ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ 5 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಬಾರಾಮತಿಯಲ್ಲಿ ಪತನಗೊಂಡಿದೆ. ಮುಂಬೈನಿಂದ ಬಾರಾಮತಿಗೆ ತೆರಳುತ್ತಿದ್ದ ವೇಳೆ ಲ್ಯಾಂಡಿಂಗ್ ಸಮಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.
ಮುಂಬೈ (ಜ.28): ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 5 ಪ್ರಯಾಣಿಕರು ಸಾವು ಕಂಡಿದ್ದಾರೆ ಎಂದು ನಾಗರೀಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ಅಜಿತ್ ಪರವಾರ್ ಸೇರಿದಂತೆ 5 ಸಿಬ್ಬಂದಿಗಳನ್ನು ವಿಮಾನ ಹೊತ್ತೊಯ್ಯುತ್ತಿತ್ತು ಎಂದು ತಿಳಿಸಲಾಗಿದೆ. ಮುಂಬೈನಿಂದ ಬಾರಾಮತಿಗೆ ವಿಮಾನ ತೆರಳುತ್ತಿದ್ದ. ಏರ್‌ಕ್ರಾಫ್ಟ್ ಲ್ಯಾಂಡಿಂಗ್ ಆಗುವ ವೇಳೆ ಬಾರಾಮತಿ ವಿಮಾನ ನಿಲ್ದಾಣ ಸಮೀಪದ ಹೊಲದಲ್ಲಿ ಅಪಘಾತಕ್ಕೆ ಈಡಾಗಿದೆ ಎಂದು ಡಿಜಿಸಿಎ ತಿಳಿಸಿದೆ.
ಇಂದು ಬೆಳಗ್ಗೆ 8.30ಕ್ಕೆ ದುರಂತ ಸಂಭವಿಸಿದೆ ಎಂದು ಡಿಜಿಸಿಎ ತಿಳಿಸಿದೆ. ಬಾರಾಮತಿಯಲ್ಲಿ ಅಪಘಾತಕ್ಕೀಡಾದ ವಿಮಾನದ ಬಗ್ಗೆ ಮಾಹಿತಿ ನೀಡಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಮಾನದಲ್ಲಿ ಇನ್ನೂ 2 ಸಿಬ್ಬಂದಿ (1 ಪಿಎಸ್ಒ ಮತ್ತು 1 ಅಟೆಂಡೆಂಟ್) ಮತ್ತು 2 ಸಿಬ್ಬಂದಿ (ಪಿಐಸಿ+ಎಫ್‌ಒ) ಸದಸ್ಯರೊಂದಿಗೆ ಇದ್ದರು. ಆರಂಭಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿದ್ದ ಯಾರೂ ಅಪಘಾತದಲ್ಲಿ ಬದುಕುಳಿದಿಲ್ಲ ಎಂದು ಹೇಳಿದೆ.
ಡಿಜಿಸಿಎ ನೀಡಿರುವ ಮಾಹಿತಿ
ಮುಂಬೈನಿಂದ ಬೆಳಗ್ಗೆ 8.10ಕ್ಕೆ ವಿಮಾನ ಬಾರಾಮತಿ ಕಡೆ ಪ್ರಯಾಣ ಮಾಡಿತ್ತು. ಇನ್ನೇನು ಬಾರಾಮತಿಯಲ್ಲಿ ಲ್ಯಾಂಡಿಂಗ್ ಆಗಬೇಕು ಎನ್ನುವಾಗ ಈ ಅಪಘಾತ ಸಂಭವಿಸಿದೆ. 45XR ಮಾದರಿಯ ಸಣ್ಣ ಏರ್‌ಕ್ರಾಫ್ಟ್ ಇದಾಗಿದ್ದು, ಬೆಳಗ್ಗೆ 8.10ಕ್ಕೆ ಮುಂಬೈನಿಂದ ಹೊರಟಿತ್ತು. ಬಾರಾಮತಿ ವಿಮಾನ ನಿಲ್ದಾಣದ ಸಮೀಪವಿರುವ ಹೊಲದಲ್ಲಿ ಇದು ಅಪಘಾತಕ್ಕೆ ಈಡಾಗಿದೆ. ವರದಿಗಳ ಪ್ರಕಾರ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ಪವಾರ್ ನಾಲ್ಕು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಬೇಕಿತ್ತು.
ಸ್ಥಳದಿಂದ ಕಾಣುವ ದೃಶ್ಯಗಳಲ್ಲಿ ಬೆಂಕಿ ಮತ್ತು ಹೊಗೆ, ನಜ್ಜುಗುಜ್ಜಾದ ವಿಮಾನದ ಅವಶೇಷಗಳು ಮತ್ತು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸುವ ಆಂಬ್ಯುಲೆನ್ಸ್‌ಗಳು ಕಾಣುತ್ತಿವೆ. ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಆರೂ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.


