ಅಲಿಘಡ ಮುಸ್ಲಿಮ್ ಯುನಿವರ್ಸಿಟಿ ಅಲ್ಪಸಂಖ್ಯಾತರ ವಿಶ್ವವಿದ್ಯಾಲವಲ್ಲ; ಸುಪ್ರೀಂಗೆ ಕೇಂದ್ರ ಸ್ಪಷ್ಟನೆ!

ಭಾರತದ ಹಳೇ ವಿಶ್ವವಿದ್ಯಾಲಯಗಳ ಪೈಕಿ ಅಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯ ಕೂಡ ಒಂದಾಗಿದೆ. ಆದರೆ ಇದು ಅಲ್ಪಸಂಖ್ಯಾತರ ವಿಶ್ವವಿದ್ಯಾಲಯವಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ.
 

Aligarh Muslim University not a minority institution central govt tells to Supreme court ckm

ನವದೆಹಲಿ(ಜ.10)  ಆಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯ ಭಾರತದ ಪುರಾತನ ವಿಶ್ವವಿದ್ಯಾಲಯ. 1875ರಲ್ಲಿ ಆರಂಭಗೊಂಡ ಈ ವಿಶ್ವವಿದ್ಯಾಲಯ ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನರ್ಜನೆ ಮಾಡಿದೆ. ಇತ್ತೀಚೆಗೆ ಕೆಲ ವಿವಾದಕ್ಕೂ ಆಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯ ಗುರಿಯಾಗಿದೆ. ಇದೀಗ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಹತ್ವದ ಹೇಳಿಕೆ ನೀಡಿದೆ. ಅಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯ ಅಲ್ಪಸಂಖ್ಯಾತರ ವಿಶ್ವವಿದ್ಯಾಲಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.  ಅಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯ ರಾಷ್ಟ್ರೀಯ ವಿದ್ಯಾಲಯವಾಗಿದೆ. ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿದೆ ಈ ವಿಶ್ವವಿದ್ಯಾಲಯ ಯಾವತ್ತಿಗೂ ಅಲ್ಪಸಂಖ್ಯಾತರ ವಿಶ್ವವಿದ್ಯಾಲಯವಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮುಂದೆ ಸ್ಪಷ್ಟಪಡಿಸಿದೆ.

ಅಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಅನ್ನೋ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ವಿವರಣೆ ಪಡೆದಿದೆ. ಈ ವೇಳೆ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ಕೆಲ ದಾಖಲೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭಗೊಂಡ ಅಲಿಘಡ ಮುಸ್ಲಿಮ್ ಯೂನಿವರ್ಸಿಟಿ, ಅಲ್ಪಸಂಖ್ಯಾತರ ವಿಶ್ವವಿದ್ಯಾಲಯವಾಗಿ ನಡೆದುಕೊಂಡು ಬಂದಿಲ್ಲ.

ಸಿಎಂ ಯೋಗಿ ನಾಡಲ್ಲಿ ಮತ್ತೊಂದು ನಗರಕ್ಕೆ ಮರುನಾಮಕರಣ, ಅಲಿಘಡ ಇನ್ನು ಹರಿಘಡವಾಗಿ ಬದಲು!

ವಿಶ್ವವಿದ್ಯಾಲಯದ ಆರಂಭಿಕ ದಿನಗಳಲ್ಲಿ ಆಲಿಘಡ ವಿಶ್ವವಿದ್ಯಾಲಯ ಅಲ್ಪಸಂಖ್ಯಾತರಿಂದ ಆಡಳಿತ ನಡೆಸಲ್ಪಟ್ಟಿದೆಯೋ ಇಲ್ಲವೋ ಅನ್ನೋದು ವಾದವಲ್ಲ. ದೇದ ಸಂವಿಧಾನ, ಜ್ಯಾತ್ಯೀತ ಆಧಾರದಲ್ಲಿ ಶಿಕ್ಷಣ ನೀಡುತ್ತಿದೆ.  ರಾಷ್ಟ್ರೀಯ ಸ್ವರೂಪದ ಶಿಕ್ಷಣ ಸಂಸ್ಥೆಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಪ್ರಮೇಯವೇ ಇಲ್ಲ ಎಂದು ತುಷಾರ್ ಮೆಹ್ತ ಹೇಳಿದ್ದಾರೆ.  

ಅಲಿಘಡ ಮುಸ್ಲಿಮ್ ವಿಶ್ವವಿದ್ಯಾಲಯವೂ ಅಲ್ಪಸಂಖ್ಯಾತ ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇಷ್ಟೇ ಅಲ್ಲ ಇದರ ಆಡಳಿತ ಮಂಡಳಿಯನ್ನು ಅಲ್ಪಸಂಖ್ಯಾತ ಸಮುದಾಯ ನಿರ್ವಹಿಸುತ್ತಿಲ್ಲ ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ. ಹೀಗಾಗಿ ಯಾವುದೇ ಒಂದು ಧರ್ಮ, ಸಮುದಾಯಕ್ಕೆ ಸೇರಿದ ಶಿಕ್ಷಣ ಸಂಸ್ಥೆಯಲ್ಲ ಅನ್ನೋದನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ.

 

ಹಮಾಸ್ ಉಗ್ರ ದಾಳಿ ಬೆಂಬಲಿಸಿ ಯುಪಿ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಮೆರವಣಿಗೆ!

ಅಲಿಘಡನ ಮುಸ್ಲಿಮ್ ವಿಶ್ವವಿದ್ಯಾಲಯ ಇತ್ತೀಚನ ವರ್ಷಗಳಲ್ಲಿ ಹಲವು ವಿವಾದಕ್ಕೆ ಗುರಿಯಾಗಿದೆ. ಐಸಿಸ್ ಉಗ್ರರ ಜೊತೆಗೆ ಸಂಪರ್ಕದ ಕಾರಣ ಶಂಕಿತ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದರು. ಇನ್ನು ಇಸ್ರೇಲ್ ಮೇಲಿನ ಹಮಾಸ್ ಉಗ್ರ ದಾಳಿ ಸಮರ್ಥಿಸಿ ಹಾಗೂ ಇಸ್ರೇಲ್ ಪ್ರತಿದಾಳಿ ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ವಿವಾದಕ್ಕೆ ಗುರಿಯಾಗಿದ್ದರು. 

Latest Videos
Follow Us:
Download App:
  • android
  • ios