ಲಕ್ಷದ್ವೀಪ ಆಡಳಿತಾಧಿಕಾರಿ ವಿರುದ್ಧ ಜೈವಿಕ ಅಸ್ತ್ರ ಪ್ರಯೋಗಿಸಿದ ನಟಿ ದೇಶ ದ್ರೋಹ ಪ್ರಕರಣ ದಾಖಲಾದ ಕಾರಣ ಬಂಧನ ಭೀತಿ ಕೇರಳ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದ ಆಯಿಷಾ

ಕೇರಳ(ಜೂ.17): ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಪುಲ್ ಪಟೆಲ್ ಖೋಡಾ ವಿರುದ್ಧ ಜೈವಿಕ ಅಸ್ತ್ರ ಪದ ಪ್ರಯೋಗಿಸಿದ ನಟಿ ಆಯಿಷಾ ಸುಲ್ತಾನ್ ವಿರುದ್ದ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಪರಿಣಾಮ ಬಂಧನ ಭೀತಿ ಎದುರಿಸಿದ್ದರು. ಆದರೆ ಕೇರಳ ಹೈಕೋರ್ಟ್‌ನಿಂದ ಆಯಿಷಾ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. 

ಹೊಸ ನಿಯಮದ ವಿರುದ್ಧ ಬೀದಿಗಿಳಿದ ಜನ; ಲಕ್ಷದ್ವೀಪದಲ್ಲಿ ನೀರಿನೊಳಗೆ ಪ್ರತಿಭಟನೆ!.

ಜಸ್ಟೀಸ್ ಅಶೋಕ್ ಮೆನನ್ ಪೀಠ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ ಜೂನ್ 20ರೊಳಗೆ ಕವರತ್ತಿ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಬೇಕು. ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರ್ಟ್ ಹೇಳಿದೆ. ಕೋರ್ಟ್ ಜಾಮೀನು ನೀಡುತ್ತಿದ್ದಂತೆ ಆಯಿಷಾ ನಿಟ್ಟುಸಿರು ಬಿಟ್ಟಿದ್ದಾರೆ. ಈ ಮೂಲಕ ಬಂಧನ ಭೀತಿಯಿಂದಲೂ ಪಾರಾಗಿದ್ದಾರೆ.

ಲಕ್ಷದ್ವೀಪದಲ್ಲಿ ಕೊರೋನಾ ಕುರಿತು ಸುಳ್ಳು ಮಾಹಿತಿ ಹರಡಿದ್ದಾರೆ. ಆಡಳಿತಾಧಿಕಾರಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಲಕ್ಷದ್ವೀಪ ಬಿಜೆಪಿ ನಾಯಕ ಆಯಿಷಾ ವಿರುದ್ಧ ದೂರು ದಾಖಲಿಸಿದ್ದಾರೆ. 

ನಟಿ ಆಯಿಷಾ ವಿರುದ್ಧ ದೇಶದ್ರೋಹ ಪ್ರಕರಣ; ಲಕ್ಷದ್ವೀಪದ 15 ಬಿಜೆಪಿ ನಾಯಕರು ರಾಜೀನಾಮೆ!

ಕೇಂದ್ರ ಸರ್ಕಾರ ಲಕ್ಷದ್ವೀಪ ಜನಗಳ ಮೇಲೆ ಜೈವಿಕ ಅಸ್ತ್ರ(ಕೊರೋನಾ ವೈರಸ್) ಪ್ರಯೋಗಿಸುತ್ತಿದೆ. ಆಡಳಿತಾಧಿಕಾರಿ ಪ್ರಪುಲ್ ಪಟೆಲ್ ಲಕ್ಷದ್ವೀಪ ಆಗಮಿಸುವ ಪ್ರವಾಸಿಗರ ಕ್ವಾರಂಟೈನ್ ನಿರ್ಬಂಧವನ್ನು ತೆಗೆದುಹಾಕಿದ್ದಾರೆ. ಇದರಿಂದ ಕೊರೋನಾ ಲಕ್ಷದ್ವೀಪ ಸ್ಥಳೀಯರಿಗೆ ಹರಡುತ್ತಿದೆ. ಇದು ಜೈವಿಕ ಅಸ್ತ್ರ ಬಳಸಿ ಲಕ್ಷದ್ವೀಪ ಜನರನ್ನು ಮುಗಿಸುವ ಯತ್ನ ಎಂದು ಟಿವಿ ಶೋನಲ್ಲಿ ನಟಿ ಆಯಿಯಾ ಹೇಳಿಕೆ ನೀಡಿದ್ದರು.