Asianet Suvarna News Asianet Suvarna News

ಕ್ಯಾ ಬಾತ್: ಠಾಕ್ರೆ ಸರ್ಕಾರದಲ್ಲಿ ಅಜಿತ್ ಪವಾರ್ ಮತ್ತೆ ಡಿಸಿಎಂ!

ಮಹಾರಾಷ್ಟ್ರದಲ್ಲಿ ಅಂತ್ಯಗೊಂಡ ರಾಜಕೀಯ ಹೈಡ್ರಾಮಾ| ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೖತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ| ಠಾಕ್ರೆ ಸರ್ಕಾರದಲ್ಲಿ ಅಜಿತ್ ಪವಾರ್’ಗೆ ಮತ್ತೆ ಉಪಮುಖ್ಯಮಂತ್ರಿ ಹುದ್ದೆ ಸಿಗುವ ಸಾಧ್ಯತೆ| ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಣಯ ಎಂದ ಅಜಿತ್ ಪವಾರ್| 

Ajit Pawar May Get DCM Post In Uddhav Thackeray Govt
Author
Bengaluru, First Published Nov 28, 2019, 6:02 PM IST

ಮುಂಬೈ(ನ.28): ಮಹಾರಾಷ್ಟ್ರದಲ್ಲಿ ಕೊನೆಗೂ ರಾಜಕೀಯ ಹೈಡ್ರಾಮಾ ಅಂತ್ಯಗೊಂಡಿದೆ. ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ.

ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಇಂದು ಸಂಜೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

ಈ ಮಧ್ಯೆ ಬಿಜೆಪಿ ಸಾಂಗತ್ಯ ಬೆಳೆಸಿ ದೇವೇಂದ್ರ ಫಡ್ನವೀಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಎನ್’ಸಿಪಿ ಯ ಅಜಿತ್ ಪವಾರ್, ಮತ್ತೆ ಠಾಕ್ರೆ ಸರ್ಕಾರದಲ್ಲಿ ಡಿಸಿಎಂ ಹುದ್ದೆ ಪಡೆಯಲಿದ್ದಾರೆ ಎನ್ನಲಾಗಿದೆ.

ಉದ್ಧವ್ ಠಾಕ್ರೆ ಸೋದರತ್ತೆ ಸುಪ್ರಿಯಾ ಸುಳೆ ಅತ್ತೆ: ಫ್ಯಾಮಿಲಿ ಒಂದಾಗಲ್ವೆ ಮತ್ತೆ?

ಎನ್’ಸಿಪಿ ಯ ಮೂಲ ಬಣಕ್ಕೆ ವಾಪಸ್ ಆಗಿರುವ ಅಜಿತ್ ಪವಾರ್ ಅವರನ್ನು ಮತ್ತೆ ಡಿಸಿಎಂ ಮಾಡುವ ಇರಾದೆ ಶರದ್ ಪವಾರ್ ಅವರದ್ದು ಎನ್ನಲಾಗಿದೆ.

ಆದರೆ ಇಂದು ನಡೆಯುವ ಪ್ರಮಾಣವಚನ ಸಮಾರಂಭದಲ್ಲಿ ಅಜಿತ್ ಪ್ರತಿಜ್ಞಾವಿಧಿ ಸ್ವೀಕರಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಕುರಿತು ಖುದ್ದು ಸ್ಪಷ್ಟನೆ ನೀಡಿರುವ ಅಜಿತ್, ಮೂರು ಪಕ್ಷಗಳ 6 ಶಾಸಕರು ಮಾತ್ರ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಇನ್ಮುಂದೆ ಠಾಕ್ರೆ ಸರ್ಕಾರ್‌

ಡಿಸಿಎಂ ಹುದ್ದೆ ಕುರಿತು ಕೇಳಲಾದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಅಜಿತ್, ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Follow Us:
Download App:
  • android
  • ios