ಜೋಧಾ ಹಾಗೂ ಅಕ್ಬರ್ ಪ್ರೇಮಕಥೆ ಪ್ರಸಿದ್ಧಿ ಪಡೆದಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಬಹುತೇಕ ಈ ಕಥೆ ಗೊತ್ತು. ಆದ್ರೆ ಇಷ್ಟು ದಿನ ನಾವಂದುಕೊಂಡಿದ್ದ ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಅಮೇರ್ ರಾಜಕುಮಾರಿ ಜೋಧಾ (Jodha) ಮತ್ತು ಮೊಘಲ್ ಚಕ್ರವರ್ತಿ ಅಕ್ಬರ್ (Mughal Emperor Akbar) ಇಬ್ಬರ ಪ್ರೇಮಕಥೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇತಿಹಾಸ ಪುಟದಲ್ಲಿ ಇವರ ಪ್ರೇಮ ಕಥೆಯನ್ನು ನಾವು ಓದ್ಬಹುದು. ಇವರಿಬ್ಬರ ಪ್ರೇಮ ಕಥೆ ಪುಸ್ತಕ ರೂಪದಲ್ಲಿ ಹೊರಗೆ ಬಂದಿದೆ. ಸಿನಿಮಾ ನಿರ್ಮಾಣವಾಗಿದೆ. ಸೀರಿಯಲ್ ಆಗಿಯೂ ಮನೆ ಮನೆ ತಲುಪಿದೆ. ಇಷ್ಟು ದಿನ ನಾವಂದುಕೊಂಡಿದ್ದ ಪ್ರೇಮ ಕಥೆಯೇ ಸುಳ್ಳು ಎನ್ನುವ ಹೊಸ ಹೇಳಿಕೆ ಈಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.

ರಾಜಸ್ಥಾನ ರಾಜ್ಯಪಾಲ ಹರಿಭಾವು ಬಾಗಡೆ (r Rajasthan Governor Haribhavu Bagde), ನಾವು ತಿಳಿದಿರುವ ಜೋಧಾ ಹಾಗೂ ಅಕ್ಬರ್ ಪ್ರೇಮ ಕಥೆ ಸುಳ್ಳು ಎಂದಿದ್ದಾರೆ. ಇತಿಹಾಸ ಪುಸ್ತಕಗಳಲ್ಲಿ ದಾಖಲಾಗಿರುವ ಜೋಧಾ ಮತ್ತು ಅಕ್ಬರ್ ವಿವಾಹದ ಬಗ್ಗೆ ಹೊಸ ವಿವಾದವನ್ನು ಅವರು ಹುಟ್ಟುಹಾಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹರಿಭಾವು, ಇದು ಸುಳ್ಳು. ಜೋಧಾ ಮತ್ತು ಅಕ್ಬರ್ ವಿವಾಹ ಐತಿಹಾಸಿಕವಲ್ಲ. ಬ್ರಿಟಿಷ್ ಇತಿಹಾಸಕಾರರ ಪ್ರಭಾವದಿಂದ ಭಾರತೀಯ ಇತಿಹಾಸದಲ್ಲಿ ದಾಖಲಾಗಿರುವ ಸುಳ್ಳನ್ನು ಆಧರಿಸಿದ ಕಥೆ ಎಂದಿದ್ದಾರೆ.

ಜೋಧಾ ಮತ್ತು ಅಕ್ಬರ್ ಮದುವೆಯಾದ್ರು ಎನ್ನಲಾಗುತ್ತದೆ. ಅದ್ರ ಮೇಲೆ ಸಿನಿಮಾ ಕೂಡ ನಿರ್ಮಾಣ ಆಗಿದೆ. ಆದ್ರೆ ಇದು ಸುಳ್ಳು. ಅಕ್ಬರ್ನಾಮದಲ್ಲಿ ಈ ವಿವಾಹದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅಮೆರ್ ಆಡಳಿತಗಾರ ಭರ್ಮಲ್, ಅಕ್ಬರ್ ಜೊತೆ ರಾಜಕುಮಾರಿ ಜೋಧಾರನ್ನಲ್ಲ ಬದಲಾಗಿ ತಮ್ಮ ಸೇವಕಿಯ ಮಗಳನ್ನು ಮದುವೆ ಮಾಡಿಸಿದ್ದ ಎಂದು ರಾಜ್ಯಪಾಲರ ಬಾಗ್ಡೆ ಹೇಳಿದ್ದಾರೆ. ಬ್ರಿಟಿಷ್ ಬರವಣಿಗೆಯನ್ನು ಪ್ರಶ್ನಿಸಿದ ಅವರು, ವಸಾಹತುಶಾಹಿ ಇತಿಹಾಸಕಾರರ ಪ್ರಭಾವದಿಂದಾಗಿ, ಭಾರತೀಯ ಇತಿಹಾಸದಲ್ಲಿನ ಅನೇಕ ಸಂಗತಿಗಳನ್ನು ತಿರುಚಲಾಗಿದೆ. ಸುಳ್ಳು ಕಥೆಗಳನ್ನು ಪ್ರಚಾರ ಮಾಡಲಾಗಿದೆ ಎಂದಿದ್ದಾರೆ.

ಬ್ರಿಟಿಷರು ಭಾರತೀಯ ಯೋಧರ ಇತಿಹಾಸವನ್ನು ತಿರುಚಿದರು ಮತ್ತು ಅವರು ಬರೆದ ಇತಿಹಾಸವನ್ನು ದೀರ್ಘಕಾಲದವರೆಗೆ ಸತ್ಯವೆಂದು ಪರಿಗಣಿಸಲಾಗಿತ್ತು ಎಂದು ರಾಜ್ಯಪಾಲ ಹರಿಭಾವು ಬಾಗ್ಡೆ ಹೇಳಿದ್ದಾರೆ. ಇತಿಹಾಸವನ್ನು ಬರೆದ ಭಾರತೀಯರು ಸಹ ಬ್ರಿಟಿಷ್ ದೃಷ್ಟಿಕೋನದಿಂದ ಪ್ರಭಾವಿತರಾಗಿದ್ದರು ಎಂದು ಹರಿಭಾವು ಆರೋಪಿಸಿದ್ದಾರೆ.

ಮೊಘಲ್ ಚಕ್ರವರ್ತಿ ಅಕ್ಬರ್ ಮತ್ತು ರಜಪೂತ ನಾಯಕ ಮಹಾರಾಣಾ ಪ್ರತಾಪ್ಗೆ ಸಂಬಂಧಿಸಿದ ಐತಿಹಾಸಿಕ ಘಟನೆಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸುವಾಗ, ಮಹಾರಾಣಾ ಪ್ರತಾಪ್ ಅಕ್ಬರ್ಗೆ ಒಪ್ಪಂದ ಪತ್ರವನ್ನು ಕಳುಹಿಸಿದ್ದಾರೆ ಎಂಬ ಹೇಳಿಕೆ ಸಂಪೂರ್ಣವಾಗಿ ದಾರಿತಪ್ಪಿಸುವಂತಿದೆ ಎಂದು ರಾಜ್ಯಪಾಲ ಬಾಗ್ಡೆ ಹೇಳಿದರು. ಮಹಾರಾಣಾ ಪ್ರತಾಪ್ ಎಂದಿಗೂ ತನ್ನ ಸ್ವಾಭಿಮಾನವನ್ನು ರಾಜಿ ಮಾಡಿಕೊಳ್ಳಲಿಲ್ಲ. ಇತಿಹಾಸ ಅಕ್ಬರ್ ಬಗ್ಗೆ ಹೆಚ್ಚಿನದನ್ನು ಹೇಳುತ್ತದೆ, ಮಹಾರಾಣಾ ಪ್ರತಾಪ್ ಬಗ್ಗೆ ಬಹಳ ಕಡಿಮೆ ವಿಷ್ಯವನ್ನು ನಮಗೆ ತಿಳಿಸುತ್ತದೆ ಎಂಬುದು ನೋವಿನ ಸಂಗತಿ, ದುರದೃಷ್ಟಕರ ಎಂದು ಹರಿಭಾವು ಹೇಳಿದ್ದಾರೆ.

1569 ರಲ್ಲಿ ಮೊಘಲ್ ಚಕ್ರವರ್ತಿ ಅಕ್ಬರ್ ಮತ್ತು ಅಮೇರ್ನ ರಾಜ ಭರ್ಮಲ್ನ ಮಗಳ ನಡುವಿನ ಐತಿಹಾಸಿಕ ವಿವಾಹದ ಬಗ್ಗೆ ಮತ್ತೆ ಚರ್ಚೆಗೆ ನಾಂದಿ ಹಾಡಿದೆ. ಈಗ ಜೈಪುರದ ಬಳಿ ಇರುವ ಅಮೇರ್, ಕಚ್ವಾಹ ರಜಪೂತರ ರಾಜಧಾನಿಯಾಗಿತ್ತು. ನಂತರ ಸವಾಯಿ ಜೈ ಸಿಂಗ್ II. 1727 ರಲ್ಲಿ ರಾಜಧಾನಿಯನ್ನು ಜೈಪುರಕ್ಕೆ ಬದಲಾಯಿಸಿದ್ದರು ಎಂದು ಹರಿಭಾವು, ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಮಹಾರಾಣಾ ಪ್ರತಾಪ್ ಅವರನ್ನು ದೇಶಭಕ್ತಿ ಮತ್ತು ಶೌರ್ಯದ ಸಂಕೇತಗಳೆಂದು ಬಣ್ಣಿಸಿದ್ರು. ರಾಜ್ಯಪಾಲರು, ಈ ಇಬ್ಬರು ಮಹಾನ್ ವೀರರು ಒಂದೇ ಅವಧಿಯಲ್ಲಿದ್ದಿದ್ದರೆ, ಭಾರತದ ಇತಿಹಾಸವು ಸಂಪೂರ್ಣವಾಗಿ ವಿಭಿನ್ನವಾಗಿರುತ್ತಿತ್ತು.ಇಬ್ಬರ ಜನನದ ನಡುವೆ 90 ವರ್ಷಗಳ ಅಂತರವಿತ್ತು, ಆದರೆ ಇಬ್ಬರನ್ನೂ ದೇಶಭಕ್ತಿ ಮತ್ತು ಧೈರ್ಯದ ಸಂಕೇತಗಳಾಗಿ ಸಮಾನವಾಗಿ ನೋಡಲಾಗುತ್ತದೆ ಎಂದು ಅವರು ಹೇಳಿದ್ರು.