Asianet Suvarna News Asianet Suvarna News

Google CEO ಸುಂದರ್ ಪಿಚೈ, ಮುಕೇಶ್ ಅಂಬಾನಿ ಜತೆ ಕ್ರಿಕೆಟ್‌ ಪಂದ್ಯ ವೀಕ್ಷಿಸಿದ ರವಿಶಾಸ್ತ್ರಿ

* ಆಗಸ್ಟ್ ತಿಂಗಳಿನಲ್ಲಿ ರವಿಶಾಸ್ತ್ರಿಗೆ ಜತೆಯಾದ ಇಬ್ಬರು ಕ್ರಿಕೆಟ್ ಪ್ರೇಮಿಗಳು
* ದಿ ಹಂಡ್ರೆಡ್ ಕ್ರಿಕೆಟ್ ಪಂದ್ಯ ವೀಕ್ಷಿಸಿದ ಸುಂದರ್ ಪಿಚೈ, ಮಕೇಶ್ ಅಂಬಾನಿ
* ಟ್ವೀಟ್‌ ಮೂಲಕ ಫೋಟೋ ಹಂಚಿಕೊಂಡ ಮಾಜಿ ಕೋಚ್ ರವಿಶಾಸ್ತ್ರಿ

Former Cricketer Ravi Shastri Watches The Hundred Cricket tournament With Sundar Pichai and Mukesh Ambani kvn
Author
Bengaluru, First Published Aug 10, 2022, 1:32 PM IST

ಲಂಡನ್(ಆ.10): ಟೀಂ ಇಂಡಿಯಾ ಮಾಜಿ ಕೋಚ್‌ ರವಿಶಾಸ್ತ್ರಿ ಸದ್ಯ ಎರಡನೇ ಆವೃತ್ತಿಯ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯ ವೀಕ್ಷಕ ವಿವರಣೆಗಾರಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ಅವರು ಇತ್ತೀಚೆಗೆ ಕ್ರಿಕೆಟ್ ಕಾಶಿ ಎಂದೇ ಗುರುತಿಸಿಕೊಂಡಿರುವ ಲಾರ್ಡ್ಸ್‌ ಮೈದಾನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಚೇರ್‌ಮನ್‌ ಮುಕೇಶ್ ಅಂಬಾನಿ ಹಾಗೂ ಗೂಗಲ್ ಸಿಇಒ ಸುಂದರ್ ಪಿಚೈ ಜತೆಯಲ್ಲಿ ಕ್ರಿಕೆಟ್ ಪಂದ್ಯವೊಂದನ್ನು ವೀಕ್ಷಿಸಿ ಗಮನ ಸೆಳೆದಿದ್ದಾರೆ.

ಈ ಕುರಿತಂತೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ತಾವು ಹಾಗೂ ತಮ್ಮ ಜತೆಗಿರುವ ಪಿಚೈ ಮತ್ತು ಅಂಬಾನಿ ಜತೆಗಿರುವ ಫೋಟೋದೊಂದಿಗೆ ಟ್ವೀಟ್‌ವೊಂದನ್ನು ಮಾಡಿದ್ದು, ಕ್ರಿಕೆಟ್‌ ಇಷ್ಟಪಡುವ ಇಬ್ಬರು ಲಾರ್ಡ್ಸ್‌ ಮೈದಾನದಲ್ಲಿ ಆಗಸ್ಟ್‌ನಲ್ಲಿ ಕಂಪೆನಿ ನೀಡಿದ್ದಾರೆ ಎಂದು ಅಂಬಾನಿ ಹಾಗೂ ಸುಂದರ್ ಪಿಚೈ ಅವರನ್ನು ಟ್ಯಾಗ್ ಮಾಡಿದ್ದಾರೆ. 

ಟಿ20 ಕ್ರಿಕೆಟ್‌ ಜಗತ್ತಿನಲ್ಲಿ ಜನಪ್ರಿಯವಾಗುತ್ತಿದ್ದಂತೆಯೇ, ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ಅಸ್ಥಿತ್ವಕ್ಕೆ ಧಕ್ಕೆ ಉಂಟಾಗುವ ಭೀತಿ ಎದುರಾಗಿದೆ. ಇನ್ನು ಟೆಸ್ಟ್ ಕ್ರಿಕೆಟ್ ಮಾದರಿಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಮಾದರಿಯನ್ನು ಪರಿಚಯಿಸಿದೆ. ಇದೆಲ್ಲದರ ನಡುವೆ ಇಂಗ್ಲೆಂಡ್‌ನಲ್ಲಿ 100 ಎಸೆತಗಳನ್ನೊಳಗೊಂಡ ದಿ ಹಂಡ್ರೆಡ್‌ ಕ್ರಿಕೆಟ್ ಮಾದರಿ ಆಯೋಜಿಸಿ ಸೈ ಎನಿಸಿಕೊಂಡಿದೆ. 

ಇತ್ತೀಚೆಗಷ್ಟೇ ಟೆಸ್ಟ್‌ ಕ್ರಿಕೆಟ್‌ ಭವಿಷ್ಯದ ಕುರಿತಂತೆ Sky ವಾಹಿನಿಯ ಜತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದ ರವಿಶಾಸ್ತ್ರಿ, ಟೆಸ್ಟ್‌ ರೋಚಕತೆ ಹೆಚ್ಚಿಸಲು ಹೊಸ ಸಲಹೆಯೊಂದನ್ನು ನೀಡಿದ್ದರು. ಇದರಲ್ಲಿ ಅಗ್ರಶ್ರೇಯಾಂಕ ಹೊಂದಿರುವ 6 ತಂಡಗಳು ಮಾತ್ರ ಟೆಸ್ಟ್‌ ಕ್ರಿಕೆಟ್ ಆಡಬೇಕು. ಟೆಸ್ಟ್‌ ಆಡುವ ರಾಷ್ಟ್ರಗಳ ಸಂಖ್ಯೆಯನ್ನು ಕಡಿತಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.

ದಿನೇಶ್ ಕಾರ್ತಿಕ್‌ಗೆ ಟೀಂ ಇಂಡಿಯಾ ಸ್ಥಾನ ಕೊಡಲ್ಲ, ಕಮೆಂಟೇಟರ್ ಸೀಟ್ ಒಕೆ ಎಂದ ಜಡೇಜಾ!

12 ರಾಷ್ಟ್ರಗಳು ಅಥವಾ 10 ರಾಷ್ಟ್ರಗಳು ಟೆಸ್ಟ್ ಆಡುವುದು ಸರಿಯಲ್ಲ. ಟೆಸ್ಟ್ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ಅಗ್ರ 6 ತಂಡಗಳಿಗೆ ಮಾತ್ರ ಟೆಸ್ಟ್ ಆಡಲು ಅವಕಾಶ ನೀಡಬೇಕು. ಹೀಗಾದಾಗ ಮಾತ್ರ ಇತರೆ ಮಾದರಿಯ ಕ್ರಿಕೆಟ್‌ನಲ್ಲಿ ಆಟಗಾರರು ಮುಕ್ತವಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ. ಆಗ ಏಕದಿನ ಹಾಗೂ ಟಿ20 ಟೂರ್ನಿಗಳಲ್ಲಿ ಹೆಚ್ಚು ರಾಷ್ಟ್ರಗಳಿಗೆ ಅವಕಾಶ ದೊರೆಯಲಿದೆ. ಟೆಸ್ಟ್‌ ಆಡುವ ರಾಷ್ಟ್ರಗಳ ಸಂಖ್ಯೆಯನ್ನು ಕಡಿತಗೊಳಿಸುವುದರಿಂದ ಟೆಸ್ಟ್ ಮಾದರಿಯ ರೋಚಕತೆ ಹೆಚ್ಚಲಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ದ್ವಿಪಕ್ಷೀಯ ಟಿ20 ಸರಣಿಗಳಿಗೆ ಮಹತ್ವವಿಲ್ಲ. ಟಿ20 ಮಾದರಿಯನ್ನು ಕೇವಲ ವಿಶ್ವಕಪ್‌ಗೆ ಸೀಮಿತಗೊಳಿಸಬೇಕು ಎಂದಿರುವ ಭಾರತದ ಮಾಜಿ ಕೋಚ್‌ ರವಿಶಾಸ್ತ್ರಿ ‘ಅತಿ ಶೀಘ್ರದಲ್ಲಿ ವರ್ಷಕ್ಕೆ 2 ಬಾರಿ ಐಪಿಎಲ್‌ ನಡೆಯಬಹುದು. ಭವಿಷ್ಯದಲ್ಲಿ ಅದೇ ಸೂಕ್ತ’ ಎಂದು ಹೇಳಿದ್ದರು.

ಪ್ರತಿಷ್ಠಿತ ಕ್ರಿಕೆಟ್‌ ವೆಬ್‌ಸೈಟ್‌ವೊಂದಕ್ಕೆ ಮಾತನಾಡಿರುವ ಅವರು, ‘ಈಗ ತುಂಬಾ ದ್ವಿಪಕ್ಷೀಯ ಟಿ20 ಸರಣಿಗಳು ನಡೆಯುತ್ತಿವೆ. ಆದರೆ ಈ ಪಂದ್ಯಗಳನ್ನು ಯಾರೂ ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ನಾನು 6-7 ವರ್ಷ ಕೋಚ್‌ ಆಗಿದ್ದಾಗ ನಡೆದ ಟಿ20 ಪಂದ್ಯಗಳು ನನಗೆ ನೆನಪಿಲ್ಲ. ಕೇವಲ ವಿಶ್ವಕಪ್‌ ಮಾತ್ರ ನೆನೆಪಿದೆ. ಜಾಗತಿಕ ಮಟ್ಟದಲ್ಲಿ ಫ್ರಾಂಚೈಸಿ ಲೀಗ್‌ಗಳು ನಡೆಯುತ್ತಿವೆ. ಬಳಿಕ 2 ವರ್ಷಕ್ಕೊಮ್ಮೆ ವಿಶ್ವಕಪ್‌ ಮಾತ್ರ ನಡೆಯಲಿ’ ಎಂದು ಸಲಹೆ ನೀಡಿದ್ದಾರೆ.

Follow Us:
Download App:
  • android
  • ios