'ಮುಸ್ಲಿಮರು ಹೊಸ ವರ್ಷ ಆಚರಿಸುವುದು ಇಸ್ಲಾಂಗೆ ವಿರುದ್ಧ..': ಫತ್ವಾ ಹೊರಡಿಸಿದ‌ ಅಖಿಲ ಭಾರತ ಮುಸ್ಲಿಂ ಜಮಾತ್!

ಮುಸ್ಲಿಮರು ಹೊಸ ವರ್ಷಾಚರಣೆ ಮಾಡುವುದು ಷರಿಯತ್ ವಿರುದ್ಧ ಎಂದು ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಫತ್ವಾ ಹೊರಡಿಸಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳದಂತೆ ಮುಸ್ಲಿಂ ಯುವಕರು ಮತ್ತು ಯುವತಿಯರನ್ನು ಒತ್ತಾಯಿಸಿದ್ದಾರೆ.

All India Muslim Jamaat issues fatwa discouraging New Year celebrations rav

Fatwa On New Year Celebration: 2025 ಸೆಲೆಬ್ರೆಷನ್‌ಗೆ ಇನ್ನೆರಡು ದಿನಗಳಷ್ಟೇ ಉಳಿದಿವೆ. ಹೊಸ ವರ್ಷ ಆಚರಣೆಗೆ ಬೆಂಗಳೂರು ಸೇರಿ ದೇಶಾದ್ಯಂತ ಜನರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆಯೇ ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಮುಸ್ಲಿಮರು ಹೊಸ ವರ್ಷಾಚರಣೆ ಮಾಡದಂತೆ ಫತ್ವಾ ಹೊರಡಿಸಿ, ಶಾಕ್ ನೀಡಿದ್ದಾರೆ.

ಹೌದು ಭಾನುವಾರ (ಡಿ.29,2024)ರಂದು ಹೀಗೊಂದು ಫತ್ವಾ ಹೊರಡಿಸಿದ್ದಾರೆ. ರಜ್ವಿ ಪ್ರಕಾರ, ಚಶ್ಮೆ ದರ್ಫ್ತಾ ಬರೇಲಿ(Chashme Darfta Bareilly)ಯವರು ಫತ್ವಾ ಹೊರಡಿಸಿದ್ದು, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳದಂತೆ ಮುಸ್ಲಿಂ ಯುವಕರು ಮತ್ತು ಯುವತಿಯರನ್ನು ಒತ್ತಾಯಿಸಿದ್ದಾರೆ.

ಹೊಸ ವರ್ಷದ ಪಾರ್ಟಿಗೆ ಬಂದವರನ್ನು ಅಲ್ಲಿಯೇ ಉಳಿಸಿಕೊಳ್ಳಿ; ಹೋಟೆಲ್, ಲಾಡ್ಜ್ ಮಾಲೀಕರಿಗೆ ಪೊಲೀಸ್ ಸೂಚನೆ!

 ಮುಸ್ಲಿಮರು ಹೊಸ ವರ್ಷಾಚರಣೆ ಮಾಡುವುದು ನ್ಯಾಯಸಮ್ಮತವಲ್ಲ. ಆಚರಿಸುವುದು, ಇತರರಿಗೆ ಶುಭಾಶಯ ತಿಳಿಸುವುದು ಷರಿಯತ್ ವಿರುದ್ಧವಾಗಿದೆ. ಹೀಗಾಗಿ ಹೊಸ ವರ್ಷದ ಆಚರಣೆಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಬೇಕು. ಹೊಸ ವರ್ಷಾಚರಣೆ ಬದಲಿಗೆ ಮುಸ್ಲಿಮರು ತಮ್ಮ ನಂಬಿಕೆಗೆ ಹೊಂದಿಕೆಯಾಗುವ ಧಾರ್ಮಿಕ ಆಚರಣೆಗಳತ್ತ ಗಮನ ಹರಿಸಬೇಕು ಎಂದು ಒತ್ತಿ ಹೇಳಿದ್ದಾರೆ.

ಹೊಸ ವರ್ಷಾಚರಣೆ ಇಸ್ಲಾಂ ತತ್ವಗಳಿಗೆ ವಿರುದ್ಧ

ಹೊಸ ವರ್ಷ ಆಚರಿಸುವುದು ಮುಸ್ಲಿಮೇತರರ ಧಾರ್ಮಿಕ ಕರ್ತವ್ಯವಾಗಿದೆ ಮತ್ತು ಇತರರ ಧರ್ಮಗಳ ಹಬ್ಬವನ್ನು ಆಚರಿಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮುಸ್ಲಿಮೇತರರ ಹಬ್ಬಗಳನ್ನ ಆಚರಿಸುವುದು ಇಸ್ಲಾಂಗೆ ವಿರುದ್ಧವಾಗಿದೆ. ಹೀಗಾಗಿ ಹೊಸ ವರ್ಷಾಚರಣೆಯಲ್ಲಿ ವಿಶೇಷವಾಗಿ ಮುಸ್ಲಿಂ ಯುವಕರು, ಯುವತಿಯರು ಆಚರಿಸಬಾರದು. ಅಂಥವುಗಳನ್ನ ಇಸ್ಲಾಂ ತತ್ವಗಳಿಗೆ ವಿರುದ್ಧವೆಂದು ಪರಿಗಣಿಸಲಾಗಿದೆ ಎಂದಿದ್ದಾರೆ. ಇದೇ ವೇಳೆ ಲೇಖಕ ಸಲ್ಮಾನ್ ರಶ್ದಿ ಅವರ ವಿವಾದಾತ್ಮಕ ಪುಸ್ತಕ 'ದಿ ಸೈಟಾನಿಕ್ ವರ್ಸಸ್' ದೇಶದಲ್ಲಿ ನಿಷೇಧಕ್ಕೊಳಗಾದ ಮೂರು ದಶಕಗಳ ನಂತರ ಮಾರಾಟಕ್ಕೆ ಲಭ್ಯವಿದೆ ಎಂಬ ಸುದ್ದಿಗೆ ಬರೇಲ್ವಿ ವಿರೋಧ ವ್ಯಕ್ತಪಡಿಸಿದ್ದಾರೆ ಮತ್ತು "ನಿಷೇಧವನ್ನು ಮುಂದುವರಿಸಬೇಕು' ಎಂದಿದ್ದಾರೆ.
 

Latest Videos
Follow Us:
Download App:
  • android
  • ios