ಸಿಎಂ ಯೋಗಿ ನಾಡಲ್ಲಿ ಮತ್ತೊಂದು ನಗರಕ್ಕೆ ಮರುನಾಮಕರಣ, ಅಲಿಘಡ ಇನ್ನು ಹರಿಘಡವಾಗಿ ಬದಲು!
ಯೋಗಿ ಆದಿತ್ಯನಾಥ್ ನೇೃತ್ವದ ಉತ್ತರ ಪ್ರದೇಶ ಸರ್ಕಾರ ಈಗಾಗಲೇ ಹಲವು ನಗರ ಪಟ್ಟಣಗಳ ಹೆಸರು ಬದಲಾಯಿಸಿದೆ. ಇದೀಗ ಅಲಿಘಡ ಸರದಿ. ಇನ್ನುಂದೆ ಅಲಿಘಡ ಹರಿಗಢವಾಗಿ ಮರುನಾಮಕರಣಗೊಳ್ಳುತ್ತಿದೆ.

ಲಖನೌ(ನ.07) ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಈಗಾಗಲೇ ಕೆಲ ನಗರ ಪಟ್ಟಣಕ್ಕೆ ಮರುನಾಮಕರಣ ಮಾಡಿದೆ. ಇದು ವಿವಾದಕ್ಕೂ ಕಾರಣವಾಗಿತ್ತು. ಯೋಗಿ ಬಳಿಕ ಬಿಜೆಪಿ ಆಡಳಿತದ ಕೆಲ ರಾಜ್ಯಗಳು ಈ ಮಾರ್ಗ ಅನುಸರಿಸಿತ್ತು. ಇದೀಗ ಅಲಿಘಡ ನಗರದ ಹೆಸರನ್ನು ಹರಿಘಡವಾಗಿ ಮರುನಾಮಕರಣ ಮಾಡಲಾಗುತ್ತಿದೆ. ಅಲಿಘಡ ಮನ್ಸಿಪಲ್ ಕಾರ್ಪೋರೇಶನ್ ಮರುನಾಮಕರಣ ಪ್ರಸ್ತಾವನೆಯನ್ನು ಒಪ್ಪಿಕೊಂಡಿದೆ. ಇದೀಗ ಮರುನಾಮಕರಣ ಹೆಸರನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದು, ಶೀಘ್ರದಲ್ಲೇ ಅಲಿಘಡ ಅಧಿಕೃತವಾಗಿ ಹರಿಘಡವಾಗಿ ಮರುನಾಮಕರಣಗೊಳ್ಳಲಿದೆ.
ಅಲಿಘಡ(Aligharh) ಮುನ್ಸಿಪಲ್ ಕೌನ್ಸಿಲ್ ಸದಸ್ಯರು ಸರ್ವಾನುಮತದಿಂದ ಮರುನಾಮಕರಣ ಪ್ರಸ್ತಾವನೆಯನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ಬಹು ದಿನಗಳ ಬೇಡಿಕೆಯನ್ನು ನಾವು ಈಡೇರಿಸಲು ಪ್ರಯತ್ನ ಪಟ್ಟಿದ್ದೇವೆ. ಅಲಿಘಡವನ್ನು ಹರಿಘಡ ಮಾಡಲು ಹಲವು ಪ್ರಯತ್ನಗಳು, ಹೋರಾಟಗಳು ನಡೆದಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮರುನಾಮಕರಣ ಪ್ರಸ್ತಾವನೆಯನ್ನು ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಮಂಡಿಸಲಾಗಿತ್ತು. ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಇದೀಗ ಸರ್ಕಾರ ನಮ್ಮ ಪ್ರಸ್ತಾವನೆಗೆ ಅಂತಿಮ ಮುದ್ರೆ ಹಾಕಿ ಮರುನಾಮಕರಣ ಮಾಡುವ ವಿಶ್ವಾಸವಿದೆ ಎಂದು ಅಲಿಗಢ ಮುನ್ಸಿಪಲ್ ಕೌನ್ಸಿಲ್ ಮೇಯರ್ ಪ್ರಶಾಂತ್ ಸಿಂಘಾಲ್ ಹೇಳಿದ್ದಾರೆ.
ಹಮಾಸ್ ಉಗ್ರ ದಾಳಿ ಬೆಂಬಲಿಸಿ ಯುಪಿ ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಮೆರವಣಿಗೆ!
ಮೊಘಲರು, ಸುಲ್ತಾನರು, ಬ್ರಿಟಿಷರ ಕಾಲದಲ್ಲಿ ಭಾರತದ ಹಲವು ನಗರ, ಪಟ್ಟಣ, ಗ್ರಾಮ, ಜಿಲ್ಲೆಗಳ ಹೆಸರನ್ನು ಮರುನಾಮಕರಣಗೊಳಿಸಲಾಗಿತ್ತು. ಹಿಂದೂ ದೇವಾಲಯಗಳ ಹೆಸರಿನಲ್ಲಿದ್ದ ಹಲವು ನಗರ, ಪಟ್ಟಣಗಳನ್ನು ಹೆಸರುಗಳನ್ನು ಬದಲಿಸಿ ಹೊಸ ಹೆಸರು ಇಡಲಾಗಿತ್ತು. ಹೀಗೆ 1740ರಲ್ಲಿ ಮೊಘಲ್ ಕಮಾಂಡರ್ ಮಿರ್ಜಾ ನಜಾಫ್ ಆಲಿಘಡ ಎಂಬ ಹೆಸರು ಇಟ್ಟಿದ್ದರು. ಆದರೆ ಹಿಂದೂ ಪುರಾಣಗಲ್ಲಿ ಹರಿಘಡ ಅನ್ನೋ ಹೆಸರು ಉಲ್ಲೇಖವಾಗಿದೆ.
2021ರಲಲ್ಲಿ ಅಲಿಘಡ ಜಿಲ್ಲಾ ಪಂಚಾಯಿತ್ ಮರುನಾಕರಣ ನಿರ್ಣಯ ಪಾಸ್ ಮಾಡಿತ್ತು. 1970ರಿಂದಲೇ ಅಲಿಘಡ ಹೆಸರನ್ನು ಹಿಂದೂ ಪುರಾಣದಲ್ಲಿರುವಂತೆ ಹರಿಘಡ ಎಂದು ಮರುನಾಮಕರಣ ಮಾಡಲು ಹೋರಾಟಗಳು ನಡೆದಿತ್ತು. ಇದೀಗ ಪ್ರಸ್ತಾವನೆ ಅಂಗೀಕಾರಗೊಂಡು ಸರ್ಕಾರದ ಮಟ್ಟಕ್ಕೆ ಹೋಗಿದೆ.
ಮರುನಾಮಕರಣ ಚರ್ಚೆ ನಡುವೆ ಗೂಗಲ್ ಮ್ಯಾಪ್‌ನಲ್ಲಿ ತ್ರಿವರ್ಣ ಧ್ವಜ ಜೊತೆ ಭಾರತ ಹೆಸರು!
ಉತ್ತರ ಪ್ರದೇಶದಲ್ಲಿ ಈಗಾಗಲೇ ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಲಾಗಿದೆ. ಇನ್ನು ಮುಘಲ್ ಸರಾಯಿ ಪಟ್ಟಣವನ್ನು ಪಂಡಿತ್ ದೀನದಯಾಳ್ ಉಪಾಧ್ಯಾಯ ನಗರ ಎಂದು ಮರುನಾಮಕರಣ ಮಾಡಲಾಗಿದೆ. ಫೈಜಾಬಾದನ್ನು ಆಯೋಧ್ಯ ಎಂದು ಮರುನಾಮಕರಣ ಮಾಡಲಾಗಿದೆ. ಈ ಸಾಲಿಗೆ ಇದೀಗ ಅಲಿಘಡ ಕೂಡ ಸೇರಿಕೊಳ್ಳಲಿದೆ. ಅಲಿಘಡದಲ್ಲಿ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯ ಅತ್ಯಂತ ಜನಪ್ರಿಯವಾಗಿದೆ. ಈ ಹೆಸರು ಬಿಟ್ಟು ಇನ್ನೆಲ್ಲಾ ಅಲಿಘಡ ಹೆಸರು ಹರಿಘಡವಾಗಿ ಬದಾಲಾಗುವ ಸಾಧ್ಯತೆ ಇದೆ.