ಗುವಾಹಟಿ (ಜ.23): ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮಸೀದಿಗಳನ್ನು ನಾಶಮಾಡಲಿದ್ದು, ಮಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದಕ್ಕೆ, ಪುರುಷರು ತಲೆಯ ಮೇಲೆ ಬಿಳಿ ಟೋಪಿ ಹಾಕುವುದಕ್ಕೆ, ಗಡ್ಡ ಬೆಳೆಸುವುದಕ್ಕೆ ಹಾಗೂ ಆಝಾನ್‌ ಕೂಗುವುದಕ್ಕೆ ನಿಷೇಧ ಹೇರಲಿದೆ ಎಂದು ಆಲ್‌ ಇಂಡಿಯಾ ಯುನೈಟೆಡ್‌ ಡೆಮೊಕ್ರಟಿಕ್‌ ಫ್ರಂಟ್‌ನ ಅಧ್ಯಕ್ಷ ಬಾಬರುದ್ದೀನ್‌ ಅಜ್ಮಲ್‌ ವಿವಾದಿತ ಹೇಳಿಕೆ ನೀಡಿದ್ದಾರೆ.

ಯು.ಪಿ ಲವ್‌ ಜಿಹಾದ್‌ ಕೇಸಲ್ಲಿ ಕರ್ನಾಟಕದ ಮುಸ್ಲಿಂ ವ್ಯಕ್ತಿ ಬಂಧನ ...

ಅಸ್ಸಾಂನ ಧುಬ್ರಿ ಕ್ಷೇತ್ರದ ಸಂಸದರಾಗಿರುವ ಅಜ್ಮಲ್‌, ಗೌರಿಪುರದಲ್ಲಿ ಆಯೋಜಿಸಿದ್ದ ರಾರ‍ಯಲಿಯಲ್ಲಿ ಮಾತನಾಡಿ, ‘ನಿಮಗೆ ಈ ರೀತಿ ಬದುಕಲು ಸಾಧ್ಯವಿದೆಯೇ?’ ಎಂದು ಜನರನ್ನು ಪ್ರಶ್ನಿಸಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಆರಂಭಿಸಿದ RSS ಮುಸ್ಲಿಂ ವಿಭಾಗ!

ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆಯಿಂದಲೇ ಸುದ್ದಿ ಆಗುವ ಅಜ್ಮಲ್‌, ಏಪ್ರಿಲ್‌- ಮೇನಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಮತಗಳ ಧ್ರುವೀಕರಿಸುವ ಉದ್ದೇಶದಿಂದ ನೀಡಿರುವ ಹೇಳಿಕೆ ಭಾರೀ ಟೀಕೆಗೆ ಗುರಿಯಾಗಿದೆ.