Asianet Suvarna News Asianet Suvarna News

ನೀರಾವರಿ ಹಗರಣದಲ್ಲಿ ಅಜಿತ್ ಪವಾರ್‌ಗೆ ಕ್ಲಿನ್‌ಚಿಟ್ ನೀಡಿದ ಎಸಿಬಿ!

ವಿದರ್ಭ ನೀರಾವರಿ ಹಗರಣದಲ್ಲಿ ಅಜಿತ್ ಪವಾರ್‌ಗೆ ಕ್ಲಿನ್‌ಚಿಟ್| ಅಜಿತ್ ಪವಾರ್‌ಗೆ ಕ್ಲಿನ್‌ಚಿಟ್ ನೀಡಿದ ಮಹಾರಾಷ್ಟ್ರ ಭ್ರಷ್ಟಾಚಾರ ವಿರೋಧಿ ದಳ| ನಾಗಪುರ್ ನ್ಯಾಯಪೀಠಕ್ಕೆ ಎಸಿಬಿ ಅಫಿಡವಿಟ್| ನೀರಾವರಿ ಹಗರಣಗಳಲ್ಲಿ ಅಜಿತ್​ ಪವಾರ್ ಪಾತ್ರವಿಲ್ಲ ಎಂದ ಎಸಿಬಿ| ಎಸಿಬಿ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದಿದೆ ಎಂಬ ಆರೋಪ|

Ajit Pawar Gets Clean Chit In Vidarbha Irrigation Scam
Author
Bengaluru, First Published Dec 6, 2019, 3:08 PM IST

ಮುಂಬೈ(ಡಿ.06): ಮಹತ್ವದ ಬೆಳವಣಿಗೆಯೊಂದರಲ್ಲಿ ವಿದರ್ಭ ನೀರಾವರಿ ಹಗರಣದ ಪ್ರಮುಖ ಆರೋಪಿಯಾಗಿದ್ದ ಎನ್​ಸಿಪಿ ನಾಯಕ ಅಜಿತ್ ಪವಾರ್‌ಗೆ, ಮಹಾರಾಷ್ಟ್ರ ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ)  ಕ್ಲಿನ್‌ಚಿಟ್ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್​ನ ನಾಗಪುರ್ ನ್ಯಾಯಪೀಠಕ್ಕೆ ಎಸಿಬಿ ಅಫಿಡವಿಟ್ ಸಲ್ಲಿಸಿದ್ದು, ವಿದರ್ಭ ಪ್ರದೇಶದಲ್ಲಿ ನಡೆದಿರುವ ನೀರಾವರಿ ಹಗರಣಗಳಲ್ಲಿ ಅಜಿತ್​ ಪವಾರ್ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಜಿತ್‌ ಪವಾರ್‌ ಅವಧಿಯ 9 ನೀರಾವರಿ ಹಗರಣಗಳ ತನಿಖೆಗೆ ತಿಲಾಂಜಲಿ!

ಅಜಿತ್ ಪವಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಮಹಾರಾಷ್ಟ್ರದ ಅತ್ಯಂತ ಬರಪೀಡಿತ ಪ್ರದೇಶವಾದ ವಿದರ್ಭದಲ್ಲಿ ಹಲವು ನೀರಾವರಿ ಯೋಜನೆಗಳು ಜಾರಿಯಾಗಿದ್ದವು. ಆದರೆ ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಎಸಿಬಿಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಭ್ರಷ್ಟಾಚಾರದಲ್ಲಿ ಅಜಿತ್ ಪವಾರ್ ಪಾತ್ರವನ್ನು ನಿರಾಕರಿಸಿರುವ ಎಸಿಬಿ, ಕ್ಲಿನ್‌ಚಿಟ್ ನೀಡುವ ಮೂಲಕ ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದಿದೆ ಎಂಬ ಆರೋಪಕ್ಕೆ ಗುರಿಯಾಗಿದೆ.

9 ನೀರಾವರಿ ಹಗರಣ ಪ್ರಕರಣ ಹಿಂಪಡೆದ ಎಸಿಬಿ: ಇದು ಪವಾರ್ ಪವರ್?

Follow Us:
Download App:
  • android
  • ios