇಗೆಂಬ ಬಗ್ಗೆ ರೋಚಕ ಮಾಹಿತಿ ಲಭ್ಯವಾಗಿದೆ. ತನಿಖಾ ಸಂಸ್ಥೆಗಳ ಕಣ್ತಪ್ಪಿಸಿ ಕಾರ್ಯಾಚರಣೆ ನಡೆಸುತ್ತಿದ್ದ ಡಾ ಅಬ್ದುರ್‌ ರೆಹಮಾನ್‌ ಬಗ್ಗೆ ಸುಳಿವು ನೀಡಿದ್ದು ಅಮೆರಿಕದಿಂದ ಬಂದ ಎಚ್ಚರಿಕೆ ಸಂದೇಶ ಎಂದು ಇದೀಗ ತಿಳಿದು ಬಂದಿದೆ.

"

2018ರಲ್ಲಿ ಬಂದ ಸುಳಿವನ್ನು ಆಧರಿಸಿ ಸುಮಾರು 2 ವರ್ಷಗಳ ಕಾಲ ಬೇಟೆಯಾಡುತ್ತಾ ಹೋದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳಿಗೆ ಭಯೋತ್ಪಾದನೆ ಜಾಲದ ಆಳ ಅನಾವರಣಗೊಳ್ಳುತ್ತಾ ಹೋಗಿ ಡಾ ಅಬ್ದುರ್‌ ರೆಹಮಾನ್‌ ಬಂಧನಕ್ಕೆ ಕಾರಣವಾಯಿತು ಎಂದು ಉನ್ನತ ಮೂಲಗಳು ತಿಳಿಸಿವೆ.

ಅಮೆರಿಕ ಎಚ್ಚರಿಕೆ:

2018ರಲ್ಲಿ ಐಸಿಸ್‌ ಉಗ್ರರ ಚಟುವಟಿಕೆಗಳ ಬಗ್ಗೆ ಎಚ್ಚರಿಸಿದ್ದ ಅಮೆ​ರಿಕವು ಭಯೋತ್ಪಾದನೆ ನಿಗ್ರಹದ ಬಗ್ಗೆ ಮಾತನಾಡುವ ಭಾರತ, ಮೊದಲು ತನ್ನ ದೇಶದವರ ಮೇಲೆ ನಿಗಾ ಇಡಬೇಕು ಎಂದು ಉಲ್ಲೇಖಿಸಿದ್ದ ವರದಿಯೊಂದನ್ನು ಸರ್ಕಾ​ರಕ್ಕೆ ಕಳು​ಹಿಸಿ ಕೊಟ್ಟಿತ್ತು. ಅಲ್ಲದೆ, ಸಿರಿಯಾದಲ್ಲಿ ಭಯೋತ್ಪಾದಕರನ್ನು ಮಟ್ಟಹಾಕುವಾಗ ಸಿಕ್ಕಿದ ಭಾರ​ತದ ಔಷಧಗಳ ಲೇಬಲ್‌ಗಳನ್ನು ಸಂಗ್ರಹಿಸಿ ಸಾಕ್ಷ್ಯ​ವಾಗಿ ನೀಡಿ​ತ್ತು.

ಅಖಂಡ ಕಣ್ಣೀರು, ಮನೆ ಸುಟ್ಟಿದ್ದಕ್ಕಿಂತಲೂ ನೋವು ತಂದ ಬೇರೆ ವಿಚಾರ

ಅದ​ರಂತೆ ತಕ್ಷಣ ಶಂಕಿ​ತರ ಜಾಡು ಹಿಡಿದು ಹೊರಟ ಭಾರತದ ತನಿಖಾ ಸಂಸ್ಥೆಗಳು, ಪ್ರತಿ​ಯೊ​ಬ್ಬ ಶಂಕಿ​ತರ ಚಟುವಟಿಕೆ ಮೇಲೂ ನಿಗಾ ವಹಿಸುತ್ತಾ ಹೋದವು. ಇದೇ ವೇಳೆ, ಇಸ್ಲಾಮಿಕ್‌ ಸ್ಟೇಟ್‌ ಖೊರಾಸಾನ್‌ ಪ್ರಾಂತ್ಯ (ಐಎಸ್‌ಕೆಪಿ) ಎಂಬ ಐಸಿಸ್‌ ಸೋದರ ಸಂಘಟನೆ ಕಾಶ್ಮೀರ ಸೇರಿ ದೇಶದೆಲ್ಲೆಡೆ ವಿಧ್ವಂಸಕ ಕೃತ್ಯ ಎಸಗಲು ಸಿದ್ಧವಾಗಿತ್ತು. ಈ ಕುರಿತ ಮಾಹಿತಿ ಪಡೆದು ಗುಪ್ತ​ಚರ ಸಂಸ್ಥೆ​ಗಳು ನಡೆ​ಸಿ​ದ ಕಾರ್ಯಾಚರಣೆ ವೇಳೆ ಕಾಶ್ಮೀರ ಮೂಲದ ಜಹಾನೆಬ್‌ ದಂಪತಿ ಬಂಧನವಾಗಿತ್ತು. ಅವರ ವಿಚಾ​ರ​ಣೆ​ಯಿಂದ ಹೊರ​ಬಿದ್ದ ಮಾಹಿತಿಯಂತೆ ಬಳಿಕ ಡಾ.ಅಬ್ದುರ್‌ ರೆಹಮಾನ್‌ ಜಾಡು ಸಿಕ್ಕಿ​ತು. ಈವ​ರೆಗೆ ನಡೆ​ದಿ​ರುವ ತನಿಖೆ ಪ್ರಕಾರ ಹಣಕಾಸು, ವೈದ್ಯಕೀಯ ಸೇವೆ ಸೇರಿ ಉಗ್ರ​ರಿ​ಗೆ ವಿವಿಧ ರೀತಿ​ಯಲ್ಲಿ ನೆರವು ನೀಡು​ವ ಚಟುವಟಿಕೆಗಳಲ್ಲಿ ಡಾ.ಅ​ಬ್ದುಲ್‌ ರೆಹ​ಮಾನ್‌ ಭಾಗಿಯಾಗಿದ್ದ ಎನ್ನುತ್ತವೆ ಎನ್‌ಐಎ ಉನ್ನತ ಮೂಲಗಳು.

ಸೋಷಿಯಲ್‌ ಮೀಡಿಯಾಕ್ಕಾಗಿ ‘ಡಾಕ್ಟರ್‌ ಬ್ರೇವ್‌’ ಗುಪ್ತ ಹೆಸರು

ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಬಲೆಗೆ ಬಿದ್ದ ಶಂಕಿತ ಉಗ್ರ ಡಾ.ಅಬ್ದುರ್‌ ರೆಹಮಾನ್‌ ಊರಿಗೆಲ್ಲಾ ಗೊತ್ತಿರುವಂತೆ ಎಂ.ಎ​ಸ್‌.​ರಾ​ಮಯ್ಯ ವೈದ್ಯ​ಕೀಯ ವಿದ್ಯಾ​ಲ​ಯ​ದ ನೇತ್ರ ತಜ್ಞ​. ಆದರೆ ಉಗ್ರರ ಪಾಲಿಗೆ ಮಾತ್ರ ಈತ ಮಿಸ್ಟರ್‌ ಧೈರ್ಯವಂತನಂತೆ. ಉಗ್ರರ ಗುಂಪಿ​ನಲ್ಲಿ ತನಗೆ ‘ಡಾ ಬ್ರೇವ್‌’ ಎಂಬ ಅಡ್ಡ ಹೆಸ​ರಿತ್ತು ಎಂಬ ವಿಚಾ​ರ​ವನ್ನು ಎನ್‌​ಐಎ ಅಧಿ​ಕಾ​ರಿ​ಗಳ ಮುಂದೆ ಡಾ.ರೆ​ಹ​ಮಾನ್‌ ವಿಚಾ​ರಣೆ ವೇಳೆ ಹೇಳಿ​ಕೊಂಡಿ​ದ್ದಾ​ನೆ.

ಈತನ ಪ್ರಕಾರ ಡಾ. ಬ್ರೇವ್‌ ಅಂದರೆ ‘ದಿಲ್ ಇರೋನು’ ಅಂಥ ಅರ್ಥವಂತೆ. ಹೀಗಾಗಿ ‘ಅಬ್ದುರ್‌ ಡಾ.ಬ್ರೇವ್‌ ಬಸವನಗುಡಿ’ ಅಂತ ಟೆರರ್‌ ಕೋಡ್‌ ನೇಮ್‌ ಇಟ್ಟುಕೊಂಡಿದ್ದನಂತೆ. ವೈದ್ಯ​ನಾ​ಗಿ​ದ್ದು​ಕೊಂಡೇ ಉಗ್ರರ ಪಾಲಿಗೆ ಸ್ಲೀಪರ್‌ ಸೆಲ್‌​ನಂತೆ ಕೆಲಸ ಮಾಡು​ತ್ತಿದ್ದ ಈತ​ನಿಗೆ ತಾನು ಭಯೋತ್ಪಾದನಾ ಚಟುವಟಿಕೆಗಳಿಗೆ ನೆರವಾಗಲೆಂದು ಅಭಿವೃದ್ಧಿಪಡಿಸುತ್ತಿದ್ದ ಆ್ಯಪ್‌ಗಳೇ ಕೊನೆಗೆ ಮುಳುವಾದವು, ಬಂಧ​ನಕ್ಕೆ ದಾರಿ ಮಾಡಿ​ಕೊ​ಟ್ಟವು ಎನ್ನು​ತ್ತವೆ ಮೂಲ​ಗ​ಳು.