ಸೌಜನ್ಯ ಕೇಸ್‌ ನಾನೇ ಲಾಯರ್‌ ಆಗಿ ಸ್ಟಡಿ ಮಾಡ್ತೀನಿ, ಮೇಲ್ಮನವಿಗೆ ಅವಕಾಶವಿದೆಯೇ ನೋಡ್ತೀನೆಂದ ಸಿಎಂ ಸಿದ್ದರಾಮಯ್ಯ

ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್‌ ಜಡ್ಜ್‌ಮೆಂಟ್‌ ಕಾಪಿ ಓದಿ ಅಪೀಲ್‌ಗೆ ಹೋಗಲು ಅವಕಾಶವಿದೆಯೇ ನೋಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

CM Siddaramaiah said  I will study Dharmasthala soujanya rape and murder case to appeal sat

ಮಂಗಳೂರು (ಆ.01): ಕಳೆದೊಂದು ದಶಕದ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್‌ನಿಂದ ಜಡ್ಜ್‌ಮೆಂಟ್‌ ಬಂದಿದೆ. ಈ ಬಗ್ಗೆ ನಾನು ಲಾಯರ್‌ ಆಗಿ ಹೇಳೋದಾದರೆ ಹೈಕೋರ್ಟ್‌ಗೆ ಅಪೀಲ್‌ ಹೋಗಬೇಕು. ಸಿಬಿಐ ಕೋರ್ಟ್‌ ಜಡ್ಜ್‌ಮೆಂಟ್‌ ಕಾಪಿಯನ್ನು ಓದಿ ಅಪೀಲ್‌ಗೆ ಹೋಗಲು ಅವಕಾಶವಿದೆಯೇ ಎಂಬುದನ್ನು ನೋಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ಉ ಕೊಲೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕೊಟ್ಟಿತ್ತು. ಆದರೆ, ಸೌಜನ್ಯಾಳ ಪೋಷಕರು ‌ಮರು ತನಿಖೆ ಮಾಡುವಂತೆ ಸರ್ಕಾರಕ್ಕೆ ಬಮದು ಮನವಿ ಮಾಡಿದ್ದಾರೆ. ಆದರೆ, ಕಾನೂನು ಪ್ರಕಾರ ಏನಾಗಬೇಕು ಅಂತ ನೋಡಿ ಮುಂದಿನ ನಿರ್ಧಾರವನ್ನು ಮಾಡುತ್ತೇವೆ. ನಾನು ಲಾಯರ್ ಆಗಿ ಹೇಳೋದಾದರೆ ಇದರ ಬಗ್ಗೆ ಹೈಕೋರ್ಟ್‌ಗೆ ಅಪೀಲ್ ಹೋಗಬೇಕಾಗುತ್ತದೆ ಎಂದು ತಿಳಿಸಿದರು.

ಧರ್ಮಸ್ಥಳ ಸೌಜನ್ಯ ಪ್ರಕರಣ ಮರು ತನಿಖೆಗೆ ಶಾಸಕ ಪೂಂಜಾ ಮನವಿ, ಸಿಎಂ ಸಿದ್ದರಾಮಯ್ಯಗೆ ಪತ್ರ!

ಜಡ್ಜ್‌ಮೆಂಟ್‌ ಕಾಪಿ ಅಭ್ಯಾಸ ಮಾಡಿ ಅಪೀಲ್‌ಗೆ ಚಿಂತನೆ: ಇನ್ನು ಸೌಜನ್ಯ ಕೇಸ್‌ ಬಗ್ಗೆ ನಾನು ಈವರೆಗೂ ಸಿಬಿಐ ಕೋರ್ಟ್‌ ಜಡ್ಜ್‌ಮೆಂಟ್‌ ಕಾಪಿಯನ್ನು ನೋಡಿಲ್ಲ. ಸೌಜನ್ಯಾಳ ಪೋಷಕರು ಕೋರ್ಟ್‌ನ ಆದೇಶ ಪ್ರತಿಯನ್ನು ತಂದು ಕೊಟ್ಟಿದ್ದಾರೆ. ಈಗ ನಾನು ಒಬ್ಬ ಲಾಯರ್‌ ಆಗಿ ಜಡ್ಜ್‌ಮೆಂಟ್‌ ಕಾಪಿಯನ್ನು ಓದಿ ಓಡುತ್ತೇನೆ. ಹೈಕೋರ್ಟ್‌ಗೆ ಮೇಲ್ಮನವಿಗೆ ಹೋಗಲು ಅವಕಾಶ ಇದೆಯೇ ಎಂಬುದನ್ನು ನೋಡುತ್ತೇನೆ ಎಂದು ಹೇಳಿದರು. ಈ ಮೂಲಕ ಸೌಜನ್ಯ ಕೇಸ್‌ ಬಗ್ಗೆ ಮರು ತನಿಖೆ ಮಾಡುವುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳಿವು ನೀಡಿದ್ದಾರೆ.

ಮರುತನಿಖೆಗೆ ಕೊಡೊಲ್ಲವೆಂದ ಪರಮೇಶ್ವರ್: ಬೆಂಗಳೂರಿನಲ್ಲಿ ಸೌಜನ್ಯ ಹತ್ಯೆ ಕೇಸ್‌ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಸೌಜನ್ಯ ಕೊಲೆ ಕೇಸ್ ಮರು ತನಿಖೆ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಸದ್ಯಕ್ಕೆ ಅಂತಹ ಯೋಚನೆ ನಮ್ಮ ಮುಂದೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೂ ನನಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಸೌಜನ್ಯ ಕೊಲೆ ಕೇಸ್ ಮರು ತನಿಖೆ ಇಲ್ಲ ಎನ್ನುವ ರೀತಿಯಲ್ಲಿ ಗೃಹ ಸಚಿವರು ಮಾತನಾಡಿದ್ದಾರೆ.

ಸೌಜನ್ಯ ಕೇಸ್‌ಗೆ ನ್ಯಾಉಯ ಸಿಗೋವರೆಗೂ ಧರ್ಮಸ್ಥಳಕ್ಎ ಹೋಗಲ್ಲ: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ "ಪ್ರತಿ ವರ್ಷ ಧರ್ಮಸ್ಥಳದ  ದರ್ಶನ ಪಡೆಯುವುದು ವಾಡಿಕೆಯಾಗಿತ್ತು, ಆದರೆ ಸೌಜನ್ಯಳ ಪ್ರಕರಣದ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ. ಸತ್ಯ ಎಂಬುದು ಸೂರ್ಯನ ಬೆಳಕಿದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು-ಬುದ್ಧ" ಎಂದು ಟ್ವೀಟ್‌ ಮಾಡಿಕೊಂಡಿದ್ದಾರೆ.

ಧರ್ಮಸ್ಥಳ ಸೌಜನ್ಯ ಪ್ರಕರಣ ತೀರ್ಪಿನ ಬಳಿಕ ಕೊನೆಗೂ ಮೌನ ಮುರಿದ ವೀರೇಂದ್ರ ಹೆಗ್ಗಡೆ!

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಶಾಸಕ ಪೂಂಜಾ ಮನವಿ: ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದ 11 ವರ್ಷಗಳು ಉರುಳಿಸಿದೆ. ಆದರೆ ತಪ್ಪಿತಸ್ಥರು ಇದುವರೆಗೂ ಸಿಕ್ಕಿಲ್ಲ. ಅಮಾಯಕ ಹೆಣ್ಣುಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಸೌಜನ್ಯ ಕುಟುಂಬಸ್ಥರು, ಸಂಘಟನೆಗಳು ಹೋರಾಟ ಮಾಡುತ್ತಲೇ ಇದೆ. ಇತ್ತೀಚೆಗೆ ಸಿಬಿಐ ಕೋರ್ಟ್ ತೀರ್ಪಿನ ಬಳಿಕ ಮತ್ತೆ ಸೌಜನ್ಯ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಈ ಬೆಳವಣಿಗೆ ಹಿನ್ನಲೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸೌಜನ್ಯ ಪ್ರಕರಣನ್ನು ಮರು ತನಿಖೆ ನಡೆಸಿ ಅಪರಾಧಿಗಳನ್ನು ಕಾನೂನು ಚೌಕಟ್ಟಿನೊಳಗೆ ಶಿಕ್ಷಿ ವಿಧಿಸಲು ಆಗ್ರಹಿಸಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

Latest Videos
Follow Us:
Download App:
  • android
  • ios