ಮುಂಬೈ(ಮಾ.15): ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿದ್ದ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಇದೀಗ ಮತ್ತೆ ಅಮಾನತಾಗಿದ್ದಾರೆ. ಅಂಬಾನಿ ಮನ ಮುಂದಿನ ಬಾಂಬ್ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದಿಂದ ಬಂಧನಕ್ಕೊಳಗಾಗಿದ್ದ ಸಚಿನ್ ವಾಜೆಯನ್ನು 2ನೇ ಬಾರಿಗೆ ಅಮಾನತು ಮಾಡಲಾಗಿದೆ.

ಅಂಬಾನಿ ಮನೆ ಮುಂದೆ ಸ್ಫೋಟಕ ಇಟ್ಟಿದ್ದು ಪೊಲೀಸ್‌!

ಅಂಬಾನಿ ಮನೆ ಮುಂದೆ ಕಾರಿನಲ್ಲಿ ಬಾಂಬ್ ಇಟ್ಟ ಪ್ರಕರಣ ಸಂಬಂಧ ಕಾರಿನ ಮಾಲೀಕ ಮನ್ಸೂಖ್ ಹೀರೆನ್ ನೀಗೂಢವಾಗಿ ಸಾವನ್ನಪ್ಪಿದರು.   ಈ ಘಟನೆಯಲ್ಲಿ ಸಚಿನ್ ವಾಜೆ ಕೈವಾಡ ಇದೆ ಎಂದು ಹೀರೆನ್ ಪತ್ನಿ ಆರೋಪಿಸಿದ್ದರು. ಹೀಗಾಗಿ ಸಚಿನ್ ವಾಜೆಯತ್ತ ತನಿಖಾ ದಳ ಸೂಕ್ಷ್ಮ ಕಣ್ಣಿಟ್ಟು ಬಂಧನ ಮಾಡಿತ್ತು. ಸಚಿನ್ ವಾಜೆ ಮೇಲಿನ ಆರೋಪಗಳು ಬಲಗೊಳ್ಳುತ್ತಿದೆ. ಹೀಗಾಗಿ ಸಚಿನ್ ವಾಜೆಯನ್ನು ಅಮಾನತು ಮಾಡಲಾಗಿದೆ.

ಸಚಿನ್ ವಾಜೆ ಅಮಾನತ್ತಾಗುತ್ತಿರುವುದು ಇದೇ ಮೊದಲಲ್ಲ. 2002ರಲ್ಲಿ ಘಾಟ್ಕೋಪರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿ ಖವಾಜ ಯೂನಸ್ ಹತ್ಯೆ ಪ್ರಕರಣದಲ್ಲಿ ಸಚಿನ್ ವಾಜೆ ಮೇಲೆ ಗಂಭೀರ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ 2004ರಲ್ಲಿ ಸಚಿನ್ ವಾಜೆ ಅಮಾನತಿಗೊಳಗಾದರು.

ಬರೋಬ್ಬರಿ 16 ವರ್ಷ ಅಮಾನತುಗೊಂಡಿದ್ದ ಸಚಿನ್ ವಾಜೆ ಇದರ ನಡುವೆ ಶೀವಸೆನ ಪಕ್ಷ ಸೇರಿಕೊಂಡಿದ್ದರು. ಒಂದೆರೆಡು ವರ್ಷ ಶಿವಸೇನಾದಲ್ಲಿ ಸಕ್ರೀಯರಾಗಿದ್ದ ಸಚಿನ್ ವಾಜೆ ಬಳಿಕ ಶಿಕ್ಷೆ ಮುಗಿಸಿ ಮತ್ತೆ ಪೊಲೀಸ್ ಅಧಿಕಾರಿಯಾಗಿ ಮರಳಿ ಬಂದರು. ಮರಳಿ ಬಂದ 9 ತಿಂಗಳಿಗೆ ಇದೀಗ ಮತ್ತೆ ಸಚಿನ್ ವಾಜೆ ಅಂಬಾನಿ ಮನೆ ಸಮೀಪದ ಬಾಂಬ್ ಸ್ಫೋಟ ಪ್ರಕರಣದಡಿ ಮತ್ತೆ ಅಮಾನತಾಗಿದ್ದಾರೆ.