ಗ್ರೋಸರಿ ಖರೀದಿ, ತಿಂಡಿ ತಿನ್ನೋದಕ್ಕಿಂತ ವಿಮಾನ ಪ್ರಯಾಣ ಮಾಡಬಹುದು!
ಕೊರೋನಾ ವೈರಸ್ ಆತಂಕ / ವಿಮಾನ ಪ್ರಯಾಣ ಮಾಡಬಹುದು ಆದರೆ ಗ್ರಾಸರಿ ಖರೀದಿ ಮಾಡುವಂತಿಲ್ಲ/ ಗ್ರೋಸರಿ ಖರೀದಿಗೆ ಹೋದಾಗಲೇ ಸೋಂಕಿನ ಅಪಾಯ ಹೆಚ್ಚು/ ವಿಮಾನ ನಿಲ್ದಾಣಗಳ್ಲಲಿ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ
ಮುಂಬೈ(ಅ. 30) ಕೊರೋನಾ ವೈರಸ್ ಎರಡನೇ ಹಂತ ..ಮೂರನೇ ಹಂತ ಎದುರಾಗುತ್ತಿದೆ ಎಂಬ ಭಯ ಆವರಿಸಿರುವಾಗಲೇ ಸಮೀಕ್ಷೆಯೊಂದು ಒಂದಿಷ್ಟು ಅಂಶಗಳನ್ನು ತೆರೆದಿರಿಸಿದೆ.
ವಿಮಾನ ಪ್ರಯಾಣ ಮಾಡಿ ಬರುವುದಕ್ಕಿಂತ ಜಾಸ್ತಿ ರಿಸ್ಕ್ ಗೃಹಉಪಯೋಗಿ ವಸ್ತುಗಳ ಶಾಪಿಂಗ್ ನಲ್ಲಿದೆ ಎಂಬುದನ್ನು ಸರ್ವೆ ಒತ್ತಿ ಹೇಳಿದೆ.
ಹಾವಾರ್ಡ್ ಟಿಎಚ್ ಸ್ಕೂಲ್ ಮಾಡಿದ ಸಮೀಕ್ಷೆ ಒಂದೊಂದೆ ಅಂಶಗಳನ್ನು ಸ್ಪಷ್ಟಪಡಿಸಿದೆ. ವಿಮಾನ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಸರಿಯಾದ ರೀತಿ ವಿಮಾನ ನಿಲ್ದಾಣಗಳು ಕೆಲಸ ಮಾಡುತ್ತಿವೆ.. ಹಾಗಾಗಿ ಇಲ್ಲಿಯೇ ರಿಸ್ಕ್ ಕಡಿಮೆ.
ವಿಮಾನ ನಿಲ್ದಾಣಗಳು ಮಾಸ್ಕ್ ಮತ್ತು ಸೋಶಿಯಲ್ ಡಿಸ್ಟಂಸಿಂಗ್ ಇಟ್ಟುಕೊಂಡು ಕೆಲಸ ಮಾಡುತ್ತಿವೆ. ಬೋರ್ಡಿಂಗ್, ಡಿಪಾರ್ಚರ್ ಎಲ್ಲದರ ಮೇಲೆಯೂ ಆಯಾ ವಿಮಾನ ನಿಲ್ದಾಣಗಳು ಗಮನ ಇಟ್ಟಿದ್ದು ಸಾನಿಟೈಸ್ ಗೆ ಆದ್ಯತೆ ನೀಡುತ್ತಿವೆ .
ಸಹೋದರಿಯರ ಓದಿಗೆ ಟೀ ಮಾರಾಟ ಶುರು ಮಾಡಿದ ಬಾಲಕ
ಮಾಸ್ಕ್ ಮತ್ತು ಸಾನಿಟೈಸೇಶನ್ ಕೊರೋನಾ ಆತಂಕವನ್ನು ಸಾಕಷ್ಟು ಕಡಿಮೆ ಮಾಡುತ್ತದೆ. ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಸೋಂಕು ಹರಡುವುದನ್ನು ತಡೆಯುತ್ತದೆ ಎಂದು ಸಮೀಕ್ಷೆ ಹೇಳಿದೆ.
ಕೊರೋನಾ ವೈರಸ್ ಎರಡನೇ ಮತ್ತು ಮೂರನೇ ಹಂತಕ್ಕೆ ಕಾಲಿಟ್ಟಿದೆ ಎಂಬ ಕಾರಣಕ್ಕೆ ಫ್ರಾನ್ಸ್, ಇಸ್ರೇಲ್ ಮತ್ತು ಇಂಗ್ಲೆಂಡ್ ನಲ್ಲಿ ಮತ್ತೆ ಲಾಕ್ ಡೌನ್ ಮೊರೆ ಹೋಗಲಾಗಿದೆ. ಅನೆರಿಕದಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ.