ಆಂಧ್ರಪ್ರದೇಶಕ್ಕೆ ಅಮರಾವತಿಯೊಂದೇ ರಾಜಧಾನಿ: ನಾಯ್ಡು ಘೋಷಣೆ

ನಮ್ಮ ಸರ್ಕಾರದಲ್ಲಿ ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಮಾಡುವ ಕುರಿತು ಯಾವುದೇ ಪ್ರಸ್ತಾವ ಹಾಗೂ ಗೊಂದಲವಿಲ್ಲ. ಆಂಧ್ರಪ್ರದೇಶಕ್ಕೆ ಅಮರಾವತಿ ಏಕಮಾತ್ರ ರಾಜಧಾನಿಯಾಗಿರಲಿದೆ ಎಂದು ಸ್ಪಷ್ಟಪಡಿಸಿದ ಚಂದ್ರಬಾಬು ನಾಯ್ಡು 

Amaravati is the only Capital City of Andhra Pradesh Says Chandrababu Naidu grg

ಅಮರಾವತಿ(ಜೂ.12):  ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವ ಮುನ್ನಾದಿನ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅಮರಾವತಿ ನಗರ ಮಾತ್ರ ಆಂಧ್ರಪ್ರದೇಶದ ರಾಜಧಾನಿಯಾಗಿರಲಿದೆ ಎಂದು ಘೋಷಿಸಿದ್ದಾರೆ.

ಎನ್‌ಡಿಎ ಮೈತ್ರಿ ಸಭೆಯಲ್ಲಿ ಪ್ರಕಟಿಸಿದ ನಾಯ್ಡು, ‘ನಮ್ಮ ಸರ್ಕಾರದಲ್ಲಿ ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಮಾಡುವ ಕುರಿತು ಯಾವುದೇ ಪ್ರಸ್ತಾವ ಹಾಗೂ ಗೊಂದಲವಿಲ್ಲ. ಆಂಧ್ರಪ್ರದೇಶಕ್ಕೆ ಅಮರಾವತಿ ಏಕಮಾತ್ರ ರಾಜಧಾನಿಯಾಗಿರಲಿದೆ’ ಎಂದು ತಿಳಿಸಿದರು.

ಆಂಧ್ರ, ಒಡಿಸಾಗೆ ಇಂದು ನೂತನ ಸರ್ಕಾರ: ನಾಯ್ಡು, ಮಾಝಿಗೆ ಸಿಎಂ ಪಟ್ಟ

2014ರಲ್ಲಿ ನಾಯ್ಡು ಅಮರಾವತಿ ರಾಜಧಾನಿ ಮಾಡುವ ಯೋಜನೆಗೆ ಚಾಲನೆ ನೀಡಿದ್ದರು. ಆದರೆ 2019ರ ಚುನಾವಣೆಯಲ್ಲಿ ನಾಯ್ಡು ಸೋತ ಬಳಿಕ ಯೋಜನೆ ರದ್ದು ಮಾಡಿದ್ದ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಪ್ರತ್ಯೇಕ 3 ರಾಜಧಾನಿ ಮಾಡಲು ಮುಂದಾಗಿದ್ದರು. ಆದರೆ ಇದೀಗ ನಾಯ್ಡು ಮತ್ತೆ ಗೆದ್ದಿರುವ ಹಿನ್ನೆಲೆಯಲ್ಲಿ ಹಳೆ ಯೋಜನೆಗೆ ಮತ್ತೆ ಜೀವ ಬಂದಿದೆ.

Latest Videos
Follow Us:
Download App:
  • android
  • ios