Asianet Suvarna News Asianet Suvarna News

'ನನಗೆ ಕಿರುಕುಳ ನೀಡ್ತಿದ್ದಾರೆ..' ಜ್ಞಾನವಾಪಿ ಪ್ರಕರಣದಿಂದ ಹಿಂದೆ ಸರಿಯಲು ಮುಂದಾದ ಹಿಂದೂ ಅರ್ಜಿದಾರರು!

ವಾರಣಾಸಿಯ ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣದಲ್ಲಿ ಐವರು ಹಿಂದೂ ಮಹಿಳಾ ಫಿರ್ಯಾದಿಗಳಲ್ಲಿ ಒಬ್ಬರಾದ ರಾಖಿ ಸಿಂಗ್ ಅವರಿಗೆ ಜಿತೇಂದ್ರ ಸಿಂಗ್ ವಿಶೇನ್ ಅವರು "ಮುಖ್ಯ ವಾದಿ' ಆಗಿದ್ದಾರೆ.
 

Alleged Harassment Gyanvapi Mosque Case Main Hindu Petitioner To Withdraw san
Author
First Published Jun 5, 2023, 2:49 PM IST

ವಾರಣಾಸಿ (ಜೂ.5):  ಹಿಂದೂ ಕಡೆಯ ಪ್ರಮುಖ ದಾವೆದಾರರಲ್ಲಿ ಒಬ್ಬರಾದ ವಿಶ್ವ ವೈದಿಕ ಸನಾತನ ಸಂಘದ ಮುಖ್ಯಸ್ಥ ಜಿತೇಂದ್ರ ಸಿಂಗ್ ವಿಶನ್ ಅವರು "ಕಿರುಕುಳ" ಆರೋಪದ ಕಾರಣದಿಂದ ತಾನು ಮತ್ತು ತನ್ನ ಕುಟುಂಬವು ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ವಾರಣಾಸಿಯ ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣದಲ್ಲಿ ಐವರು ಹಿಂದೂ ಮಹಿಳಾ ಅರ್ಜಿದಾರರಲ್ಲಿ ಒಬ್ಬರಾದ ರಾಖಿ ಸಿಂಗ್ ಅವರ "ಮುಖ್ಯ ವಾದಿ" ಯಾಗಿ ಜಿತೇಂದ್ರ ಸಿಂಗ್‌ ವಿಶನ್‌ ಅವರು ಗುರುತಿಸಿಕೊಂಡಿದ್ದರು. ಆದರೆ, ಈ ಸ್ಥಾನದಿಂದ ಹಿಂದೆ ಸರಿಯುತ್ತಿರುವುದಾಗಿ ವಿಶನ್‌ ಹೇಳಿದ್ದಾರೆ. ಪ್ರಕರಣವನ್ನು ಸ್ಪರ್ಧಿಸಲು ಅಗತ್ಯವಾದ ಸಂಪನ್ಮೂಲಗಳ ಕೊರತೆ ಮತ್ತು "ಧರ್ಮವಿರೋಧಿಗಳ ಕಿರುಕುಳ"ದಿಂದಾಗಿ ತಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ವಿಶನ್‌ ಹೇಳಿದ್ದಾರೆ. ಆದರೆ, ತಮ್ಮ ಈ ನಿರ್ಧಾರದ ಕುರಿತಾಗಿ ವಿಶನ್‌ ಇನ್ನೂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಐವರು ಹಿಂದೂ ಮಹಿಳೆಯರಾದ ರಾಖಿ ಸಿಂಗ್, ಮಂಜು ವ್ಯಾಸ್, ರೇಖಾ ಪಾಠಕ್, ಸೀತಾ ಸಾಹು ಮತ್ತು ಲಕ್ಷ್ಮಿ ದೇವಿ, 2021ರ ಆಗಸ್ಟ್‌ನಲ್ಲಿ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ವಾರಣಾಸಿಯ ನ್ಯಾಯಾಲಯದಲ್ಲಿ ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣವನ್ನು ದಾಖಲು ಮಾಡಿದ್ದರು. ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಮಾ ಶೃಂಗಾರ್ ಗೌರಿ ಸ್ಥಳದಲ್ಲಿ ದೈನಂದಿನ ಪೂಜೆಗೆ ಅವಕಾಶ ನೀಡುವಂತೆ ಇವರು ಮನವಿ ಮಾಡಿದ್ದರು.

ದೇಶ ಮತ್ತು ಧರ್ಮದ ಹಿತಾಸಕ್ತಿಯಿಂದ ವಿವಿಧ ನ್ಯಾಯಾಲಯಗಳಲ್ಲಿ ನಾವು ಸಲ್ಲಿಸಿರುವ ಎಲ್ಲಾ ಪ್ರಕರಣಗಳ ಮನವಿಯಿಂದ ನಾನು ಮತ್ತು ನನ್ನ ಕುಟುಂಬ ಸದಸ್ಯರು ಹಿಂದೆ ಸರಿಯಲು ನಿರ್ಧರಿಸಿದ್ದೇವೆ ಎಂದು ವಿಶನ್‌ ಹೇಳಿದ್ದಾರೆ. ನನ್ನ ಸೊಸೆ ರಾಖಿ ಸಿಂಗ್ ಮತ್ತು ನಾಲ್ವರು ಮಹಿಳೆಯರೊಂದಿಗೆ ಪ್ರಕರಣ ದಾಖಲಿಸಿದ್ದಾರೆ. ನಾನು ಈ ಐವರು ಮುಖ್ಯವಾದಿಯಾಗಿ ಈ ಪ್ರಕರಣದೊಂದಿಗೆ ಸಂಬಂಧ ಹೊಂದಿದ್ದೇನೆ. 2022ರ ಮೇ ತಿಂಗಳಿನಲ್ಲಿ ನನ್ನ ಪತ್ನಿ ಕಿರಣ್‌ ಸಿಂಗ್‌ ಸಿವಿನ್‌ ನ್ಯಾಯಾಧೀಶರ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ನಲ್ಲಿ ಕೂಡ ಅರ್ಜಿ ಸಲ್ಲಿಸಿದ್ದಾರೆ. ರಾಖಿ ಸಿಂಗ್ ಪರವಾಗಿ ವಿಶೆನ್ ಶೃಂಗಾರ್ ಗೌರಿ ಪ್ರಕರಣವನ್ನು ವಾದಿಸಲು ತೊಡಗಿದ್ದಾಗ, ಅವರ ಪತ್ನಿ ಕಿರಣ್ ಸಿಂಗ್ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಆದಿ ವಿಶ್ವೇಶ್ವರ ವಿರಾಜಮಾನನ ದೈನಂದಿನ ಪೂಜೆಗೆ ಅನುಮತಿ ಕೋರಿ ಮೊಕದ್ದಮೆ ಹೂಡಿದ್ದರು.

"ಈ ಪ್ರಕರಣಗಳು ದಾಖಲಾದಾಗಿನಿಂದ, ನನ್ನ ಕುಟುಂಬ ಸದಸ್ಯರಿಗೆ ಮತ್ತು ನನಗೆ ಹಿಂದೂ ಧರ್ಮದ ವಿರುದ್ಧ ಧರ್ಮ ವಿರೋಧಿಗಳು ಕಿರುಕುಳ ನೀಡಲಾಗುತ್ತಿದೆ, ಈ ಜನರು ನಮ್ಮನ್ನು ಗದ್ದರ್ (ದೇಶದ್ರೋಹಿ) ಎಂದು ಘೋಷಿಸಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ, ಸಮಾಜವು ಸಹ ಇವರೊಂದಿಗೆ ನಿಂತಿದೆ' ಎಂದು ವಿಶನ್‌ ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ಪ್ರಕರಣದ ವಿಚಾರಣೆಗೆ ಅಗತ್ಯವಾದ ಹಣವನ್ನು ಹೊಂದಿಸಲು ನಾನು ನನ್ನ ಕಾರನ್ನು ಮಾರಾಟ ಮಾಡಿದ್ದೆ, ಆದರೆ ಈಗ ನಾನು ಬಹಳ ಸೀಮಿತ ಸಂಪನ್ಮೂಲ ಮತ್ತು ಶಕ್ತಿಯಿಂದ ಉಳಿದಿದ್ದೇನೆ, ಇದರಿಂದಾಗಿ ನಾನು ಇನ್ನು ಮುಂದೆ ಪ್ರಕರಣಗಳ ಹೋರಾಟ ಮಾಡಲು ನನ್ನ ಕುಟುಂಬಕ್ಕೆ ಸಾಧ್ಯವಿಲ್ಲ. ನಾವು ಈ ಪ್ರಕರಣಗಳ ಮನವಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಔರಂಗಜೇಬ್‌ ಕ್ರೂರಿ ಆಗಿರಲಿಲ್ಲ, ವಿಶ್ವನಾಥ ಮಂದಿರ ಕೆಡವಲಿಲ್ಲ: ಕಾಶಿ ಗ್ಯಾನವಾಪಿ ಮಸೀದಿ ಸಮಿತಿ

ವಿಶೆನ್ ಅವರ ವಕೀಲ ಶಿವಂ ಗೌರ್ ಕೂಡ ಪ್ರಕರಣಗಳಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಏತನ್ಮಧ್ಯೆ, ಹಿಂದೂ ವಾದಿಗಳ ಪರ ವಕೀಲ ಸುಭಾಷ್ ನಂದನ್ ಚತುರ್ವೇದಿ, "ಜಿತೇಂದ್ರ ಸಿಂಗ್ ವಿಶನ್ ಅವರು ಪ್ರಕರಣದ ಮನವಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ವಿಶೆನ್ ಇನ್ನೂ ಲಿಖಿತವಾಗಿ ಅರ್ಜಿ ಸಲ್ಲಿಸಿಲ್ಲ. ಅವರ ನಿರ್ಧಾರದ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕಿದೆ. ವಿಶನ್ ಅವರು ಜ್ಞಾನವಾಪಿ ಮಸೀದಿ, ಮಥುರಾದ ಈದ್ಗಾ ಮಸೀದಿ ಮತ್ತು ತಾಜ್ ಮಹಲ್‌ನಂತಹ ವಿವಿಧ ಉನ್ನತ ವಿಷಯಗಳಿಗೆ ಸಂಬಂಧಿಸಿದ ಕೋರ್ಟ್‌ನಲ್ಲಿ ಕೇಸ್‌ ಹಾಕಿದ್ದಾರೆ.

ಜ್ಞಾನವಾಪಿ ಕುರಿತಾದ ಎಲ್ಲಾ ಕೇಸ್‌ಗಳನ್ನು ಒಟ್ಟಾಗಿ ವಿಚಾರಣೆ ನಡೆಸಲು ವಾರಣಾಸಿ ಕೋರ್ಟ್‌ ನಿರ್ಧಾರ!

Follow Us:
Download App:
  • android
  • ios