ರೈಲು ದುರಂತ ತಪ್ಪಿಸಿದ 12 ವರ್ಷದ ಬಾಲಕ, ಕೆಂಪು ಟಿಶರ್ಟ್ ಬಿಚ್ಚಿ ಹಳಿ ಮುರಿದಿರುವ ಬಗ್ಗೆ ಅಲರ್ಟ್ ನೀಡಿದ್ದ!
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ 12 ವರ್ಷದ ಬಾಲಕ ಶೌರ್ಯ ಮೆರೆದಿದ್ದಾರೆ. ರೈಲು ಹಳಿ ಮುರಿದಿದ್ದನ್ನು ಕಂಡ ಬಾಲಕ, ಬರುತ್ತಿರುವ ಟ್ರೇನ್‌ಗೆ ಅಲರ್ಟ್ ನೀಡುವ ಸಲುವಾಗಿ ತನ್ನ ಕೆಂಪು ಬಣಣದ ಟೀ ಶರ್ಟ್‌ಅನ್ನು ಬಿಚ್ಚಿ ಹಾರಿಸಿದ್ದಾನೆ.
ನವದೆಹಲಿ (ಸೆ.26): ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಸಂಭವಿಸಬಹುದಾಗಿದ್ದ ರೈಲು ದುರಂತವನ್ನು 12 ವರ್ಷದ ಬಾಲಕ ತನ್ನ ಚಾಣಾಕ್ಷತನದಿಂದ ತಪ್ಪಿಸಿದ್ದಾನೆ. ಕಳೆದ ಗುರುವಾರ ಪಶ್ಚಿಮ ಬಂಗಾಳದ ಮಾಲ್ಡಾದ ರೈಲ್ವೆ ಯಾರ್ಡ್ ಬಳಿ ಈ ಘಟನೆ ನಡೆದಿದೆ. ರೈಲು ಹಳಿಗಳ ಸಮೀಪ ಬರುತ್ತಿದ್ದ ವೇಳೆ ಬಾಲಕನಿಗೆ ಅಲ್ಲಿ ರೈಲು ಟ್ರ್ಯಾಕ್ ಮುರಿದಿದ್ದು ಕಾಣಿಸಿದೆ. ಈ ವೇಳೆ ಬರುತ್ತಿರುವ ರೈಲಿಗೆ ಅಲರ್ಟ್ ನೀಡಲು ಯಾವುದೇ ಮಾರ್ಗವಿಲ್ಲ. ಇದನ್ನು ತಿಳಿದ ಬಾಲಕ ತಾನು ಧರಿಸಿದ್ದ ಕೆಂಪು ಬಣ್ಣದ ಟೀಶರ್ಟ್‌ಅನ್ನು ತೆಗೆದು ಅದನ್ನೇ, ಧ್ವಜದ ರೀತಿ ಹಾರಿಸುವ ಮೂಲಕ ಲೋಕೋಪೈಲಟ್‌ಗೆ ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ ಸಂಭವನೀಯ ರೈಲು ಅಪಘಾತವನ್ನು ಪುಟ್ಟ ಬಾಲಕ ತಪ್ಪಿಸಿದ್ದಾರೆ. ಮುರ್ಸಲೀನ್ ಶೇಖ್ ಎಂಬ ಹುಡುಗ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕನ ಮಗ. ಘಟನೆ ವೇಳೆ ಮುಸಲೀನ್ ಕೆಲ ಕಾರ್ಮಿಕರೊಂದಿಗೆ ಹೊಲದಲ್ಲಿ ಇದ್ದ. ಈ ವೇಳೆ, ಯಾರ್ಡ್ ಬಳಿಯ ರೈಲ್ವೆ ಹಳಿಗಳ ಒಂದು ಭಾಗವು ಹಾನಿಗೊಳಗಾಗಿರುವುದನ್ನು ಈತ ಗಮನಿಸಿದ್ದ ಮತ್ತು ಪ್ಯಾಸೆಂಜರ್ ರೈಲು ಅದರ ಕಡೆಗೆ ವೇಗವಾಗಿ ಬರುತ್ತಿರುವುದನ್ನು ನೋಡಿದ್ದ. ತಕ್ಷಣ ಆ ಹುಡುಗ ತನ್ನ ಕೆಂಪು ಟೀ ಶರ್ಟ್ ತೆಗೆದು ಮುಂದೆ ಬರುತ್ತಿದ್ದ ರೈಲಿಗೆ ಕೈ ಬೀಸತೊಡಗಿದ. ರೈಲಿನ ಲೊಕೊಮೊಟಿವ್ ಪೈಲಟ್ ಸಿಗ್ನಲ್ ಗುರುತಿಸಿ ತುರ್ತು ಬ್ರೇಕ್ ಹಾಕಿದ್ದರಿಂದ ಅಪಘಾತ ತಪ್ಪಿಸಿದರು.
ಘಟನೆಯ ಕುರಿತು ಮಾತನಾಡಿದ ಈಶಾನ್ಯ ಗಡಿ ರೈಲ್ವೆಯ ವಕ್ತಾರ ಸಬ್ಯಸಾಚಿ ಡಿ, "ಮಾಲ್ಡಾದಲ್ಲಿ 12 ವರ್ಷದ ಮಗು ತನ್ನ ಕೆಂಪು ಶರ್ಟ್ ಅನ್ನು ರೈಲಿಗೆ ಬೀಸಿತು, ಇದರಿಂದಾಗಿ ಲೊಕೊ-ಪೈಲಟ್ ತುರ್ತು ಬ್ರೇಕ್ ಹಾಕಿ ಪ್ರಯಾಣಿಕ ರೈಲನ್ನು ನಿಲ್ಲಿಸಿದರು. ಭಾರಿ ಮಳೆಯಿಂದಾಗಿ ರೈಲಿನ ಹಿಗಳು ಹಾಳಾಗಿತ್ತು. ಇದನ್ನು ಗಮನಿಸಿದ ಮಗು ಈ ರೀತಿ ಮಾಡಿದೆ' ಎಂದು ತಿಳಿಸಿದ್ದಾರೆ. ಹಳಿಗಳ ಕೆಳಗೆ ಮಳೆಯಿಂದ ಹಾನಿಗೊಳಗಾದ ಭಾಗವನ್ನು ನೋಡಿದ ಹುಡುಗ ಸರಿಯಾದ ಸಮಯದಲ್ಲಿ ಚಾಣಾಕ್ಷತನ ಪ್ರದರ್ಶನ ಮಾಡಿದ್ದಾನೆ ಎಂದು ಅಧಿಕಾರಿಯು ಮಗುವನ್ನು ಶ್ಲಾಘಿಸಿದರು.
ಒಡಿಶಾ ರೈಲು ದುರಂತ: 3 ರೈಲ್ವೆ ಸಿಬ್ಬಂದಿ ವಿರುದ್ಧ ಸಿಬಿಐ ಚಾರ್ಜ್‌ಶೀಟ್; ಕೊಲೆ ಕೇಸ್ ದಾಖಲು
ರೈಲ್ವೆ ಅಧಿಕಾರಿಗಳು ಬಾಲಕನಿಗೆ ಶೌರ್ಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿದರು ಮತ್ತು ನಗದು ಬಹುಮಾನವನ್ನು ಸಹ ನೀಡಿದರು. ಸ್ಥಳೀಯ ಸಂಸದರು ಮತ್ತು ವಿಭಾಗೀಯ ರೈಲು ವ್ಯವಸ್ಥಾಪಕರು ಬಾಲಕನ ಮನೆಗೆ ಭೇಟಿ ನೀಡಿ ಅಭಿನಂದಿಸಿದರು. ಈ ನಡುವೆ ಹಳಿಗಳ ಹಾನಿಗೊಳಗಾದ ಭಾಗವನ್ನು ಸರಿಪಡಿಸಿ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾ ರೈಲು ದುರಂತದ ಕಣ್ಣೀರ ಕತೆ, ಇನ್ನೂ ಪತ್ತೆಯಾಗಿಲ್ಲ 29 ಮೃತದೇಹದ ಗುರುತು!