ಕರಗ್ತಿದ್ಯಾ ಅಮರನಾಥ ಹಿಮಲಿಂಗ: ಮಳೆಯಿಂದಾಗಿ ಯಾತ್ರೆಗೆ ತಾತ್ಕಾಲಿಕ ಬ್ರೇಕ್
ಅಮರನಾಥ ಯಾತ್ರಿಕರಿಗೆ ನಿರಾಶಾದಾಯಕ ಸುದ್ದಿ ಹೊರಬಿದ್ದಿದ್ದು, ಪವಿತ್ರ ಗುಹೆಯಲ್ಲಿ ಹಿಮಲಿಂಗವು ಸಂಪೂರ್ಣವಾಗಿ ಕರಗಿ, ತಳಭಾಗ ಮಾತ್ರ ಉಳಿದಿದೆ ಎಂಬ ಸುದ್ದಿ ಹೊರಬಿದ್ದಿದೆ.
ಅಮರನಾಥ ಯಾತ್ರಿಕರಿಗೆ ನಿರಾಶಾದಾಯಕ ಸುದ್ದಿ ಹೊರಬಿದ್ದಿದ್ದು, ಪವಿತ್ರ ಗುಹೆಯಲ್ಲಿ ಹಿಮಲಿಂಗವು ಸಂಪೂರ್ಣವಾಗಿ ಕರಗಿ, ತಳಭಾಗ ಮಾತ್ರ ಉಳಿದಿದೆ ಎಂಬ ಸುದ್ದಿ ಹೊರಬಿದ್ದಿದೆ. ಕಳೆದ ವಾರ ಉಷ್ಣ ಮಾರುತ ಹಾಗೂ ಅತಿಯಾದ ಭಕ್ತರ ಭೇಟಿಯಿಂದ ಹೀಗಾಗಿದೆ ಎನ್ನಲಾಗಿದೆ. ಈ ವರ್ಷ ಈವರೆಗೆ 1.5 ಲಕ್ಷ ಭಕ್ತರು ಪವಿತ್ರ ಅಮರನಾಥನ ಹಿಮಲಿಂಗದ ದರ್ಶನ ಪಡೆದಿದ್ದಾರೆ.
ಯಾತ್ರೆ ತಾತ್ಕಾಲಿಕ ಸ್ಥಗಿತ:
ಈ ನಡುವೆ ಮಳೆಯ ಕಾರಣಕ್ಕೆ ಮುಂಜಾಗೃತಾ ಕ್ರಮವಾಗಿ ಶನಿವಾರ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ತಡರಾತ್ರಿಯಿಂದಲೂ ಬಲ್ತಾಲ್ ಹಾಗೂ ಪಹಲ್ಗಾಮ್ ಮಾರ್ಗಗಳಲ್ಲಿ ಧಾರಾಕಾರವಾಗಿ ಮಳೆಯಾಗ್ತಿದೆ. ಪವಿತ್ರ ಅಮರನಾಥ ಯಾತ್ರೆ ಜೂನ್ 29ರ ಶನಿವಾರ ಆರಂಭವಾಗಿದ್ದು, ಮೊದಲ ದಿನವೇ 13,736 ಜನರು ಹಿಮಲಿಂಗದ ದರ್ಶನ ಪಡೆದಿದ್ದರು. ಈ ಸಲ ಉಗ್ರರ ಉಪಟಳದ ನಡುವೆಯೂ ಭಾರಿ ಬಿಗಿ ಭದ್ರತೆ ನಡುವೆ ಯಾತ್ರೆ ಶುರುವಾಗಿತ್ತು. ಆದರೆ ಈಗ ಮಳೆಯ ಕಾರಣಕ್ಕೆ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯಾತ್ರೆಗೆ ಇದುವರೆಗೂ 3.50ಲಕ್ಷಕ್ಕೂ ಹೆಚ್ಚಿನ ಜನರು ನೋಂದಾಯಿಸಿಕೊಂಡಿದ್ದಾರೆ. ಆಗಸ್ಟ್ 19ರಂದು ಯಾತ್ರೆ ಮುಕ್ತಾಯಗೊಳ್ಳಲಿದೆ.
ಓಂ ಶಿವೋಂ... ಎರಡೂ ಕಾಲಿಲ್ಲ ಆದರೂ ಅಮರನಾಥಕ್ಕೆ ಇವರದ್ದು 12ನೇ ಯಾತ್ರೆ : ಇವರಿಗಿಂತ ಸ್ಪೂರ್ತಿ ಬೇಕೆ?
52 ದಿನಗಳ ಈ ಯಾತ್ರೆಯಲ್ಲಿ ಎರಡು ಪ್ರತ್ಯೇಕ ಮಾರ್ಗಗಳಿವೆ. ಒಂದು 48 ಕಿಲೋಮೀಟರ್ ದೂರದ ಪಹಾಲ್ಗಾಂ ಮಾರ್ಗವಾಗಿದೆ. ಮತ್ತೊಂದು 14 ಕಿಲೋಮೀಟರ್ ದೂರದ ಕಡಿದಾದ ಬಾಲ್ತಾಲ್ ಮಾರ್ಗದಲ್ಲಿ ಅಮರನಾಥ ಗುಹೆಗೆ ತೆರಳಬಹುದಾಗಿದೆ. ಈ ಸಲ ಉಗ್ರರ ಉಪಟಳದ ನಡುವೆಯೂ ಭಾರಿ ಬಿಗಿ ಭದ್ರತೆ ನಡುವೆ ಯಾತ್ರೆ ಆರಂಭಗೊಂಡಿದ್ದು, ಜಮ್ಮು ಕಾಶ್ಮೀರ ಪೊಲೀಸರು, ಐಟಿಬಿಪಿ ಸಿಬ್ಬಂದಿ, ಸೇನೆ ಸೇರಿದಂತೆ ವಿವಿಧ ಭದ್ರತಾ ಪಡೆಗಳು ಸಾವಿರಾರು ಸಿಬ್ಬಂದಿ ಯಾತ್ರಿಗಳಿಗೆ ಸರ್ಪಗಾವಲಾಗಿ ನಿಂತಿದ್ದಾರೆ.
ಅಮರನಾಥ ಯಾತ್ರೆ ನಂತರ ಕಾಶ್ಮೀರ ವಿಧಾನಸಭೆ ಚುನಾವಣೆ?
ಶ್ರೀನಗರ: ಇತ್ತೀಚೆಗೆ ಆರಂಭವಾಗಿರುವ ಅಮರನಾಥ ಯಾತ್ರೆ ಮುಗಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಅಮರನಾಥ ಯಾತ್ರೆಯು ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ. ಅದರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ. ಜುಲೈ 4 ರಂದು ಗುರುವಾರ ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ನೇತೃತ್ವದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧರಾಗುವಂತೆ ರಾಜ್ಯ ನಾಯಕರಿಗೆ ಸೂಚಿಸಲಾಗಿದೆ ಎಂಬ ಮಾಹಿತಿ ಇದೆ. ಎಲ್ಲ 90 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಯಾತ್ರಿಗಳ ಅನುಕೂಲಕ್ಕೆ ಶೀಘ್ರವೇ ಅಮರನಾಥ ಗುಹೆಗೆ ರಸ್ತೆ ಮಾರ್ಗ!
2018 ನವೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯನ್ನು ವಿಸರ್ಜಿಸಲಾಗಿತ್ತು. 2019ರಲ್ಲಿ ರಾಜ್ಯಕ್ಕೆ ಇರುವ ವಿಶೇಷ ಸ್ಥಾನಮಾನವನ್ನು ರದ್ದು ಗೊಳಿಸಲಾಗಿತ್ತು. ನಂತರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿತ್ತು. ಅಂದಿನಿಂದ ಇಲ್ಲಿ ವಿಧಾನಸಭೆ ಚುನಾವಣೆ ನಡೆದಿಲ್ಲ.