ಆಧಾರ್ ಬಳಸಿ UPI ಸಕ್ರಿಯಗೊಳಿಸಲು ಅವಕಾಶ;ಬಳಕೆದಾರರಿಗೆ ಹೊಸ ಸೌಲಭ್ಯ ಕಲ್ಪಿಸಿದ ಗೂಗಲ್ ಪೇ

ಗೂಗಲ್ ಪೇ ಯುಪಿಐ ಸಕ್ರಿಯಗೊಳಿಸಲು ಆಧಾರ್ ಆಧಾರಿತ ದೃಢೀಕರಣಕ್ಕೆ ಅವಕಾಶ ನೀಡಿದೆ. ಹೀಗಾಗಿ ಬಳಕೆದಾರರು ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ ಗೆ (ಯುಪಿಐ) ನೋಂದಣಿಯಾಗಲು ಆಧಾರ್ ಕ್ರೆಡೆನ್ಷಿಯಲ್ಸ್  ಬಳಸಬಹುದುದಾಗಿದೆ. ಈ ಮೂಲಕ ಡೆಬಿಟ್ ಕಾರ್ಡ್ ಅಗತ್ಯವಿಲ್ಲದೆ ಯುಪಿಐ ನೋಂದಣಿ ಸಾಧ್ಯವಾಗಿದೆ.

Google Pay users can now use Aadhaar for UPI activation here is how anu

Business Desk: ಇಂದು ಯುಪಿಐ ಪಾವತಿ ಸಾಕಷ್ಟು ಜನಪ್ರಿಯತೆ ಗಳಿಸಿದೆ. ದಿನನಿತ್ಯದ ವಹಿವಾಟುಗಳಿಗೆ ಯುಪಿಐ ಬಳಕೆ ಮಾಡುತ್ತೇವೆ. ಹೀಗಿರುವಾಗ ಇತ್ತೀಚೆಗೆ ಗೂಗಲ್ ಪೇ ಯುಪಿಐ ಸಕ್ರಿಯಗೊಳಿಸಲು ಆಧಾರ್ ಆಧಾರಿತ ದೃಢೀಕರಣಕ್ಕೆ ಅವಕಾಶ ನೀಡಿದೆ. ಹೀಗಾಗಿ ಬಳಕೆದಾರರು ಯುನಿಫೈಡ್ ಪೇಮೆಂಟ್ಸ್ ಇಂಟರ್ ಫೇಸ್ ಗೆ (ಯುಪಿಐ) ನೋಂದಣಿಯಾಗಲು ಆಧಾರ್ ಕ್ರೆಡೆನ್ಷಿಯಲ್ಸ್  ಬಳಸಬಹುದುದಾಗಿದೆ. ಈ ಮೂಲಕ ಡೆಬಿಟ್ ಕಾರ್ಡ್ ಅಗತ್ಯವಿಲ್ಲದೆ ಯುಪಿಐ ನೋಂದಣಿ ಸಾಧ್ಯವಾಗಿದೆ. ದೊಡ್ಡ ಪ್ರಮಾಣದ ಬಳಕೆದಾರರಿಗೆ ಯುಪಿಐ ಐಡಿಗಳು ಸಿಗುವಂತೆ ಮಾಡಲು ಹಾಗೂ ಡಿಜಿಟಲ್ ಪಾವತಿಗಳನ್ನು ಸುಲಭವಾಗಿಸುವ ಗುರಿ ಸಾಕಾರಕ್ಕೆ ಆಧಾರ್ ಆಧಾರಿತ ಯುಪಿಐ ನೋಂದಣಿಗೆ ಅವಕಾಶ ನೀಡಲಾಗಿದೆ. ಸದ್ಯ ಈ ವ್ಯವಸ್ಥೆ ಬೆಂಬಲಿತ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರೋರಿಗೆ ಮಾತ್ರ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬ್ಯಾಂಕ್ ಗಳು ಈ ವ್ಯವಸ್ಥೆಗೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಅನ್ವಯ ಶೇ.99.9ಕ್ಕಿಂತಲೂ ಹೆಚ್ಚಿನ ಭಾರತದ ವಯಸ್ಕ ಜನಸಂಖ್ಯೆ ಆಧಾರ್ ಸಂಖ್ಯೆ ಹೊಂದಿದ್ದು, ತಿಂಗಳಲ್ಲಿ ಒಂದು ಬಾರಿಯಾದರೂ ಇದನ್ನು ಬಳಕೆ ಮಾಡುತ್ತಾರೆ. 

ಯುಪಿಐ ಸಕ್ರಿಯಗೊಳಿಸಲು ಆಧಾರ್ ಬಳಕೆ ಹೇಗೆ?
ಆಧಾರ್ ಮೂಲಕ ಯುಪಿಐ ಸಕ್ರಿಯಗೊಳಿಸಲು ಬಳಕೆದಾರರು ಯುಐಡಿಎಐಯಲ್ಲಿ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯೇ ಬ್ಯಾಂಕ್ ದಾಖಲೆಗಳಲ್ಲಿ ಕೂಡ ನಮೂದಾಗಿರೋದನ್ನು ಖಚಿತಪಡಿಸಿಕೊಳ್ಳಬೇಕು. ಹಾಗೆಯೇ ಆಧಾರ್ ಅವರ ಬ್ಯಾಂಕ್ ಖಾತೆಗೆ ಲಿಂಕ್ ಆಗಿರೋದು ಕೂಡ ಅಗತ್ಯ. ಈ ಎಲ್ಲವೂ ಆಗಿದ್ದರೆ, ಗೂಗಲ್ ಪೇನಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಯುಪಿಐ ಸಕ್ರಿಯಗೊಳಿಸಬಹುದು.
ಹಂತ 1: ಮೊದಲಿಗೆ ಗೂಗಲ್ ಪೇ ತೆರೆಯಿರಿ ಹಾಗೂ ಯುಪಿಐ ಆನ್ ಬೋರ್ಡಿಂಗ್ ಆಯ್ಕೆ ಮಾಡಿ.
ಹಂತ 2: ಆಧಾರ್ ಅನ್ನು ಆಯ್ದ ವಿಧಾನವಾಗಿ ಆಯ್ಕೆ ಮಾಡಿ ಹಾಗೂ ಈ ಪ್ರಕ್ರಿಯೆ ಪ್ರಾರಂಭಿಸಲು ಆಧಾರ್ ಪ್ರಾರಂಭಿಕ ಆರು ಸಂಖ್ಯೆಗಳನ್ನು ನಮೂದಿಸಿ.
ಹಂತ 3: ಆ ಬಳಿಕ ಯುಐಡಿಎಐ ಹಾಗೂ ಖಾತೆ ಹೊಂದಿರುವ ಬ್ಯಾಂಕ್ ನಿಂದ ಬಂದಿರುವ ಒಟಿಪಿ ನಮೂದಿಸಿ ದೃಢೀಕರಿಸಿ.
ಹಂತ 4: ಆ ಬಳಿಕ ಬಳಕೆದಾರರ ಬ್ಯಾಂಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಯುಪಿಐ ಪಿನ್ ನಮೂದಿಸಲು ಅವರಿಗೆ ಅವಕಾಶ ನೀಡುತ್ತದೆ. 

ಈ ಬ್ಯಾಂಕ್ ಎಟಿಎಂನಲ್ಲಿ ನಗದು ವಿತ್ ಡ್ರಾ ಮಾಡಲು ಡೆಬಿಟ್ ಕಾರ್ಡ್ ಬೇಕಿಲ್ಲ, ಮೊಬೈಲ್ ನಲ್ಲಿ ಯುಪಿಐ ಇದ್ರೆ ಸಾಕು!

ಒಮ್ಮೆಗೆ ಯುಪಿಐ ಸಕ್ರಿಯಗೊಳಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಳಕೆದಾರರು ವಹಿವಾಟುಗಳನ್ನು ನಡೆಸಬಹುದು ಹಾಗೂ ಗೂಗಲ್ ಪೇ ಅಪ್ಲಿಕೇಷನ್ ಮೂಲಕ ತಮ್ಮ ಬ್ಯಾಲೆನ್ಸ್ ಚೆಕ್ ಮಾಡಬಹುದು. ಆದರೆ, ಒಂದು ವಿಷಯವನ್ಉ ಬಳಕೆದಾರರು ನೆನಪಿಟ್ಟುಕೊಳ್ಳಬೇಕು. ಅದೇನೆಂದರೆ ಬಳಕೆದಾರರು ತಮ್ಮ ಆಧಾರ್ ಸಂಖ್ಯೆಯ ಮೊದಲ ಆರು ಅಂಕೆಗಳನ್ನು ನಮೂದಿಸಿದ ತಕ್ಷಣ ಭಾರತದ ರಾಷ್ಟ್ರೀಯ ಪಾವತಿಗಳ ನಿಗಮ (NPCI) ದೃಢೀಕರಣಕ್ಕೆ ಯುಐಡಿಎಐಗೆ ಸುರಕ್ಷಿತವಾಗಿ ಈ ಮಾಹಿತಿಯನ್ನು ರವಾನಿಸುತ್ತದೆ. ಆಧಾರ್ ಸಂಖ್ಯೆಯನ್ನು ಉಳಿಸಿಕೊಳ್ಳುವುದು ಅಥವಾ ಸಂಗ್ರಹಿಸುವ ಕೆಲಸವನ್ನು ಮಾಡುವುದಿಲ್ಲ ಎಂದು ಗೂಗಲ್ ಪೇ ಸ್ಪಷ್ಟಪಡಿಸಿದೆ.

GPay, PhonePe, Paytm ಬಳಸಿ ಯುಪಿಐ ಪಾವತಿ ಮಾಡುತ್ತೀರಾ? ಹಾಗಾದ್ರೆ ಈ 5 ಸುರಕ್ಷಿತ ಟಿಪ್ಸ್ ಅನುಸರಿಸಿ

ಆಧಾರ್ ಉಚಿತ ಅಪ್ಡೇಟ್ ಗೆ ಜೂ.14ರ ಗಡುವು
ಹತ್ತು ವರ್ಷಗಳಿಗಿಂತ ಹಳೆಯದಾದ ಆಧಾರ್ ಕಾರ್ಡ್ ಅಪ್ಡೇಟ್ ಮಾಡೋದು ಕಡ್ಡಾಯ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ. ಅಲ್ಲದೆ, ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಲು ಯಾವುದೇ ಶುಲ್ಕವಿಲ್ಲದೆ ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ನಲ್ಲಿ ಮಾಹಿತಿಗಳನ್ನು ಅಪ್ಡೇಟ್ ಮಾಡಲು ಯುಐಡಿಎಐ ಅವಕಾಶ ಕಲ್ಪಿಸಿದೆ. ಮೈ ಆಧಾರ್ ಪೋರ್ಟಲ್ ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದು. ಆದರೆ, ಈ ಅವಕಾಶ 2023ರ ಮಾರ್ಚ್ 15ರಿಂದ 2023 ಜೂನ್ 14ರ ತನಕ ಮಾತ್ರ ಲಭ್ಯವಿರಲಿದೆ. ಅಂದ ಹಾಗೇ ಈ ಸೌಲಭ್ಯ ಮೈ ಆಧಾರ್ ಪೋರ್ಟಲ್ ನಲ್ಲಿ ಮಾತ್ರ ಲಭ್ಯವಿದೆ. 


 

Latest Videos
Follow Us:
Download App:
  • android
  • ios