ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಆರಂಭಿಸಿದ RSS ಮುಸ್ಲಿಂ ವಿಭಾಗ!
ನಮ್ಮ ಆಚಾರ ವಿಚಾರಗಳು ಬೇರೆಯಾಗಿದೆ. ನಮ್ಮ ಧರ್ಮ ಬೇರೆಯಾಗಿದೆ. ಆದರೆ ನಮ್ಮ ಪೂರ್ವಜರು ಒಬ್ಬರೇ. ಇದು ರಾಮ ಮಂದಿ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಆರಂಭಿಸಿದ ಆರ್‌ಎಸ್ಎಸ್ ಮುಸ್ಲಿಂ ವಿಭಾಗದ ಮಾತು.
ಜಬಲ್‌ಪುರ್(ಜ.22); ರಾಷ್ಟ್ರೀಯ ಸ್ವಂಯ ಸೇವಕ ಸಂಘಟನೆ(RSS)ಗೆ ಸೇರಿದ ಮುಸ್ಲಿಂ ವಿಭಾಗ ಇದೀಗ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಆರಂಭಿಸಿದೆ. ಮದ್ಯಪ್ರದೇಶದ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ RSS ಮುಸ್ಲಿಂ ವಿಭಾಗ ರಾಮ ಮಂದಿರಕ್ಕಾಗಿ ದೇಣಿಗೆ ಸಂಗ್ರಹಿಸಲಿದೆ. ಇದಕ್ಕಾಗಿ ಹಲವು ತಂಡಗಳನ್ನು ರಚಿಸಲಾಗಿತ್ತು. ಮುಸ್ಲಿಂ ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹ ಮಾಡಲಿದೆ.
ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ ಗೌತಮ್ ಗಂಭೀರ್!.
ನಾವೆಲ್ಲ ಒಂದೇ ಕುಟುಂಬದವರು. ನಾವು ಅರಬ್‌ನಿಂದ ಬಂದಿರಬಹುದು, ಅಥವಾ ರೋಮ್‌ನಿಂದ ಭಾರತಕ್ಕೆ ಬಂದವರಾಗಿರಬಹುದು. ಆದರೆ ನಮ್ಮ ಪೂರ್ವಜರೆಲ್ಲಾ ಒಂದೆ. ನಾವು ಭಾರತೀಯರು ಎಂದು RSS ಮುಸ್ಲಿಂ ವಿಭಾಗದ ನ್ಯಾಶನಲ್ ಕಾರ್ಡಿನೇಟರ್ ಎಸ್‌ಕೆ ಮುದ್ದೀನ್ ಹೇಳಿದ್ದಾರೆ. ಮುಸ್ಲಿಂ ಸಮುದಾಯದ ಹಲವರು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಲು ಸಿದ್ದರಿದ್ದಾರೆ ಎಂದಿದ್ದಾರೆ.
ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಜನವರಿ 14 ರಂದು ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಣಿಗೆ ಸಂಗ್ರಹ ಕಾರ್ಯಕ್ರಮ ಆರಂಭಿಸಿದೆ. ಫೆಬ್ರವರಿ ಕೊನೆಯ ವಾರದ ವರೆಗೆ ನಡೆಯಿಲಿರುವ ಈ ದೇಣಿಗೆ ಕಾರ್ಯಕ್ರಮದಲ್ಲಿ ದೇಶದ ಮೂಲೆ ಮೂಲೆಗೂ ಕಾರ್ಯಕರ್ತರು ತೆರಳಿ ಹಣ ಸಂಗ್ರಹ ಮಾಡಲಿದ್ದಾರೆ. ಆರಂಭಿಕ 3 ದಿನದಲ್ಲಿ 100 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ.