ನವದೆಹಲಿ(ಫೆ. 26) ದೆಹಲಿಯಲ್ಲಿನ ಹಿಂಸಾಚಾರವನ್ನು ಕಂಟ್ರೋಲ್ ಗೆ ತರುವ ಹೊಣೆಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ಅವರಿಗೆ ವಹಿಸಲಾಗಿದೆ.ಕಳೆದ ನಾಲ್ಕು ದಿನಗಳಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ದೇಶದ್ರೋಹಿಗಳ ಪುಂಡಾಟ ತಡೆಯಲು ಸ್ವತಃ ಅಜಿತ್ ದೋವೆಲ್ ಅಖಾಡಕ್ಕೆ ಇಳಿದಿದ್ದಾರೆ.

"

ಗುಂಪುಘರ್ಷಣೆಯುಲ್ಲಿ ಇದುವರೆಗೆ ಪೊಲೀಸ್ ಸಿಬ್ಬಂದಿ ಸೇರಿದಂತೆ 20 ಜನ ಪ್ರಾಣ ಕಳೆದುಕೊಂಡಿದ್ದಾರೆ. ಜವಾಬ್ದಾರಿ ವಹಿಸಿಕೊಂಡ ತಕ್ಷಣವೇ ದೋವೆಲ್ ದೆಹಲಿಯ ಗಲಭೆ ಪೀಡಿತ ಪ್ರದೇಶಗಳಲ್ಲಿ ರಾತ್ರಿಯೇ ರೌಂಡ್ಸ್ ಹಾಕಿ ಮಾಹಿತಿ ಕಲೆಹಾಕಿದ್ದಾರೆ.

ದೆಹಲಿ ಜನರ ಪ್ರಾಣ ಹೀರಿದ ಹಿಂಸಾಚಾರ

ದೋವೆಲ್‌ ಗೆ ದೆಹಲಿಯ ಕಮಿಷನರ್ ಅಮೂಲ್ಯಾ ಪಟ್ನಾಯಕ್ ಮತ್ತು ವಿಶೇಷ ಕಮಿಷನರ್ ಎಸ್ ಎನ್ ಶ್ರೀನಿವಾಸ ಸಾಥ್ ನೀಡಿದ್ದಾರೆ.

ಗಲಭೆ ಪೀಡಿತ ಜಫಾರಾಬಾದ್ ಮತ್ತು ಸೇಲಂಪುರದಲ್ಲಿ ದೋವೆಲ್ ರೌಂಡ್ಸ್ ಹಾಕಿದ್ದು ವಿಶೇಷ ತಂಡಗಳ ಮೂಲಕ ಮುಂದಿನ ಕಾರ್ಯನಿಯೋಜನೆ ಹಾಕಿಕೊಂಡಿದ್ದಾರೆ.

"