ಸುಳ್ಳು ರೇಪ್ ಕೇಸ್ ಹಾಕಿ ಆತನನ್ನೇ ಮದ್ವೆಯಾದ ಯುವತಿಗೆ ದಂಡ ವಿಧಿಸಿದ ಹೈಕೋರ್ಟ್‌

ಯುವಕನೋರ್ವನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿ ನಂತರ ಆತನನ್ನೇ ಮದ್ವೆಯಾದ ಯುವತಿಗೆ ಅಲಾಹಾಬಾದ್ ಹೈಕೋರ್ಟ್ 10 ಸಾವಿರ ರೂಪಾಯಿ ದಂಡ ವಿಧಿಸಿದೆ.

Allahabad High Court fined the young woman who drugged him by filing a false rape case akb

ಅಲಹಾಬಾದ್‌: ಯುವಕನೋರ್ವನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಿ ನಂತರ ಆತನನ್ನೇ ಮದ್ವೆಯಾದ ಯುವತಿಗೆ ಅಲಾಹಾಬಾದ್ ಹೈಕೋರ್ಟ್ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಇತ್ತೀಚೆಗೆ ಪುರುಷರ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೋರ್ಟ್ ಇದೇ ವೇಳೆ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಇಂತಹ ಸುಳ್ಳು ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಹೇಳಿದೆ. 

ಮಹಿಳೆಯೊಬ್ಬರು ದಾಖಲಿಸಿದ ಎಫ್‌ಐಆರ್ ಸುಳ್ಳು (False FIR)  ಹಾಗೂ ಅತ್ಯಾಚಾರ ಆರೋಪಿ ಹಾಗೂ ಸಂತ್ರಸ್ತೆ ಇಬ್ಬರು ಪರಸ್ಪರ ಮದ್ವೆಯಾಗಿ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ ಎಂಬುದನ್ನು ಗಮನಿಸಿದ ಕೋರ್ಟ್ ವ್ಯಕ್ತಿ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು (Rape case) ರದ್ದುಗೊಳಿಸಿತ್ತು. ಈ ವೇಳೆ ನ್ಯಾಯಾಧೀಶರು ಈ ಹೇಳಿಕೆ ನೀಡಿದ್ದು, ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವ ಮಹಿಳೆಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಮಹಿಳೆಗೆ 10 ಸಾವಿರ ರೂ ದಂಡ ವಿಧಿಸಿದೆ. 

ಸೌಜನ್ಯ ಕೇಸ್‌ ನಾನೇ ಲಾಯರ್‌ ಆಗಿ ಸ್ಟಡಿ ಮಾಡ್ತೀನಿ, ಮೇಲ್ಮನವಿಗೆ ಅವಕಾಶವಿದೆಯೇ ನೋಡ್ತೀನೆಂದ ಸಿಎಂ ಸಿದ್ದರಾಮಯ್ಯ

ಸುಳ್ಳು ಕೇಸು ದಾಖಲಿಸಿದ್ದೇನೆ ಎಂದು ಅವರೇ ಸ್ಪಷ್ಟವಾಗಿ ಒಪ್ಪಿಕೊಂಡಿದ್ದರಿಂದ, ಅವರು ಕೋರ್ಟ್‌ ವೆಚ್ಚಕ್ಕೆ ತಗುಲಿದ ಭಾರೀ ಮೊತ್ತವನ್ನು ಬರಿಸಬೇಕಾಗುತ್ತದೆ ಎಂದು ಜುಲೈ 27 ರಂದು ನೀಡಿದ ಆದೇಶದಲ್ಲಿ ಕೋರ್ಟ್ ಹೇಳಿದೆ. ಈ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವ ವೇಳೆ ಅಲಹಾಬಾದ್ (Allahabad High court)ದ್ವಿಸದಸ್ಯ ಪೀಠದ ನ್ಯಾಯಾಮೂರ್ತಿಗಳಾದ ಅಂಜನಿ ಕುಮಾರ್ ಮಿಶ್ರಾ ಹಾಗೂ ಜಸ್ಟೀಸ್ ವಿವೇಕ್ ಕುಮಾರ್ ಸಿಂಗ್ 'ನ್ಯಾಯಾಂಗ ವ್ಯವಸ್ಥೆಯನ್ನು ನಿಮ್ಮ ವೈಯಕ್ತಿಕ ಸಮಸ್ಯೆ ಪರಿಹಾರದ ಅಸ್ತ್ರವನ್ನಾಗಿ ಮಾಡಬಾರದು' ಎಂದು ಹೇಳಿದ್ದಾರೆ. 

ಇಂತಹ ಪ್ರಥಮ ಮಾಹಿತಿ ವರದಿಗಳನ್ನು ದಾಖಲಿಸುವ ಮತ್ತು ಅತ್ಯಾಚಾರದ ಗಂಭೀರ ಆರೋಪಗಳನ್ನು ಸುಳ್ಳು ಮಾಡುವ ಇಂತಹ ಅಭ್ಯಾಸಗಳನ್ನು ಸಹಿಸಲಾಗದು. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯವೂ ಕಠಿಣವಾಗಿ ವ್ಯವಹರಿಸಬೇಕು.  ಅಪರಾಧ ನ್ಯಾಯ ವ್ಯವಸ್ಥೆಯನ್ನು ವೈಯಕ್ತಿಕ ವಿವಾದಗಳನ್ನು ಸರಿಪಡಿಸುವ ಸಾಧನವಾಗಿ ಬಳಸಲು ಅನುಮತಿ ಇಲ್ಲ, ಇಲ್ಲಿ ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸಿರುವುದು ತಪ್ಪು ಎಂದು ಒಪ್ಪಿಕೊಳ್ಳಲಾಗಿದೆ ಎಂದು ನ್ಯಾಯಾಲಯ  ಹೇಳಿದೆ. 

ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 20 ವರ್ಷ ಜೈಲು ಶಿಕ್ಷೆ ನೀಡಿದ ನ್ಯಾಯಾಲಯ

ಶಿವಕುಮಾರ್ ಪಾಲ್ (Shivakumar Pal) ಎಂಬಾತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಅತ್ಯಾಚಾರ), ಸೆಕ್ಷನ್ 406 (ನಂಬಿಕೆಗೆ ದ್ರೋಹ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ರಡಿ ಪ್ರಕರಣ ದಾಖಲಿಸಲಾಗಿತ್ತು.  ಈ ಪ್ರಕರಣವೂ ಸುಳ್ಳಿನಿಂದ ಕೂಡಿದೆ ಎಂದು ಆರೋಪಿ ವಾದಿಸಿದ್ದರು. ಅಲ್ಲದೇ ಆರೋಪಿ ಹಾಗೂ ದೂರುದಾರರು ಇಬ್ಬರು ವಯಸ್ಕರಾಗಿರುವುದರಿಂದ ನಂತರ ಸ್ವಂತ ಇಚ್ಛೆಯಿಂದ  ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾರೆ.  ತಾವು ಜೊತೆಯಾಗಿ ಬದುಕುತ್ತಿರುವುದರಿಂದ ಕೇಸ್ ಕೊನೆಗೊಳಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. 

Latest Videos
Follow Us:
Download App:
  • android
  • ios