Asianet Suvarna News Asianet Suvarna News

9 ನೀರಾವರಿ ಹಗರಣ ಪ್ರಕರಣ ಹಿಂಪಡೆದ ಎಸಿಬಿ: ಇದು ಪವಾರ್ ಪವರ್?

ಮುಂದುವರೆದ ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ| ನೀರಾವರಿ ಹಗರಣದ ಪ್ರಮುಖ 9 ಪ್ರಕರಣ ಕೈಬಿಟ್ಟ ಎಸಿಬಿ| ಅಜಿತ್ ಪವಾರ್ ವಿರುದ್ಧ ಕೇಳಿ ಬಂದಿದ್ದ 70 ಸಾವಿರ ಕೋಟಿ ರೂ. ನೀರಾವರಿ ಹಗರಣ| ಅಜಿತ್ ಪವಾರ್ ವಿರುದ್ಧದ ಪ್ರಕರಣ ಕೈ ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ ಎಸಿಬಿ| ಅಜಿತ್ ಪವಾರ್ ವಿರುದ್ಧ 2014ರಲ್ಲಿ ತನಿಖೆಗೆ ಆದೇಶಿಸಿದ್ದ ದೇವೇಂದ್ರ ಫಡ್ನವೀಸ್|

9 Irrigation Scam Cases Closed By Maharashtra ACB
Author
Bengaluru, First Published Nov 25, 2019, 5:29 PM IST

ಮುಂಬೈ(ನ.25):ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರವೂ ಸೇರಿದಂತೆ ದೇಶಾದ್ಯಂತ ಸದ್ದು ಮಾಡಿದ್ದ ನೀರಾವರಿ ಹಗರಣದ ಪ್ರಮುಖ 9 ಪ್ರಕರಣಗಳನ್ನು, ಮಹಾರಾಷ್ಟ್ರ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಕೈ ಬಿಟ್ಟಿದೆ.

 ಮಹಾರಾಷ್ಟ್ರದಲ್ಲಿ ಎನ್’ಸಿಪಿಯ ಅಜಿತ್ ಪವಾರ್ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ ಬೆನ್ನಲ್ಲೇ, ನೀರಾವರಿ ಹಗರಣದ ಪ್ರಮುಖ 9 ಪ್ರಕರಣಗಳು ಮೂಲೆ ಸೇರಿರುವುದು ಕುತೂಹಲ ಮೂಡಿಸಿದೆ.

ಅಜಿತ್‌ ಮೇಲೆ ಭ್ರಷ್ಟಾಚಾರ ಆರೋಪ ಮಾಡಿ ತನಿಖೆಗೆ ಆದೇಶಿಸಿದ್ದು ಇದೇ ಫಡ್ನವೀಸ್‌!

ಆದರೆ ಅಜಿತ್ ಪವಾರ್ ವಿರುದ್ಧ ದಾಖಲಾದ ಪ್ರಕರಣಗಳನ್ನು ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿರುವ ಎಸಿಬಿ, ವಿಚಾರಣಾ ಹಂತದಲ್ಲಿ ದೋಷರಹಿತ ಎಂದು ಕಂಡುಬಂದ ಪ್ರಕರಣಗಳಿಗೆ ಇತಿಶ್ರೀ ಹಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಅಜಿತ್ ಪ್ರವಾರ್ ವಿರುದ್ಧದ ಒಂದೇ ಒಂದು ಪ್ರಕರಣವನ್ನು ಕೈಬಿಟ್ಟಿಲ್ಲ ಎಂದಿರುವ ಎಸಿಬಿ, ಪ್ರಕರಣದ ವಿಚಾರಣೆ ಯಥಾ ಪ್ರಕಾರ ನಡೆಯಲಿದೆ ಎಂದು ಭರವಸೆ ನೀಡಿದೆ.

ಅಜಿತ್ ಸೆಳೆದುಕೊಂಡ ಬಿಜೆಪಿ ಎದುರಿದೆ 'ಕಳಂಕ' ಅಳಿಸುವ ಹೊಣೆ!

ಅಜಿತ್ ಪವಾರ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಬಿಜೆಪಿ, ಇದೀಗ ಅದೇ ಪವಾರ್ ಜೊತೆ ಸರ್ಕಾರ ರಚಿಸಿರುವುದು ವಿಚಿತ್ರ ನಡೆಯಾಗಿದೆ.

2014ರಲ್ಲಿ ಫಡ್ನವೀಸ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮರುಕ್ಷಣವೇ, ಅಜಿತ್ ಪವಾರ್ ವಿರುದ್ಧ ತನಿಖೆಗೆ ಆದೇಶ ನೀಡಿದ್ದರು. ಇದೀಗ ಅಜಿತ್ ಪವಾರ್ ಫಡ್ನವೀಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ.

ಹಗರಣಗಳ ಸರದಾರ 'ಮಹಾ' ಸರ್ಕಾರದ 'ಕಿಂಗ್ ಮೇಕರ್' ಅಜಿತ್ ಪವಾರ್!

Follow Us:
Download App:
  • android
  • ios